ಉಡುಪಿ ಜಿಲ್ಲೆಯ ಮೀನುಗಾರರ ಕೈ ಸೇರದ ಅನುದಾನ
ಮೀನುಗಾರರ ಕೇಂದ್ರ ಪುರಸ್ಕೃತ ಉಳಿತಾಯ ಯೋಜನೆ
Team Udayavani, Sep 4, 2022, 9:17 AM IST
ಕೋಟ : ಮೀನುಗಾರಿಕೆ ರಜೆ ಸಂದರ್ಭ ಸಣ್ಣ ಮೀನುಗಾರರಿಗೆ ಆರ್ಥಿಕವಾಗಿ ಸಹಕಾರಿಯಾಗುವ ನಿಟ್ಟಿನಲ್ಲಿ ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆ ಎನ್ನುವ ಯೋಜನೆಯನ್ನು ಸರಕಾರ ಈ ಹಿಂದೆ ಜಾರಿಗೊಳಿಸಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಿನ ಅನುದಾನ ಉಡುಪಿ ಜಿಲ್ಲೆಯ ಮೀನುಗಾರರ ಕೈ ಸೇರದೆ ಸಮಸ್ಯೆಯಾಗಿದೆ.
ಅರ್ಥಿಕವಾಗಿ ಹಿಂದುಳಿದ ಮೀನುಗಾರರು ಸೆಪ್ಟಂಬರ್‌ನಿಂದ ಮೇ ತನಕ ಮೀನುಗಾರಿಕೆಗೆ ಸಂಬಂಧಿಸಿದ ಸಹಕಾರ ಸಂಸ್ಥೆಗಳ ಮೂಲಕ 165 ರೂ.ಗಳನ್ನು ಉಳಿತಾಯ ರೂಪದಲ್ಲಿ ಠೇವಣಿ ಇಡಬೇಕು. ಒಂಬತ್ತು ತಿಂಗಳಲ್ಲಿ ಓರ್ವ ಸದಸ್ಯನ ಖಾತೆಯಲ್ಲಿ ಸಂಗಹಗೊಂಡ 1,500 ಸಾವಿರ ಮೊತ್ತಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ತಲಾ 1,500-1,500 ರೂ. ಅನುದಾನವನ್ನು ನೀಡುತ್ತದೆ. ಹೀಗೆ ಸಂಗ್ರಹವಾಗುವ 4,500 ರೂ. ಮೊತ್ತವನ್ನು ಜೂನ್, ಜುಲೈ, ಆಗಸ್ಟ್‌ನಲ್ಲಿ ರಜಾ ವೇತನ ರೂಪದಲ್ಲಿ ನೀಡಲಾಗುತ್ತದೆ. ಆದರೆ 2017, 2018, 2019ನೇ ಸಾಲಿನ ಸರಕಾರದ ಪಾಲಿನ ಅನುದಾನ ಉಡುಪಿ ಜಿಲ್ಲೆಗೆ ಬಿಡುಗಡೆಯಾಗಿಲ್ಲ.
ಸರಕಾರದ ಪಾಲು ಶೂನ್ಯ
ದ.ಕ. ಜಿಲ್ಲೆಯಲ್ಲಿ 1,231 ಮಂದಿ ಮೀನುಗಾರರಿದ್ದು 2021ನೇ ಸಾಲಿನ ತನಕದ ಎಲ್ಲ ಅನುದಾನ ಕೈ ಸೇರಿದೆ ಎಂದು ಇಲಾಖೆಯ ಮುಖ್ಯಸ್ಥರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಸದಸ್ಯರು ಮಾಸಿಕ 165 ರೂ.ಗಳಂತೆ 9 ತಿಂಗಳು ಪಾವತಿಸಿದ 1,500 ಸಾವಿರ ರೂ. ಮಾತ್ರ ಕೈ ಸೇರುತ್ತಿದೆ. ಸರಕಾರದ ಪಾಲು ಶೂನ್ಯವಾಗಿದೆ.
ಕೈತಪ್ಪುವ ಆತಂಕ: ಮೂರ್‍ನಾಲ್ಕು ವರ್ಷಗಳಿಂದ ಅನುದಾನ ಬಾಕಿ ಉಳಿದಿರುವುದರಿಂದ ಉಡುಪಿ ಜಿಲ್ಲೆಯ ಮೀನುಗಾರರಿಗೆ ಹಳೆಯ ಬಾಕಿ ಕೈ ತಪ್ಪಲಿದೆಯೇ ಎನ್ನುವ ಆತಂಕ ಇದೆ. ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯ ಸಂಪೂರ್ಣ ಮೊತ್ತವನ್ನು ಮೀನುಗಾರರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮೀನುಗಾರರದು.
ಯೋಜನೆಯಲ್ಲಿ ಹಣ ತೊಡಗಿಸಿದ ಮೀನುಗಾರರು ಆಗಾಗ ಸಂಘಕ್ಕೆ ಭೇಟಿ ನೀಡಿ ವಿಚಾರಿಸುತ್ತಾರೆ. ಸರಕಾರದ ಪಾಲಿನ ಹಿಂದಿನ ಸಂಪೂರ್ಣ ಅನುದಾನವದ ಜತೆಗೆ ಪೂರ್ತಿ ಮೊತ್ತ ಪಾವತಿಸಲು ಸರಕಾರ ಕ್ರಮ ಕೈಗೊಳ್ಳಬೇಕಿದೆ.
– ಅಶೋಕ್ ಕೋಡಿಕನ್ಯಾಣ, ಅಧ್ಯಕ್ಷರು, ಕೋಡಿ ಮೀನುಗಾರರ ಸಹಕಾರಿ ಸಂಘ
2020-21ನೇ ಸಾಲಿನ ಅನುದಾನ ಸಂಪೂರ್ಣವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಹಂತ-ಹಂತವಾಗಿ ಸರಕಾರದ ಪಾಲಿನ ಅನುದಾನ ಪಾವತಿಸಲು ಇಲಾಖೆ ಕ್ರಮ ಕೈಗೊಳ್ಳುವ ಭರವಸೆ ಇದೆ.
– ಗಣೇಶ್, ಜಿಲ್ಲಾ ನಿರ್ದೇಶಕರು ಮೀನುಗಾರಿಕೆ ಇಲಾಖೆ
– ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.