ಪ್ರಗತಿಪರರಿಂದಲೇ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ದುರ್ಗತಿ: ಯತ್ನಾಳ್
Team Udayavani, Sep 3, 2022, 10:54 PM IST
ವಿಜಯಪುರ: ಪ್ರಗತಿಪರರು ಹಾಗೂ ಬುದ್ಧಿಜೀವಿಗಳು ಎಂದು ಹೇಳಿಕೊಂಡವರೇ ದೇಶ ಹಾಗೂ ಚಿತ್ರದುರ್ಗದ ಮುರುಘಾ ಶ್ರೀಗಳನ್ನು ಹಾಳು ಮಾಡಿದ್ದು. ಈಗ ಅವರ ಮಧ್ಯೆಯೇ ಕಿಚ್ಚು ಹತ್ತಿದ್ದು, ಸಂಕಷ್ಟದಲ್ಲಿರುವ ಮುರುಘಾ ಶರಣರ ನೆರವಿಗೆ ಬರುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಟೀಕಿಸಿದರು.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಪ್ರಕರಣದಡಿ ಶ್ರೀಗಳು ಜೈಲು ಪಾಲಾಗಲು ಬುದ್ಧಿಜೀವಿಗಳು ಹಾಗೂ ಪ್ರಗತಿಪರರು ಎನಿಸಿಕೊಂಡವರೇ ಕಾರಣ. ಈಗ ಮಠದಿಂದ ಪಡೆದಿದ್ದ ಪ್ರಶಸ್ತಿಗಳನ್ನು ಮರಳಿಸುವುದಾಗಿ ಹೇಳುತ್ತಿದ್ದಾರೆ.
ಆಡಳಿತಾಧಿಕಾರಿ ನೇಮಿಸಿ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿರುವ ಮುರುಘಾ ಮಠವನ್ನು ಉಳಿಸಲು ಸರಕಾರ ಕೂಡಲೇ ದಕ್ಷ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಒಳ್ಳೆಯ ಮಠಾಧೀಶರನ್ನು ನೇಮಿಸಬೇಕು. ಇಷ್ಟೆಲ್ಲ ಆದ ಮೇಲೂ ಇಂಥ ಶ್ರೀಗಳನ್ನು ಮಠದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.
ಮಠದಲ್ಲಿ ಟಿಪ್ಪು ಮೂರ್ತಿ
ಹಿಂದೂ ಧರ್ಮದ ಬಗ್ಗೆ ನಿರಂತರ ಹಗುರವಾಗಿ ಮಾತನಾಡುತ್ತಿದ್ದ ಮುರುಘಾ ಶರಣರು ವೀರಶೈವ ಮಠದಲ್ಲಿ ಮತಾಂಧ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಇರಿಸಿದ್ದರು. ಗೋಮಾತೆ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಟೀಕಿಸಿದರು.
ಚಿತ್ರದುರ್ಗ ಆಳಿದ ಮದಕರಿ ನಾಯಕರ ವಂಶದವರು ಮಠಕ್ಕೆ ಸಾವಿರಾರು ಎಕರೆ ಜಮೀನು ನೀಡಿದ್ದಾರೆ. ಮದಕರಿ ನಾಯಕರ ಕೋಟೆಗೆ ಟಿಪ್ಪು ಸುಲ್ತಾನ್ ತಂದೆ ಹೈದರಲಿ ದಾಳಿ ಮಾಡಿ ಲೂಟಿ ಮಾಡಿದ್ದ. ಟಿಪ್ಪು ಸುಲ್ತಾನ್ ಹೊಗಳಿದವರು ಯಾರೂ ಉತ್ತಮವಾಗಿಲ್ಲ. ಟಿಪ್ಪು ಸಿನೆಮಾ ಮಾಡಿದ ವ್ಯಕ್ತಿ ಪೆಂಡಾಲ್ ಸುಟ್ಟು ನಷ್ಟ ಅನುಭವಿಸಿದ್ದಾನೆ. ವಿದೇಶದಿಂದ ಟಿಪ್ಪು ಖಡ್ಗವನ್ನು ತಂದಿದ್ದ ವಿಜಯ ಮಲ್ಯ ದಿವಾಳಿಯಾಗಿ ದೇಶ ತೊರೆದಿದ್ದಾನೆ. ಟಿಪ್ಪು ಜಯಂತಿ ಮಾಡಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ತವರು ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಹೀಗಾಗಿ ಟಿಪ್ಪು ಗುಣಗಾನ ಮಾಡುವುದನ್ನು ನಿಲ್ಲಿಸದವರಿಗೆ ಭವಿಷ್ಯದಲ್ಲಿ ಇದೇ ಗತಿ ಬರಲಿದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.