ವೃದ್ಧಾಪ್ಯ ವೇಗವರ್ಧಕ ಗ್ಯಾಜೆಟ್ ಬೆಳಕು; ಚರ್ಮ, ಮೆದುಳಿನ ಮೇಲೂ ಆಳವಾದ ಪರಿಣಾಮ
Team Udayavani, Sep 4, 2022, 6:35 AM IST
ಮಣಿಪಾಲ: ತಂತ್ರಜ್ಞಾನ ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ದೈನಿಕವನ್ನು ಆಮೂಲಾಗ್ರವಾಗಿ ಬದಲಾಯಿಸಿದೆ. ಸಮಾಜದಲ್ಲಿ ನಮ್ಮ ಚಟುವಟಿಕೆಗಳು, ಪ್ರಯಾಣ, ಕೊಡು-ಕೊಳುಗೆ, ಮನೋರಂಜನೆ, ಊಟ-ಉಪಾಹಾರ ಎಲ್ಲದ ರಲ್ಲಿಯೂ ತಂತ್ರಜ್ಞಾನ ಬಲವಾಗಿ ಬೇರೂರಿದೆ. ಆರೋಗ್ಯ ಕಾಪಾಡಿ ಕೊಳ್ಳುವುದರಿಂದ ತೊಡಗಿ ಹಣಕಾಸಿನ ನಿರ್ವಹಣೆಯ ವರೆಗೆ ಎಲ್ಲವನ್ನೂ ಸ್ಮಾರ್ಟ್‌ಫೋನ್‌ಗಳು ನಿಭಾಯಿಸುತ್ತಿವೆ. ನಮ್ಮ ಎಲ್ಲ ಬೇಕು-ಬೇಡಗಳಿಗೂ ಅದರಲ್ಲಿ ಉತ್ತರ ಇದೆ. ಆದರೆ ಈ ಅನುಕೂಲಗಳಿಗೆ ಒಂದಷ್ಟು ಬೆಲೆಯನ್ನೂ ನಾವು ತೆರಬೇಕಲ್ಲವೆ!
ಹಣ್ಣಿನ ನೊಣಗಳ ಅಧ್ಯಯನ: ತಿಳಿದು ಬಂದದ್ದೇನು?
– ನೀಲಿ ಬೆಳಕಿಗೆ ಒಡ್ಡಿಕೊಂಡ ಹಣ್ಣಿನ ನೊಣಗಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ.
– ಕತ್ತಲೆಯಲ್ಲಿದ್ದ ಹಣ್ಣಿನ ನೊಣಗಳು ದೀರ್ಘಕಾಲ ಬದುಕಿದವು.
– ಹೆಚ್ಚು ಶಕ್ತಿಶಾಲಿಯಾದ ನೀಲಿ ಬೆಳಕಿಗೆ ಒಡ್ಡಿಕೊಂಡ ಹಣ್ಣಿನ ನೊಣಗಳ ದೇಹದಲ್ಲಿ ಮೆಟಬಾಲೈಟ್ ಸಸಿನೇಟ್ (ಸಸಿನಿಕ್ ಆ್ಯಸಿಡ್ ಎಂದೂ ಕರೆಯುತ್ತಾರೆ, ಚಯಾಪಚಯ ಕ್ರಿಯೆ ನಡೆಯುವುದಕ್ಕೆ ಸಹಾಯಕ) ಹೆಚ್ಚಳವಾಯಿತು. ಪ್ರತೀ ಜೀವಕೋಶ ಬೆಳೆಯಲು ಮತ್ತು ಕಾರ್ಯಾಚರಿಸಲು ಸಸಿನೇಟ್ ಅಗತ್ಯ.ಅಂದರೆ ನೀಲಿ ಬೆಳಕಿಗೆ ಒಡ್ಡಿಕೊಂಡ ಬಳಿಕ ಸಸಿನೇಟ್ ಅನಗತ್ಯವಾಗಿ ಹೆಚ್ಚುತ್ತದೆ ಎಂದಂತಾಯಿತು.
– ನೀಲಿ ಬೆಳಕಿಗೆ ತೆರೆದುಕೊಂಡ ನೊಣಗಳಲ್ಲಿ ಗ್ಲುಟಮೇಟ್ ಮಟ್ಟ ಕಡಿಮೆಯಾಗುವುದು ಕಂಡುಬಂತು. ಗ್ಲುಟಮೇಟ್ ಎಂಬುದು ಗ್ಲುಟಮಿಕ್ ಆ್ಯಸಿಡ್‌ನ ಒಂದು ಭಾಗ. ನರಸಂದೇಶಗಳನ್ನು ರವಾನಿಸುವ ಕೆಲಸ ಮಾಡುತ್ತದೆ, ಮಿದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಇದು ಬೇಕು.
ಪರಿಣಾಮ?
ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟೆಲಿವಿಶನ್‌ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಹೆಚ್ಚು ಹೊತ್ತು ಅಂಟಿಕೊಳ್ಳುವುದರಿಂದ ನಮ್ಮ ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯ ವೇಗ ಹೆಚ್ಚುತ್ತದೆಯಂತೆ. “ಫ್ರಂಟಿಯರ್ ಇನ್ ಏಜಿಂಗ್’ ಎಂಬ ಮುದಿತನಕ್ಕೆ ಸಂಬಂಧಿಸಿದ ವಿವಿಧ ಸಂಶೋಧನ ಲೇಖನಗಳನ್ನು ಪ್ರಕಟಿಸುವ ನಿಯತಕಾಲಿಕದಲ್ಲಿ ಈ ವಿಚಾರ ಪ್ರಕಟವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧ್ಯಯನವನ್ನು ಹಣ್ಣಿನ ನೊಣಗಳ ಮೇಲೆ ನಡೆಸಲಾಗಿದೆ. ನೀಲಿ ಬೆಳಕನ್ನು ಹೊಮ್ಮಿಸುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಹೆಚ್ಚು ಹೊತ್ತು ಕಣ್ಣು ಕೀಲಿಸುವುದು ಚರ್ಮ, ಕೊಬ್ಬಿನ ಅಂಗಾಂಶಗಳು ಮತ್ತು ಮಿದುಳಿನ ಜೀವಕೋಶಗಳ ಮೇಲೆ ಪರಿಣಾಮ ಉಂಟಾಗುವುದು ಶ್ರುತ ಪಟ್ಟಿದೆ.
ಹಲವು ವಿಧ ಹಾನಿ
ಈ ಅಧ್ಯಯನದ ಮುಂಚೂಣಿಯಲ್ಲಿದ್ದವರು ಅಮೆರಿಕದ ಓರೆಗಾನ್ ಸ್ಟೇಟ್ ವಿ.ವಿ.ಯ ಪ್ರೊ| ಜದ್ವಿಗಾ ಗಿಬಲೊ¤ವಿಕ್. ಚರ್ಮದಿಂದ ತೊಡಗಿ ಕೊಬ್ಬಿನ ಜೀವಕೋಶಗಳು, ಸಂವೇದನ ನ್ಯೂರಾನ್‌ಗಳ ವರೆಗೆ ನಮ್ಮ ದೇಹದ ಜೀವಕೋಶಗಳ ಮೇಲೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ನೀಲಿ ಬೆಳಕು ಪ್ರತಿಕೂಲ ಪರಿಣಾಮ ಬೀರುತ್ತದೆ. ನೀಲಿ ಬೆಳಕಿಗೆ ಒಡ್ಡಿಕೊಂಡ ಹಣ್ಣಿನ ನೊಣಗಳಲ್ಲಿ ಜೀವಕೋಶಗಳು ಸರಿಯಾಗಿ ಕಾರ್ಯಾಚರಿಸಲು ಬೇಕಾದ ರಾಸಾಯನಿಕಗಳಾದ ಮೆಟ ಬಾಲೈಟ್‌ಗಳ ಮಟ್ಟ ಏರಿಳಿತವಾಗು ವುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಪ್ರೊ| ಗಿಬಲೊ¤ವಿಕ್ ಹೇಳಿದ್ದಾರೆ.
ಅವಲಂಬನೆ
ಹೆಚ್ಚಿಸಿದ ಕೋವಿಡ್‌ಕೋವಿಡ್ ಕಾಲಘಟ್ಟದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಕ್ಕಿತು. ಮಕ್ಕಳು ಅನಿವಾರ್ಯವಾಗಿ ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಅವಲಂಬಿಗಳಾಗ ಬೇಕಾಯಿತು. ಅದರ ದುಷ್ಪರಿಣಾಮ ಈಗಲೂ ಮುಂದುವರಿದಿದೆ.ಮುಂಬಯಿಯ ಫೋರ್ಟಿಸ್ ಆಸ್ಪತ್ರೆ 2021ರ ನವೆಂಬರ್‌ನಲ್ಲಿ ಈ ಬಗ್ಗೆ ಒಂದು ಸಮೀಕ್ಷೆ ಕೈಗೊಂಡಿತ್ತು.
ಅದರ ಫಲಶ್ರುತಿ
-ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 95 ಹೆತ್ತವರು: ಕೋವಿಡ್ ತಮ್ಮ ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
-ಶೇ. 62 ಹೆತ್ತವರು: ಮಕ್ಕಳು ಪ್ರತೀ ದಿನ 4ರಿಂದ 6 ತಾಸು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಲ್ಲಿ ಇರುತ್ತಾರೆ.
– ಶೇ. 23 ಮಕ್ಕಳು ವಾರಾಂತ್ಯಗಳಲ್ಲಿ 6 ತಾಸಿಗಿಂತ ಹೆಚ್ಚು ಎಲೆಕ್ಟ್ರಾನಿಕ್ ಗ್ಯಾಜೆಟ್ ಬಳಸುತ್ತಾರೆ.
ಪೋಷಕರು ನಿಗಾ ವಹಿಸಬೇಕು
ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚುವುದರಿಂದ ತುಂಬಾ ಅನನುಕೂಲಗಳು ಇವೆ. ನಿದ್ದೆ ಕಡಿಮೆ, ಅಸಹನೆ, ಏಕಾಗ್ರತೆಯ ಕೊರತೆ, ಸೃಜನಶೀಲ ಚಟುವಟಿಕೆಗಳಲ್ಲಿ ಹಿನ್ನಡೆ, ಆಕ್ರಮಣಶೀಲತೆ, ವಿದ್ಯಾಭ್ಯಾಸ ಕುಂಠಿತ, ಅವಧಿಪೂರ್ವ ಲೈಂಗಿಕ ತಿಳಿವಳಿಕೆ, ಲೈಂಗಿಕ ವೀಡಿಯೋಗಳ ಪರಿಚಯ, ಆಟ- ಪಾಠಗಳಲ್ಲಿ ನಿರಾಸಕ್ತಿ, ವ್ಯಾಯಾಮ ಇಲ್ಲದೆ ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಮೊಬೈಲ್ ಬಳಕೆ ಪೂರ್ಣ ಕಡಿಮೆ ಮಾಡಲು ಸಾಧ್ಯವಾಗದಿದ್ದರೂ ಮಿತಿಯಲ್ಲಿ ಬಳಸುವ ಬಗ್ಗೆ ಪೋಷಕರೇ ನಿಗಾ ವಹಿಸ ಬೇಕು. ಮಕ್ಕಳ ಮೊಬೈಲ್ ಬಳಕೆ ಬಗ್ಗೆ, ಗೇಮ್ಸ್ ಆ್ಯಪ್, ಗ್ಯಾಂಬ್ಲಿಂಗ್ ಬಳಕೆಯ ಬಗ್ಗೆ ಗಮನಹರಿಸಿ. ಪೋಷಕರೇ ಮಕ್ಕಳ ಮೊಬೈಲ್ ಮೇಲೆ ನಿಯಂತ್ರಣ ಹೊಂದಿರಲಿ. ಆಗಾಗ ಇಂಟರ್‌ನೆಟ್ ಬಳಕೆ, ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸುತ್ತಿರಿ.
– ಡಾ| ವಿರೂಪಾಕ್ಷ ದೇವರಮನೆ, ಮನೋವೈದ್ಯರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.