ಮಾಡದ ಕೆಲಸಕ್ಕೆ ಪೋಸು ಸರಿಯಲ್ಲ
Team Udayavani, Sep 3, 2022, 5:47 PM IST
ಮಸ್ಕಿ: ವೆಂಕಟಾಪುರ ಮಾರ್ಗದ ಸೇತುವೆ ಕುಸಿದ ವೇಳೆ ಗ್ರಾಮಸ್ಥರೆಲ್ಲ ಸೇರಿಕೊಂಡು ತಾತ್ಕಾಲಿಕ ದುರಸ್ತಿ ಮಾಡಿದ್ದೇವೆ. ಆದರೆ, ಶಾಸಕರ ಸಹೋದರ ಆರ್.ಸಿದ್ದನಗೌಡ ತುರುವಿಹಾಳ ಈ ಕೆಲಸ ತಾವೇ ಮಾಡಿರುವುದಾಗಿ ಪೋಜು ಕೊಡುತ್ತಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸತತ ಮಳೆಯಿಂದಾಗಿ ಇತ್ತೀಚೆಗೆ ವೆಂಕಟಾಪುರ ರಸ್ತೆ ಸೇತುವೆ ಸಂಪೂರ್ಣ ಕಿತ್ತುಹೋಗಿತ್ತು. ಗ್ರಾಮಸ್ಥರೆಲ್ಲರೂ ಬೆಳಗ್ಗೆ 6ಗಂಟೆಯಿಂದಲೇ ಸ್ಥಳದಲ್ಲಿ ಮೊಕ್ಕಂ ಹೂಡಿ ಸಾರ್ವಜನಿಕರು, ಮಕ್ಕಳನ್ನು ಹರಿವ ಹಳ್ಳದಲ್ಲಿಯೇ ದಾಟಿಸಿದ್ದೇವೆ. ವಿಷಯ ಗೊತ್ತಾದರೂ ಶಾಸಕ ಬಸನಗೌಡ ತುರುವಿಹಾಳ ಸ್ಥಳಕ್ಕೆ ಬಂದು ಸಮಸ್ಯೆ ಕೇಳುವ ಸೌಜನ್ಯ ತೋರಲಿಲ್ಲ. ಅವರ ಸಹೋದರ ಸಿದ್ದನಗೌಡ ಶಾಸಕರ ಕಚೇರಿಗೆ ಬಂದು ದೂರು ನೀಡಿದರೆ ಸಮಸ್ಯೆ ಪರಿಹರಿಸುತ್ತಿದ್ದೇವು. ಅದರ ಬದಲಾಗಿ ನೀವೇ ರಿಪೇರಿ ಏಕೆ ಮಾಡಿಕೊಂಡಿರಿ? ಎಂದು ಗೂಂಡಾ ವರ್ತನೆ ಪ್ರದರ್ಶನ ಮಾಡುತ್ತಿದ್ದಾರೆ. ಗ್ರಾಮಸ್ಥರು ಮಾಡಿದ ಕೆಲಸವನ್ನು ತಾವೇ ಸ್ವಂತ ಖರ್ಚಿನಲ್ಲಿ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಬಿಟ್ಟು ಪ್ರಚಾರ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದರು.
ಅಣ್ಣ ಮೌನ, ತಮ್ಮ ದೌರ್ಜನ್ಯ: ಮೊದಲು ಆರ್. ಬಸನಗೌಡ ತುರುವಿಹಾಳ ಯಾರು? ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿರಲಿಲ್ಲ. ನಾನು ಸೇರಿ ಕೆಲವು ನಿಷ್ಠಾವಂತ ಕಾರ್ಯಕರ್ತರು ಅವರನ್ನು ಕ್ಷೇತ್ರಕ್ಕೆ ಪರಿಚಯ ಮಾಡಿಸಿದೆವು. ಬಿಜೆಪಿಯಲ್ಲಿ ಇರುವಾಗ 2018ರ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಎಲ್ಲ ಹಂತದ ಲೀಡರ್‌ಗಳ ಕಾಲು ಮುಗಿದು ಟಿಕೆಟ್ ಕೊಡಿಸಿದೆವು. ಮಸ್ಕಿಯಲ್ಲಿ ಕೂಡಲು ಜಾಗವಿಲ್ಲದಾಗ ಹೂವಿನಬಾವಿ ವಿಜಯಣ್ಣ ಅವರ ಅಂಗಡಿಯಲ್ಲೇ ಕೂಡಿಸಿ, ಕಾರ್ಯಕರ್ತರನ್ನು ಸಂಘಟಿಸಿದ್ದೇವೆ. ಉಪಚುನಾವಣೆಯಲ್ಲಿ ಅವರಿವರ ಕಾಲು ಬಿದ್ದು ವೋಟ್ ಹಾಕಿ ಗೆಲ್ಲಿಸಿದ್ದೇವೆ. ಆದರೆ ಈಗ ಗೆದ್ದ ಬಳಿಕ ಸರ್ವಾಧಿಕಾರಿಗಳಾಗಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಶಿವಣ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.