ಏಕರೂಪ ಕಮಿಷನ್ ಜಾರಿ ಮಾಡಿ
Team Udayavani, Sep 3, 2022, 2:03 PM IST
ದೇವನಹಳ್ಳಿ : ಪಡಿತರ ವಿತರಣೆಯಲ್ಲಿ ದೇಶದಲ್ಲಿಯೇ ಒಂದೇ ಕಮಿಷನ್ ಜಾರಿಯಾಗ ಬೇಕು. ಪಡಿತರ ವಿತರಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ದೇವನಹಳ್ಳಿ ತಾಲೂಕು ಸರ್ಕಾರಿ ಪಡಿತರ ವಿತರ ಕರ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್ ಸಮಯದಲ್ಲಿ ಪ್ರಾಣದ ಹಂಗನ್ನು ತೊರೆದು ಇಡೀ ರಾಜ್ಯದಲ್ಲಿ 4 ಕೋಟಿ ಜನರಿಗೆ ಪಡಿತರ ವಿತರಣೆ ಮಾಡಿದ್ದಾರೆ.
440 ರೂ. ಕಮಿಷನ್ ಜಾರಿ ಮಾಡಿ: ಆಹಾರ ಭದ್ರತೆ ಜಾರಿಯಾದ ಮೇಲೆ 1 ಯುನಿಟ್‌ಗೆ 5 ಕೆ.ಜಿ.ವಿತರಣೆ ಜಾರಿಯಾದ ಮೇಲೆ ಕಮಿಷನ್ ಏರು ಪೇರಾಗಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಕಮಿಷನ್ ಪಡೆಯುತ್ತಿದ್ದೇವೆ. ದೇಶದಲ್ಲಿ ಒಂದೇ ಕಮಿಷನ್ ಜಾರಿಯಾಗಬೇಕು. 440 ರೂ. ಕಮಿಷನ್ ಜಾರಿ ಮಾಡಬೇಕು. ಸಗಟು ಮಳಿಗೆಗಳಿಗೆ ಒಂದು ಕ್ವಿಂಟಲ್‌ಗೆ 1 ಕೆ.ಜಿ. ವೇಸ್ಟೇಜ್ ತೆಗೆಯಬೇಕು. ವಿವಿಧ 9 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ದಿನ ಬಳಕೆ ವಸ್ತು ವಿತರಿಸಿ: ಕೇರಳದಲ್ಲಿ ಪಡಿತರದ ಜೊತೆಗೆ ನಿತ್ಯ ಬಳಕೆ ವಸ್ತುಗಳನ್ನು ಸಹ ವಿತರಿಸುತ್ತಿದ್ದಾರೆ. ಅದೇ ಮಾದರಿ ನಮ್ಮ ರಾಜ್ಯದಲ್ಲಿ ಜಾರಿಗೆ ತರಬೇಕು. ಇದರಿಂದ ಸರ್ಕಾರಕ್ಕೆ ಯಾವುದೆ ನಷ್ಟವಾಗುವುದಿಲ್ಲ. ಪಡಿತರ ವಿತರಕರಿಗೂ ಉತ್ತೇಜನ ನೀಡಿದಂತಾ ಗುತ್ತದೆ. ಹಾಗಾಗಿ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ.
1520 ಕೋಟಿ ಬಾಕಿ: ಪಡಿತರ ವಿತರಕರಿಗೆ ಬರಬೇಕಾದ ಹೆಚ್ಚುವರಿ ಕಮಿಷನ್ ಹಣ ತುರ್ತಾಗಿ ಬಿಡುಗಡೆ ಮಾಡಬೇಕು. 1520 ಕೋಟಿ 5 ತಿಂಗಳ ಬಾಕಿ ಹಣ ಆದಷ್ಟು ಬೇಗ ಬರಲಿದೆ. ಹಾಗೂ ಆಯಾ ತಿಂಗಳ ಕಮಿಷನ್ ಆಯಾ ತಿಂಗಳಲ್ಲೇ ನೀಡಬೇಕು. ಕ್ವಿಂಟಲ್‌ಗೆ 124 ರೂ.ನಂತೆ ರಾಜ್ಯಕ್ಕೆ 1536 ಕೋಟಿ 5 ತಿಂಗಳ ಕಮಿಷನ್ ಹಣ ಬಿಡುಗಡೆಯಾಗ ಬೇಕಿದೆ ಎಂದು ಹೇಳಿದರು.
ಬಾಕಿ ಕಮಿಷನ್ ತುರ್ತು ನೀಡಿ: ರಾಜ್ಯದ ಪಡಿತರ ವಿತರಕರ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ಕಮಿಷನ್ ಹಣವನ್ನು 15 ದಿನಗಳೊಳಗಾಗಿ ಪಡಿತರ ವಿತರಕರ ಖಾತೆಗೆ ಜಮಾ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗಿದೆ. ಅತೀ ಶೀಘ್ರದಲ್ಲೇ ಕಮಿಷನ್ ಹಣ ಪಾವತಿಯಾಗಲಿದೆ. ಪಡಿತರ ವಿತರಕರು ಸರ್ಕಾರದ ಕೊಂಡಿಯಂತೆ ಕೆಲಸ ನಿರ್ವಹಿಸುತಿದ್ದಾರೆ. ರಾಜ್ಯದಲ್ಲಿ ಮಾದರಿಯಾಗಿ ಪಡಿತರ ವಿತರಣೆ ಮಾಡುತ್ತಿದ್ದೇವೆ. ಕೊರೊನಾ ವೇಳೆ 4 ಕೋಟಿ 30 ಲಕ್ಷ ಜನರಿಗೆ ಪಡಿತರ ವಿತರಕರು ತಮ್ಮ ಜೀವದ ಹಂಗನ್ನು ತೊರೆದು ಪಡಿತರ ವಿತರಣೆ ಮಾಡಿದ್ದೇವೆ. ಪ್ರತಿಯೊಬ್ಬರು ಸಂಘಕ್ಕೆ ಬೆಂಬಲವಾಗಿ ನಿಲ್ಲಬೇಕು. ದೇವನಹಳ್ಳಿಯಲ್ಲಿ ಪ್ರಥಮ ವಾಗಿ ನೂತನ ಸಂಘ ಸ್ಥಾಪಿಸಿ ಉತ್ತಮ ಕೆಲಸ ಮಾಡಿದ್ದಾರೆ. ಇದರಿಂದ ಪ್ರತಿಯೊಬ್ಬರ ಸಮಸ್ಯೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ ಎಂದರು.
ಪಡಿತರ ವಿತರಕರ ಸಂಘ ಸ್ಥಾಪನೆ: ತಾಲೂಕು ಸೊಸೈಟಿ ಅಧ್ಯಕ್ಷ ಎ.ದೇವರಾಜ್ ಮಾತನಾಡಿ ತಾಲೂಕಿನಲ್ಲಿ ಪಡಿತರ ವಿತರಕರ ಸಂಘ ಸ್ಥಾಪನೆಯಾಗಿದೆ. ಪ್ರತಿ ಪಡಿತರು ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಪಡಿತರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಈ ಮೊದಲೇ ಸಂಘ ಪ್ರಾರಂಭವಾಗಬೇಕಾಗಿತ್ತು ಎಂದು ಹೇಳಿದರು.
ದೇವನಹಳ್ಳಿ ತಾಲೂಕು ಸರ್ಕಾರಿ ಪಡಿತರ ವಿತರಕರ ಸಂಘದ ಪದಾದಿಕಾರಿಗಳು: ಅಧ್ಯಕ್ಷ ಸಿ.ರಾಜಣ್ಣ, ಉಪಾಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಅನಂತಕುಮಾರ್, ಎಂ.ಕೆ. ಖಜಾಂಚಿ ಶ್ರೀ ರಾಮ, ಸದಸ್ಯರಾದ ನಾರಾಯಣ ಸ್ವಾಮಿ, ಭರತ್.ಬಿ.ಆರ್, ವೆಂಕಟೇಶ್.ಪಿ, ವಿ.ನಾಗಮ್ಮ ನೇಮಕವಾಗಿ ದ್ದಾರೆ. ಇದೆ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಮತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ಉಪನಿರ್ದೇಶಕಿ ಗಿರಿಜಾದೇವಿ, ಆಹಾರ ಶಿರಸ್ತೇದಾರ್ ಶ್ರೀಧರ್, ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ ಶ್ರೀಧರ್ ಮೂರ್ತಿ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್, ಪುರಸಭಾ ಸದಸ್ಯ ಜಿ.ಎ.ರವೀಂದ್ರ ತಾಲೂಕಿನ ಎಲ್ಲ ಪಡಿತರ ವಿತರಕರು ಹಾಗೂ ಸಹಾಯಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.