ಬೈಕ್ ಮೂಲಕ 17,982 ಅಡಿ ಎತ್ತರದ “ಖರ್ದುಂಗ್ಲಾ ಪಾಸ್’ ತಲುಪಿದ ಕುಂದಾಪುರದ ಮಹಿಳೆ
ಕುಂದಾಪುರದ 54ರ ಹರೆಯದ ವಿಲ್ಮಾ ಕ್ರಾಸ್ಟೊ ಸಾಧನೆ
Team Udayavani, Sep 4, 2022, 9:21 AM IST
ಕುಂದಾಪುರ : ವಿಶ್ವದ 2ನೇ ಎತ್ತರದ ಮೋಟಾರು ಮಾರ್ಗವಾದ ಲಡಾಖ್‌ನ 17,982 ಅಡಿ ಎತ್ತರದ ಖರ್ದುಂಗ್ಲಾ ಪಾಸ್‌ನ ತುತ್ತತುದಿಗೆ ಬೈಕ್‌ನಲ್ಲಿ ತಲುಪುವ ಮೂಲಕ ಕುಂದಾಪುರದ 54 ವರ್ಷ ಪ್ರಾಯದ ವಿಲ್ಮಾ ಕ್ರಾಸ್ಟೊ ಕರ್ವಾಲೊ ಸಾಧನೆ ಮಾಡಿದ್ದಾರೆ.
ಲೇಹ್‌ನಿಂದ ಪುತ್ರಿ ಚೆರಿಶ್ ಕರ್ವಾಲೊ ಜತೆ ಬೈಕ್‌ನಲ್ಲಿ ಹೊರಟ ಅವರು ಒಟ್ಟು 900 ಕಿ.ಮೀ. ಪ್ರಯಾಣಿಸಿದ್ದು, ಈ ಪೈಕಿ ಸುಮಾರು 500 ಕಿ.ಮೀ. ವರೆಗೆ ವಿಲ್ಮಾ ಅವರೇ ಬೈಕ್ ಚಲಾಯಿಸಿದ್ದರು. ಕಳೆದ ವರ್ಷವೂ ಖರ್ದುಂಗ್ಲಾ ಪಾಸ್ ರಸ್ತೆಯ ತುತ್ತ ತುದಿಗೆ ತಲುಪಬೇಕೆಂದು ಹೊರಟಿದ್ದು, ಆದರೆ ಆಗ ಇವರ ಬೈಕ್ ಕೈ ಕೊಟ್ಟಿದ್ದರಿಂದ ಸಾಧ್ಯವಾಗಿರಲಿಲ್ಲ.
ವಿಲ್ಮಾ ಕುಂದಾಪುರದ ರಾಜಕೀಯ ಮುತ್ಸದ್ಧಿ ದಿ| ಎಡ್ವಿನ್ ಕ್ರಾಸ್ಟೊ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ಅವರ ಪುತ್ರಿಯಾಗಿದ್ದು, ಲೆಸ್ಲಿ ಕರ್ವಾಲೊ ಅವರ ಪತ್ನಿಯಾಗಿದ್ದಾರೆ. ಭಂಡಾರ್‌ಕಾರ್ಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಪೊರೇಟ್ ತರಬೇತುದಾರಾಗಿದ್ದಾರೆ.
ಸವಾಲಿನ ಪಯಣ
ಖರ್ದುಂಗ್ಲಾ ಪಾಸ್ ಹಾದಿಯ ಪಯಣವು ತುಂಬಾ ಕಠಿನವಾಗಿದ್ದು, ಇಲ್ಲಿನ ಉಷ್ಣತೆ – 40 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಎತ್ತರವಾಗಿರುವುದರಿಂದ ಆಮ್ಲ ಜನಕ ಮಟ್ಟವು ತೀರಾ ಕಡಿಮೆ ಇರುತ್ತದೆ. ಇದರಿಂದ ದೀರ್ಘ ಕಾಲ ಇಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿಗೆ ಬರುವವರು ಬಹುತೇಕ ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದು, ಆ ದೃಷ್ಟಿಯಿಂದ ವಿಲ್ಮಾ ಅವರು ಈ ವಯಸ್ಸಿನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ : 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 50 ಸೀಟು ಮಾತ್ರ: ನಿತೀಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.