20 ವರ್ಷ ನಂತರ 1008 ಮಿಮೀ ದಾಖಲೆ ಮಳೆ
Team Udayavani, Sep 3, 2022, 4:54 PM IST
ಮಂಡ್ಯ: ಪ್ರಸ್ತುತ ವರ್ಷ ಜಿಲ್ಲಾದ್ಯಂತ ದಾಖಲೆ ಪ್ರಮಾಣದ ಮಳೆ ಆಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮೇ ನಿಂದ ಸೆ.2ರವರೆಗೂ 20 ವರ್ಷ ನಂತರ ಸರಾಸರಿ 1008 ಮಿ.ಮೀ. ಮಳೆಯಾಗಿದೆ.
ಪ್ರತಿ ವರ್ಷ ವಾಡಿಕೆಯಂತೆ ಸರಾಸರಿ 740 ಮಿ.ಮೀ. ಮಳೆ ಆಗುತ್ತಿತ್ತು. ಆದರೆ, ಜನವರಿ ತಿಂಗಳಿನಿಂದ ಸೆ.2ರವರೆಗೆ 1008 ಮಿ.ಮೀ. ಮಳೆ ಆಗಿರುವ ವರದಿಯಾಗಿದೆ. ಇದು ಪ್ರಸ್ತುತ ವರ್ಷದ ದಾಖಲೆಯಾಗಿದೆ.
ತಾಲೂಕುವಾರು ಮಳೆ ವಿವರ: ಜಿಲ್ಲಾದ್ಯಂತ ಜನವರಿಯಿಂದ ಇದುವರೆಗೂ ಶೇ.181 ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿಯೇ ಮಳೆಯಾಶ್ರಿತ ಪ್ರದೇಶ ನಾಗಮಂಗಲ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಸರಾಸರಿ 1077.3 ಮಿ.ಮೀ. ಮಳೆಯಾ ಗಿದೆ. ಕೆ.ಆರ್ .ಪೇಟೆ ತಾಲೂಕಿನಲ್ಲಿ 1075.9 ಮಿ.ಮೀ., ಮದ್ದೂರಿನಲ್ಲಿ 1032.1 ಮಿ.ಮೀ., ಮಳವಳ್ಳಿಯಲ್ಲಿ 841 ಮಿ.ಮೀ., ಮಂಡ್ಯ ತಾಲೂಕಿ ನಲ್ಲಿ 1149.3 ಮಿ.ಮೀ., ಪಾಂಡವಪುರದಲ್ಲಿ 989.6 ಮಿ.ಮೀ., ಶ್ರೀರಂಗಪಟ್ಟಣದಲ್ಲಿ 990.7 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ಏಳು ದಿನಗಳಲ್ಲಿ ಸರಾಸರಿ 100 ಮಿ.ಮೀ. ಮಳೆ ವರದಿ ಆಗಿದ್ದರೆ, ಜೂನ್ ನಿಂದ ಸೆ.2ರವರೆಗೂ ಶೇ.225 ಹೆಚ್ಚುವರಿ ಮಳೆಯಾಗಿದೆ. ಕೆ.ಆರ್.ಪೇಟೆ 606.3 ಮಿ.ಮೀ., ಮದ್ದೂರು 709.8 ಮಿ.ಮೀ., ಮಳವಳ್ಳಿ 487.5 ಮಿ.ಮೀ., ಮಂಡ್ಯ 784.6 ಮಿ.ಮೀ., ನಾಗಮಂಗಲ 711.9 ಮಿ.ಮೀ., ಪಾಂಡವಪುರ 585.6 ಮಿ.ಮೀ., ಶ್ರೀರಂಗಪಟ್ಟಣ 591.1 ಮಿ.ಮೀ. ಮಳೆ ಬಿದ್ದಿರುವ ವರದಿಯಾಗಿದೆ.
ಮಳೆಯಿಂದಾಗಿ ಕಬ್ಬು, ಭತ್ತ, ರಾಗಿ ಬಿತ್ತನೆ ಕುಂಠಿತ: ನಿರಂತರ ಸುರಿಯುತ್ತಿರುವ ಮಳೆಯಿಂದ ರೈತರ ಬಿತ್ತನೆಗೆ ಅಡ್ಡಿಯಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳು ಭತ್ತ ಬಿತ್ತನೆ ಕಾಲವಾಗಿದೆ. ಜಿಲ್ಲಾದ್ಯಂತ 1.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯಿಂದ ಹಿನ್ನಡೆಯಾಗಿದೆ. ಈಗಾಗಲೇ ಭತ್ತ ಬಿತ್ತನೆಗೆ ಒಟ್ಲು ಹಾಕಲಾಗಿತ್ತು. ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಕಬ್ಬು ಬೆಳೆ ನಾಟಿ ಮಾಡಲಾಗಿತ್ತು. ಆದರೆ, ಮಳೆ ನೀರಿನಿಂದ ಜಲಾವೃತಗೊಂಡು ಕಬ್ಬು ಕೊಳೆಯುವ ಸ್ಥಿತಿ ತಲುಪಿದೆ. ಅಲ್ಲದೆ, ರಾಗಿ ಬಿತ್ತನೆಗೂ ಮಳೆ ಅಡ್ಡಿಯಾಗಿದೆ. ಜತೆಗೆ ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದ ರೈತರು, ಮತ್ತೆ ಉಳುಮೆ ಮಾಡಿ ಹದ ಮಾಡಿ ಮತ್ತೂಮ್ಮೆ ನಾಟಿ ಮಾಡಬೇ ಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ.
20 ಟನ್ ಆಹಾರ ಉತ್ಪಾದನೆ ಕುಂಠಿತ: ವಿಪರೀತ ಮಳೆಯಿಂದ ಈಗಾಗಲೇ ಸಾಕಷ್ಟು ಬೆಳೆ ನಾಶ ವಾಗಿದೆ. ಇದರಿಂದ ಉತ್ಪಾದನೆ ಕುಂಠಿತವಾಗುವ ಎಲ್ಲಾ ಸಾಧ್ಯತೆಗಳಿವೆ. ಒಂದೆಡೆ ಮಳೆಯಿಂದ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ನಾಟಿ ಮಾಡಿರುವ ಬಿತ್ತನೆ ಹಾಳಾಗುತ್ತಿದೆ. ಇದರಿಂದ ಉತ್ಪಾದನೆ ಕುಂಠಿತ ಆಗುವ ಆತಂಕವೂ ಎದುರಾಗಲಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ 20 ಟನ್ ಆಹಾರ ಉತ್ಪಾದನೆ ಆಗುತ್ತಿತ್ತು. ಆದರೆ, ಈ ಬಾರಿ 17ರಿಂದ 18 ಟನ್ ಉತ್ಪಾದನೆ ಆಗುವ ಸಾಧ್ಯತೆ ಇದೆ.
ಕೃಷಿ ಬೆಳೆ ನಾಶ : ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಗೆ ಕೃಷಿ, ತೋಟಗಾರಿಕೆ ಬೆಳೆ ನಾಶವಾಗಿದೆ. ಕೋಟಿ ರೂ.ಗೂ ಹೆಚ್ಚು ತೋಟಗಾರಿಕೆ, 3 ಕೋಟಿ ರೂ. ಹೆಚ್ಚು ಕೃಷಿ ಬೆಳೆ ನಾಶವಾಗಿದೆ. ಅಲ್ಲದೆ, ಮನೆಗಳಿಗೂ ಹಾನಿಯಾಗಿದೆ. ಪ್ರಾಣ ಹಾನಿ, ಜಾನುವಾರು ಸಾವನ್ನಪ್ಪಿರುವ ಬಗ್ಗೆ ವರದಿ ಆಗಿದೆ.
ಪ್ರಸಕ್ತ ವರ್ಷ ದಾಖಲೆ ಮಳೆ ಸುರಿದಿದೆ. ರೈತರ ಬಿತ್ತನೆಗೆ ಅಡ್ಡಿಯಾಗಿದೆ. ಆಹಾರ ಉತ್ಪಾದನೆಯೂ ಕಡಿಮೆ ಆಗಿದೆ. ರೈತರ ಮೇಲೆ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಭತ್ತ, ಕಬ್ಬು ನಾಟಿಗೆ ಹಿನ್ನಡೆಯಾಗಿದ್ದು, ಇದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ. ಹಾಲಿ ಇರುವ ಬೆಳೆ ಸಾಕಷ್ಟು ನಷ್ಟ ಸಂಭವಿಸಿದೆ. ● ವಿ.ಎಸ್.ಅಶೋಕ್, ಕೃಷಿ ಜಂಟಿ ನಿರ್ದೇಶಕ, ಮಂಡ್ಯ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.