ಟ್ರಸ್ಟ್‌ ವಿವಾದ; ಹಿರಿಯರ ಮಾತುಕತೆಯಿಂದ ಸುಖಾಂತ್ಯ

ಟ್ರಸ್ಟ್‌ ರಚನೆ ಪಟ್ಟಣದ ಹಿಂದುಳಿದ ಸಮುದಾಯಗಳ ಭಕ್ತರಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು

Team Udayavani, Sep 3, 2022, 6:04 PM IST

ಟ್ರಸ್ಟ್‌ ವಿವಾದ; ಹಿರಿಯರ ಮಾತುಕತೆಯಿಂದ ಸುಖಾಂತ್ಯ

ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಸಂಬಂ ಧಿಸಿದಂತೆ ಏಪಕ್ಷೀಯವಾಗಿ ಅಸ್ತಿತ್ವಕ್ಕೆ ಬಂದ ಟ್ರಸ್ಟ್‌ನ ವಿವಾದ ಕೊನೆಗೂ ಎರಡೂ ಬಣಗಳ ಹಿರಿಯರ ನಡುವೆ ಮಾತುಕತೆ ಮೂಲಕ ಶುಕ್ರವಾರ ಸುಖಾಂತ್ಯವಾಗಿದೆ.

ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಏಕಾಏಕಿ ಒಂದು ಸಮುದಾಯದ ಬಣವೊಂದು ಕಳೆದ ವರ್ಷ ಹುಟ್ಟು ಹಾಕಿದ್ದ ಟ್ರಸ್ಟ್‌ ವಿವಾದಕ್ಕೆ ಕಾರಣವಾಗಿ ಒಂದೇ ಸಮುದಾಯಕ್ಕೆ ಸೀಮಿತಗೊಳಿಸಿಕೊಂಡು ರಚಿಸಿದ ಕಾರಣಕ್ಕೆ ಪಟ್ಟಣದ ವಿವಿಧ ಹಿಂದುಳಿದ ಸಮುದಾಯಗಳ ಅಸಂಖ್ಯಾತ ಭಕ್ತರಲ್ಲಿ ಹತಾಶೆ, ನೋವು, ಆಕ್ರೋಶ ಹಾಗೂ ಸ್ವಾಭಿಮಾನ ಹುಟ್ಟು ಹಾಕಿತ್ತು.

ಕಳೆದ ವರ್ಷವೇ ಎಲ್ಲ ಸಮುದಾಯ ಟ್ರಸ್ಟ್‌ನಲ್ಲಿ ಸೇರಿಸಿಕೊಳ್ಳುವ ಭರವಸೆ ನೀಡಿ ಜಾತ್ರೆ ಸಾಂಗವಾಗಿ ನೆರವೇರಿಸಿಕೊಳ್ಳುವಲ್ಲಿ ಟ್ರಸ್ಟ್‌ ಯಶಸ್ವಿಯಾಗಿತ್ತು. ಆದರೆ ಈ ಬಾರಿಯೂ ಟ್ರಸ್ಟ್‌ ರದ್ದುಗೊಳಿಸದೇ ಮುಂದುವರಿಸಿ ಜಾತ್ರೆಯ ಸಂಭ್ರಮದಲ್ಲಿ ತೊಡಗಿಸಿಕೊಂಡಿತ್ತು. ಆದರೆ ಟ್ರಸ್ಟ್‌ನ ವಿಚಾರ ಮತ್ತೂಮ್ಮೆ ಭುಗಿಲೆದ್ದು ಎರಡೂ ಬಣಗಳ ನಡುವೆ ದ್ವೇಷದ ವಾತಾವರಣ ಉಂಟು ಮಾಡಿತ್ತು. ಜಾತ್ರೆ, ಜೋಡು ರಥೋತ್ಸವದ ಸಂಭ್ರಮದ ಮೇಲೆ ಕರಿ ನೆರಳು ಮೂಡಿಸಿತ್ತು.

ಆದರೆ ಗುರುವಾರ ಸಂಜೆ ಮತ್ತು ಶುಕ್ರವಾರ ಬೆಳಗ್ಗೆ ಎರಡೂ ಬಣಗಳ ನಡುವೆ ಸು ದೀರ್ಘ‌ ಮಾತುಕತೆ ನಡೆಯಿತು. ಈ ವೇಳೆ ಹಿಂದುಳಿದ ವರ್ಗಗಳ ಒಕ್ಕೂಟದ ಬಣವು ಕಳೆದ ಬಾರಿ ಮಾತು ಕೊಟ್ಟಂತೆ ಈಗಿರುವ ಟ್ರಸ್ಟ್‌ ಕೂಡಲೇ ರದ್ದುಗೊಳಿಸಬೇಕು. ಜೊತೆಗೆ ನೂತನ ಟ್ರಸ್ಟ್‌ ಆಸ್ತಿತ್ವಕ್ಕೆ ತಂದು ಅದರಲ್ಲಿ ಪಟ್ಟಣದ ಸರ್ವ ಸಮುದಾಯ ಒಳಗೊಂಡಂತೆ ಪ್ರಾತಿನಿಧಿ ತ್ವ ಒದಗಿಸಿಕೊಡಲೇಬೇಕೆಂದು ಪಟ್ಟು ಹಿಡಿದರು. ಒಂದು ವೇಳೆ ಟ್ರಸ್ಟ್‌ನಲ್ಲಿ ಎಲ್ಲರಿಗೂ ಅವಕಾಶ ನೀಡದಿದ್ದರೆ ಈ ಬಾರಿ ಜಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದೇ ಇದಕ್ಕೆ ಪ್ರತಿಯಾಗಿ ಎರಡು ದಿನಗಳ ಕಾಲ ಮೀನಮೇಷ ಎಣಿಸುತ್ತ ಕುಳಿತಿದ್ದ ಮತ್ತೂಂದು ಬಣ ಹಿಂದುಳಿದ ಸಮುದಾಯಗಳ ಒಕ್ಕೂರಲಿನ ಬೇಡಿಕೆಗೆ ತಲೆ ಬಾಗಿತು.

ಕೊನೆಗೂ ಸಭೆಯಲ್ಲಿ ಈಗಿರುವ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಗುಂಡಪ್ಪ ಕುಳಗಿ ಮಾತನಾಡಿ, ಈಗಿರುವ ಟ್ರಸ್ಟ್‌ ರದ್ದುಗೊಳಿಸಿ ಮತ್ತೂಂದು ಸರ್ವ ಸಮುದಾಯ ಒಳಗೊಂಡಂತೆ ನೂತನ ಟ್ರಸ್ಟ್‌ ಅಸ್ತಿತ್ವಕ್ಕೆ ತರುವುದಾಗಿ ವಾಗ್ಧಾನ ಮಾಡಿದರು. ಇದಕ್ಕೆ ಸಭೆಯ ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಮರುಳಸಿದ್ದಯ್ಯ ಸ್ವಾಮೀಜಿಗಳು ಸಾಕ್ಷಿಯಾದರು.

ಹಿಂದುಳಿದ ವರ್ಗಗಳ ಒಕ್ಕೂಟದ ಪರವಾಗಿ ಶಿವರೆಡ್ಡಿ ನಾಯಕ ಮಾತನಾಡಿ, ಕಳೆದೆರಡು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಟ್ರಸ್ಟ್‌ ರಚನೆ ಪಟ್ಟಣದ ಹಿಂದುಳಿದ ಸಮುದಾಯಗಳ ಭಕ್ತರಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಕೊನೆಗೂ ಈಗಿರುವ ಟ್ರಸ್ಟ್‌ ರದ್ದುಗೊಳಿಸಿ ನೂತನ ಟ್ರಸ್ಟ್‌ ಆಸ್ತಿತ್ವಕ್ಕೆ ತಂದು ಸರ್ವ ಜನಾಂಗ ಒಳಗೊಂಡಂತೆ ಸಮಿತಿ ರಚಿಸುವುದಾಗಿ ಮಾತು ಕೊಟ್ಟಿರುವುದಕ್ಕೆ ಸಂತಸವಾಗುತ್ತಿದೆ. ಸೆ.4 ಮತ್ತು 5ರಂದು ನಡೆಯುವ ಜಾತ್ರೆ, ರಥೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಮುಖಂಡರು, ಸಮಾಜ ಬಾಂಧವರು ಇದ್ದರು.

ಟಾಪ್ ನ್ಯೂಸ್

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್‌53 ಪ್ರಕರಣ -4.75 ಲಕ್ಷ ರೂ. ವಶ

ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್‌53 ಪ್ರಕರಣ -4.75 ಲಕ್ಷ ರೂ. ವಶ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

5-koppala

Koppala: ಶಾರ್ಟ್ ಸರ್ಕ್ಯೂಟ್ ನಿಂದ ಓರ್ವ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.