ಕಾನೂನು ವಿವಿಯಲ್ಲಿ ಗಗನ ಕುಸುಮವಾಗಿರುವ ನೇಮಕಾತಿ

ಸದ್ಯ ಖಾಯಂ ಬೋಧಕ ಸಿಬಂದಿ ಇರುವುದು ಕೇವಲ 11 ಮಂದಿ ;ಸ್ನಾತಕೋತ್ತರ ಪದವಿ ಕೋರ್ಸ್‌, ಮೂಲ ಸೌಲಭ್ಯವೂ ಇಲ್ಲಿಲ್ಲ

Team Udayavani, Sep 4, 2022, 7:40 AM IST

ಕಾನೂನು ವಿವಿಯಲ್ಲಿ ಗಗನ ಕುಸುಮವಾಗಿರುವ ನೇಮಕಾತಿ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಆರಂಭವಾಗಿ 12 ವರ್ಷ ಕಳೆದರೂ ಅತಿಥಿ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ನೌಕರರ ಮೇಲೆ ನಿಂತಿದೆ. ಒಂದು ಬಾರಿ ಮಾತ್ರ ಬೋಧಕ ಸಿಬಂದಿ ನೇಮಕಾತಿ ನಡೆದಿದೆ. ಬೋಧಕೇತರ ಸಿಬಂದಿ ನೇಮಕಾತಿ ಇನ್ನೂ ಗಗನ ಕುಸುಮವಾಗಿದೆ.

ಇತರ ವಿವಿಗಳಿಗೆ ಹೋಲಿಸಿದರೆ ಇಲ್ಲಿ ಸಾಕಷ್ಟು ಮೂಲ ಸೌಲಭ್ಯಗಳ ಕೊರತೆಯಿದೆ. ಸುಸಜ್ಜಿತ ಭೂಮಿ ದೊರೆಯದ ಕಾರಣ ಹರಿದು ಹಂಚಿ ಹೋಗಿರುವ 55 ಎಕರೆಯಲ್ಲಿ ಆರಂಭವಾಗಿದೆ. ಲಾ ಸ್ಕೂಲ್‌, ಉನ್ನತ ಹುದ್ದೆಯಲ್ಲಿರುವವರಿಗೆ ವಸತಿ ಗೃಹಗಳು, ಹಾಸ್ಟೆಲ್‌ ಒಂದಿಷ್ಟು ಬಿಟ್ಟರೆ ಇಂದಿಗೂ ವಿವಿಯ ಆಡಳಿತ ಕಟ್ಟಡ ಲೋಕೋಪಯೋಗಿ ಕಟ್ಟಡದಲ್ಲೇ ನಡೆಯುತ್ತಿದೆ. ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಗೋಜಿಗೆ ಹೋಗದೆ ಒಂದು ಸ್ನಾತಕೋತ್ತರ, ಎರಡು ಯುಜಿ ಕೋರ್ಸ್‌ಗೆ ಸೀಮಿತವಾಗಿದೆ. ಸಂವಿಧಾನಾತ್ಮಕ ಕಾನೂನು ಬಿಟ್ಟರೆ ಇತರ ವಿಷಯಗಳ ಸ್ನಾತಕೋತ್ತರ ಪದವಿಗೆ ಇತರ ವಿವಿಗಳ ಕಾನೂನು ಕಾಲೇಜುಗಳನ್ನು ಆಶ್ರಯಿಸುವಂತಾಗಿದೆ.

ಎಲ್ಲವೂ ಹೊರಗುತ್ತಿಗೆ
ಕಾನೂನು ವಿವಿ ಆರಂಭವಾದ ಸಂದರ್ಭ 10-ಪ್ರೊಫೆಸರ್‌, 17-ರೀಡರ್‌, 41-ಉಪನ್ಯಾಸಕರು ಸಹಿತ ಒಟ್ಟು 68 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಮೂವರು ಪ್ರೊಫೆಸರ್‌, ಎಂಟು ಉಪನ್ಯಾಸಕರಿದ್ದಾರೆ. ರೀಡರ್‌ ಹುದ್ದೆಗಳು ಸಂಪೂರ್ಣ ಖಾಲಿಯಿದ್ದು, ಇಡೀ ವಿವಿಗೆ ಖಾಯಂ ಬೋಧಕ ಸಿಬಂದಿ ಇರುವುದು ಕೇವಲ 11 ಮಂದಿ ಮಾತ್ರ. ಉಳಿದೆಲ್ಲವೂ ಅತಿಥಿ ಉಪನ್ಯಾಸಕರ ಮೂಲಕ ಮುನ್ನಡೆಸಲಾಗುತ್ತಿದೆ. ಆರಂಭದಲ್ಲಿ 164 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದವು. ಇಂದು ಸುಮಾರು 170ಕ್ಕೂ ಹೆಚ್ಚು ಸಿಬಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸದ್ಯ ಕುಲಪತಿ ಸ್ಥಾನವೂ ಪ್ರಭಾರದಲ್ಲಿದೆ. ಕುಲಸಚಿವರೇ ಮುಖ್ಯ ಹಣಕಾಸು ಅಧಿಕಾರಿಯಾಗಿ ಹೊಣೆ ನಿರ್ವಹಿಸುತ್ತಿದ್ದಾರೆ. ವಿಪರ್ಯಾಸ ಎಂದರೆ ಉಪ ಕುಲಸಚಿವ ಹಾಗೂ ಸಹಾಯಕ ಕುಲಸಚಿವ, ವಿವಿಯ ಹೃದಯ ಎನ್ನುವ ಮುಖ್ಯ ಗ್ರಂಥಪಾಲಕ ಹೊರ ಗುತ್ತಿಗೆ. ಅತ್ಯಂತ ಗೌಪ್ಯ ವಿಭಾಗ ಪರೀಕ್ಷಾಂಗ ವಿಭಾಗವನ್ನೂ ಹೊರ ಗುತ್ತಿಗೆ ಸಿಬಂದಿ ಮೂಲಕವೇ ನಡೆಸಲಾಗುತ್ತಿದೆ.

ನೇಮಕಾತಿಗೆ ಯಾಕೆ ವಿಘ್ನ?
ವಿವಿ ಆರಂಭದ ಬಳಿಕ ಒಮ್ಮೆಯಷ್ಟೇ ಪ್ರೊಫೆಸರ್‌, ರೀಡರ್‌, ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. 2013ರಲ್ಲಿ 14 ಹುದ್ದೆಗಳ ಅಧಿಸೂಚನೆಗೆ ನೇಮಕವಾಗಿದ್ದು, 11 ಜನರು ಮಾತ್ರ. 2021 ನವೆಂಬರ್‌ ತಿಂಗಳಲ್ಲಿ 13 ಹುದ್ದೆಗಳ ನೇಮಕಾತಿಗೆ ಆಹ್ವಾನಿಸಿದ್ದರೂ ಪ್ರಕ್ರಿಯೆ ಮುಂದುವರಿದಿಲ್ಲ. ಆದರೆ ಬೋಧಕೇತರ ಹುದ್ದೆಗಳಿಗೆ ಎರಡು ಬಾರಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರೂ ಪ್ರಕ್ರಿಯೆ ನಡೆದಿಲ್ಲ. ಪೂರ್ಣಾವಧಿ ಉಪನ್ಯಾಸಕರಿಗೆ ಯುಜಿಸಿ ವೇತನ ನೀಡುವಂತೆ ಕಾಲೇಜಿಗಳಿಗೆ ಆದೇಶ ನೀಡುವ ವಿಶ್ವವಿದ್ಯಾನಿಲಯವು ತನ್ನ ನಾಲ್ವರು ಗುತ್ತಿಗೆ ಉಪನ್ಯಾಸಕರಿಗೆ ಪಿಯು ಕಾಲೇಜಿನ ಉಪನ್ಯಾಸಕರ ವೇತನ ನೀಡುತ್ತಿದೆ. 10 ವರ್ಷ ಸೇವೆ ಸಲ್ಲಿಸಿದವರನ್ನು ನೇಮಕಾತಿಗೆ ಪರಿಗಣಿಸಬೇಕೆನ್ನುವ ಉಮಾದೇವಿ ಪ್ರಕರಣ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾಗುವಂತಾಗಿದೆ.

ಕಾನೂನು ವಿಶ್ವ ವಿದ್ಯಾ ನಿಲಯ ವನ್ನು ಗುದ್ದಾಡಿ ತಂದಿದ್ದು, ಇದು ಉತ್ತರ ಕರ್ನಾಟಕದಲ್ಲಿದೆ ಎನ್ನುವ ಕಾರಣಕ್ಕೆ ಎಲ್ಲ ಸರಕಾರಗಳು ನಿರ್ಲಕ್ಷé ಮಾಡಿಕೊಂಡು ಬರುತ್ತಿವೆ. ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಇದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕೆನ್ನುವ ಹುನ್ನಾರಗಳು ನಡೆಯುತ್ತಿವೆ. ಇಷ್ಟೊಂದು ನಿರ್ಲಕ್ಷé ಮಾಡುತ್ತಿರುವುದು ನೋವಿನ ಸಂಗತಿ. ಈ ಕುರಿತು ಮುಂದಿನ ಅಧಿವೇಶನದಲ್ಲಿ ಪ್ರಸ್ತಾವ ಮಾಡುತ್ತೇನೆ.
-ಬಸವರಾಜ ಹೊರಟ್ಟಿ,
ವಿಧಾನಪರಿಷತ್‌ ಸದಸ್ಯ

– ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ

Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ

dk shivakumar

Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್

Start sugarcane harvesting from November 8: Minister Sivananda Patil appeals to farmers

Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ

Listen to people’s problems and report to the Speaker: JPC President Jagadambika Pal

Waqf: ಲೋಕಸಭಾ ಸ್ಪೀಕರ್‌ಗೆ ರಾಜ್ಯದ ವಕ್ಫ್ ವರದಿ: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.