ಗ್ರಾಹಕರ ಡೇಟಾ ರಕ್ಷಿಸಲು ಆರ್‌ಬಿಐನಿಂದ ನೂತನ ಮಾರ್ಗಸೂಚಿ
Team Udayavani, Sep 4, 2022, 7:55 AM IST
ನವದೆಹಲಿ: ಸಾಲಗಾರರು ಮತ್ತು ಗ್ರಾಹಕರ ಮಾಹಿತಿ ರಕ್ಷಿಸಲು ಮತ್ತು ಅದು ದುರುಪಯೋಗವಾಗದಂತೆ ತಡೆಯುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಮತ್ತು ಸಾಲದಾತ ಸಂಸ್ಥೆಗಳಿಗೆ ನೂತನ ಮಾರ್ಗಸೂಚಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೊರಡಿಸಿದೆ.
ಮಾರ್ಗಸೂಚಿಗಳು ತಕ್ಷಣವೇ ಅನ್ವಯವಾಗಲಿದ್ದು, ನ.30ರೊಳಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಆರ್‌ಬಿಐ ಸೂಚಿಸಿದೆ. ಅದರಂತೆ, ನಿರ್ದಿಷ್ಟ ಮಾಹಿತಿ ಹೊರತುಪಡಿಸಿ ಸಾಲಗಾರರ ಯಾವುದೇ ಮಾಹಿತಿಯನ್ನು ಬ್ಯಾಂಕುಗಳು ಹಾಗೂ ಸಾಲದಾತ ಸಂಸ್ಥೆಗಳು ಸಂಗ್ರಹಿಸುವಂತಿಲ್ಲ.
ಮಾರ್ಗಸೂಚಿಗಳ ಪ್ರಕಾರ, ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್(ಡಿಎಲ್‌ಎ) ಅಥವಾ ಸಾಲ ನೀಡುವ ಸೇವಾ ಪೂರೈಕೆದಾರರು(ಎಲ್‌ಪಿಎಸ್) ಕೆಲವು ಮೂಲಭೂತ ಮಾಹಿತಿ ಹೊರತುಪಡಿಸಿ, ಸಾಲಗಾರನ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ವಿವರಗಳು ಇತ್ಯಾದಿಗಳನ್ನಷ್ಟೇ ಸಂಗ್ರಹಿಸಿಡಬಹುದು. ಡೇಟಾ ಗೌಪ್ಯತೆ ಮತ್ತು ಗ್ರಾಹಕರ ವೈಯಕ್ತಿಕ ಮಾಹಿತಿಯ ಭದ್ರತೆಗೆ ಸಂಬಂಧಿಸಿದ ಜವಾಬ್ದಾರಿಯು ಸಾಲದಾತ ಸಂಸ್ಥೆಗಳದ್ದೇ ಆಗಿದೆ ಎಂದು ಆರ್‌ಬಿಐ ಪ್ರತಿಪಾದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Meta Lay off: ಟೆಕ್ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್ ಬರ್ಗ್
Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.