7 ಗಂಟೆ ವಿಚಾರಣೆ ಎದುರಿಸಿದ ಬಾಲಿವುಡ್ ನಟಿ ನೋರಾ ಫತೇಹಿ
Team Udayavani, Sep 3, 2022, 9:45 PM IST
ನವದೆಹಲಿ: ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ನ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕದ (ಇಒಡಬ್ಲೂé) ಅಧಿಕಾರಿಗಳು ದೆಹಲಿ ಕಚೇರಿಯಲ್ಲಿ 7 ತಾಸುಗಳ ಕಾಲ ನಟಿಯ ವಿಚಾರಣೆ ಕೈಗೊಂಡಿದ್ದಾರೆ.
ಸುಕೇಶ್ರಿಂದ ನಟಿ ಪಡೆದಿರುವ ಉಡುಗೊರೆಗಳ ಮಾಹಿತಿ ಪಡೆಯಲಾಗಿದೆ. ಹಾಗೆಯೇ ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಆರೋಪಿ ಎಂದು ಹೆಸರಿಸಿರುವ ಮತ್ತೋರ್ವ ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೂ ಸೆ.12ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಸ್ಕ್ರಿಪ್ಟ್ ಗೆ ಹಣ:
ಇದೇ ವೇಳೆ ತಾನು ನಿರ್ಮಿಸಬೇಕಿದ್ದ ವೆಬ್ ಸೀರಿಸ್ ಒಂದರ ಕಥೆ ಬರೆಯುವುದಕ್ಕೆಂದು ಚಿತ್ರಕಥೆಗಾರ್ತಿ ಅದ್ವಿತಾ ಕಲಾ ಅವರಿಗೆ ಸುಕೇಶ್ ದೊಡ್ಡ ಪ್ರಮಾಣದ ಹಣ ಕೊಟ್ಟಿದ್ದರು ಎಂದು ನಟಿ ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ಅದ್ವಿತಾ ಕಲಾ ಅವರು ಈ ಹಿಂದೆಯೇ ಉತ್ತರಿಸಿದ್ದು, 2021ರಲ್ಲಿ ನಟಿಗೆ ಓರ್ವ ವ್ಯಕ್ತಿ ಬಳಿ 17 ಲಕ್ಷ ರೂ. ಕಳುಹಿಸಿಕೊಟ್ಟಿದ್ದರು. ನಂತರ ಮತ್ತೆ 15 ಲಕ್ಷ ರೂ. ಹಣವನ್ನು ಇನ್ನೋರ್ವರ ಮೂಲಕ ನನಗೆ ತಲುಪಿಸಿದ್ದರು ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.