“ಯೂ ಟರ್ನ್’ ಹೊಡೆಯುವುದರಲ್ಲಿ ಕೇಜ್ರಿವಾಲ್ ನಿಸ್ಸೀಮ: ತೇಜಸ್ವಿ ಸೂರ್ಯ
Team Udayavani, Sep 4, 2022, 7:25 AM IST
ಅಹಮದಾಬಾದ್: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ “ಯೂ ಟರ್ನ್’ ಹೊಡೆಯುವುದರಲ್ಲಿ ದೇಶದಲ್ಲೇ ನಿಸ್ಸೀಮ ನಾಯಕ. ಅವರ ಉಚಿತ ಯೋಜನೆಗಳಿಗೆ ಗುಜರಾತ್‌ನ ಯುವ ಮತದಾರರು ಮಾರು ಹೋಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಾಗ್ಧಾಳಿ ನಡೆಸಿದ್ದಾರೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೇಜ್ರಿವಾಲ್‌ರದ್ದು ವಿಶ್ವಾಸಾರ್ಹತೆ ಮತ್ತು ದೃಢತೆ ಇಲ್ಲದ ರಾಜಕಾರಣ. ಮನೀಶ್ ಸಿಸೋಡಿಯಾ ಅವರ ಬಂಧನವು ಕೇಜ್ರಿವಾಲ್ ಹೇಳುವ ಶುದ್ಧ ರಾಜಕಾರಣದ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಿದೆ,” ಎಂದು ದೂರಿದರು.
“ದೆಹಲಿಯಲ್ಲಿ ಆಪ್ ನೇತೃತ್ವದ ಸರ್ಕಾರದ ದುರಾಡಳಿತವನ್ನು ಬಿಜೆಪಿ ಬಹಿರಂಗಪಡಿಸಿದೆ. ಕಳೆದ 30 ವರ್ಷಗಳಿಂದ ಗುಜರಾತ್ ಅಭಿವೃದ್ಧಿಯ ಹಾದಿಯಲ್ಲಿದ್ದು, ಇಲ್ಲಿನ ಯುವಕರು ಇದನ್ನು ತೀವ್ರಗತಿಯಲ್ಲಿ ಮುಂದುವರಿಸಲು ಬಯಸಿದ್ದಾರೆ,” ಎಂದು ತೇಜಸ್ವಿ ಹೇಳಿದರು.
ಬಿಜೆಪಿಯಿಂದ ಹಣ ಪಡೆಯಿರಿ, ಆಪ್‌ಗೆ ಕೆಲಸ ಮಾಡಿ: ಕೇಜ್ರಿವಾಲ್
“ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ ಹಣ ಪಡೆಯಿರಿ. ಆದರೆ ಆಪ್‌ಗಾಗಿ ಕೆಲಸ ಮಾಡಿ,” ಎಂದು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದರು. ರಾಜ್‌ಕೋಟ್‌ನಲ್ಲಿ ಎರಡು ದಿನಗಳ ಮನೆ ಮನೆ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು, “ಬಿಜೆಪಿ ಕಾರ್ಯಕರ್ತರು ಕೇಸರಿ ಪಕ್ಷದಲ್ಲೇ ಉಳಿಯಿರಿ. ಆದರೆ ಆಪ್‌ಗಾಗಿ ದುಡಿಯಿರಿ,” ಎಂದು ಉಚಿತ ಆಫರ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.