ಪುಸ್ತಕಗಳಿಂದ ಆಯುಷ್ಯ ಹೆಚ್ಚುತ್ತಾ? ಬೆಂಗಳೂರಿನ ಬೃಹತ್‌ ಪುಸ್ತಕ ಮಳಿಗೆಗಳ ಪರಿಚಯ


ದಿನೇಶ ಎಂ, Sep 4, 2022, 5:50 PM IST

THUMB WEB EXCLUSIVE DINESHA

“ನಹಿ ಜ್ಞಾನೇನ ಸದೃಶಂ” ವಿದ್ಯೆ, ಅದರಿಂದ ದೊರೆತ ಜ್ಞಾನ ಇವನ್ನು ಯಾರೂ ಕದಿಯೋದಕ್ಕಾಗಲಿ, ನಾಶಗೊಳಿಸೋದಕ್ಕಾಗಲಿ ಸಾಧ್ಯವಿಲ್ಲ. ಹಾಗಾಗಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಅಥವಾ ಮೌಲ್ಯ ಇನ್ನೊಂದಿಲ್ಲ. ಜ್ಞಾನ ಪರಂಪರೆಯಲ್ಲಿ ಗುರುವಿಗೆ ಅಗ್ರಸ್ಥಾನವಿದೆ, ಗುರಿ ತೋರೋ ಗುರು ತ್ರಿಮೂರ್ತಿಗಳಿಗೆ ಸಮ ಅನ್ನೋ ಮಾತಿದೆ. ಆದರೆ, ಆ ಗುರುವಿನ ದೇಹ ಅಂತ್ಯವಾದರು ಆ ಗುರು ತತ್ವ – ವಿದ್ಯೆ, ಕೌಶಲ್ಯಗಳ ರೂಪದಲ್ಲಿ ನಮ್ಮೊಂದಿಗೆ ಸದಾ ಇರುತ್ತದೆ. ಅಂತಹ ಅವಿನಾಶಿಯಾದ ಜ್ಞಾನದ ಬಂಡಾರವೇ ಪುಸ್ತಕಗಳು.

ಸೋಷಿಯಲ್ ಸೈನ್ಸ್ ಅಂಡ್ ಮೆಡಿಸಿನ್ ಎಂಬ ಸಂಶೋಧನಾ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಪುಸ್ತಕಗಳನ್ನು ಓದುವುದರಿಂದ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ.

ಪುಸ್ತಕಗಳನ್ನು ಓದದ ವಯಸ್ಕರಿಗೆ ಹೋಲಿಸಿದರೆ, ವಾರದಲ್ಲಿ ಮೂರುವರೆ ಗಂಟೆಗಳವರೆಗೆ ಪುಸ್ತಕಗಳನ್ನು ಒದುವವರು ಸಾಯುವ ಸಾಧ್ಯತೆ  ಶೇ17 ಪ್ರತಿಶತ ಕಡಿಮೆ – ಮತ್ತು ವಾರಕ್ಕೆ ಮೂರುವರೆ ಗಂಟೆಗಳಿಗಿಂತ ಹೆಚ್ಚು ಓದುವವರು ಶೇಖಡಾ 23 ಪ್ರತಿಶತ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ.

ಅಧ್ಯಯನದಲ್ಲಿ, ಪುಸ್ತಕಗಳನ್ನು ಓದದವರಿಗಿಂತ ಪುಸ್ತಕಗಳನ್ನು ಓದುವವರು ಸುಮಾರು 2 ವರ್ಷಗಳು ಹೆಚ್ಚು ಕಾಲ ಬದುಕಿದ್ದಾರೆ ಎಂದು ಆ ಅಧ್ಯಯನದ ದತ್ತಾಂಶ ತಿಳಿಸಿದೆ.

ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿರುವ ಹೆಸರಾಂತ ಪುಸ್ತಕ ಮಳಿಗೆಗಳ ಸಣ್ಣ ಪರಿಚಯ ನಿಮಗಾಗಿ…

  • ಬುಕ್ ಸ್ಟಾಪ್ ! (ಕೋರಮಂಗಲ) :

ಇದೊಂದು ನೆಲಮಾಳಿಗೆಯಲ್ಲಿರುವ ಒಂದು ವಿಶೇಷವಾದ ಸಣ್ಣ ಪುಸ್ತಕ ಅಂಗಡಿಯಾಗಿದೆ. ಈ ಅಂಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ನಿಮ್ಮನ್ನು ಸ್ವಾಗತಿಸಲು ಸಾಂಪ್ರದಾಯಿಕ ಬೆಲ್ ಸೆಟ್ಟಿಂಗ್. ನಗರದ ಇತರೆ ಪುಸ್ತಕ ಮಳಿಗೆಗಳಿಗೆ ಇದನ್ನು ಹೋಲಿಸಿದರೆ ಗಾತ್ರದಲ್ಲಿ ಇದು ಸಣ್ಣದಾದರೂ ಅತ್ಯುತ್ತಮ ಪುಸ್ತಕಗಳ ಆವೃತಿಗಳನ್ನು ತನ್ನಲ್ಲಿ ಹೊಂದಿರುವ ಅಂಗಡಿಗಳಲ್ಲಿ ಒಂದೆನಿಸಿದೆ.

  • ಬ್ಲಾಸಂ ಬುಕ್ ಹೌಸ್ ( ಚರ್ಚ್ ರಸ್ತೆ) :

ಈ ಸ್ಥಳವು ಸುಸಜ್ಜಿತವಾಗಿದ್ದು, ಇಲ್ಲಿ ಹೊಸ ಬರಹಗಾರರ ಪುಸ್ತಕಗಳನ್ನೂ ಕೂಡಾ ಮಾರಾಟ ಮಾಡಲಾಗುತ್ತದೆ. ಈ ಮಳಿಗೆಯು ಕಡಿಮೆ ಬೆಲೆಗೆ ಪುಸ್ತಕಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಪುಸ್ತಕ ಮೇಳಗಳಿಗಿಂತ ಇಲ್ಲಿ ಬೆಲೆ ಹೆಚ್ಚಾಗಿದ್ದರೂ ಬ್ಲಾಸಂ ತನ್ನದೇ ಆದ ಒಂದು ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ

  • ಹಿಗ್ಗಿನ್‌ ಬೋಥಮ್ಸ್ (ಎಂಜಿ ರಸ್ತೆ):

ಇದು ಬೆಂಗಳೂರಿನ ಅತ್ಯಂತ ಹಳೆಯ ಪುಸ್ತಕ ಮಳಿಗೆಗಳಲ್ಲಿ ಒಂದು. ಒಂದು ಶತಮಾನದಷ್ಟು ಹಳೆಯದಾದ, ವಸಾಹತುಶಾಹಿ ಶೈಲಿಯ ಕಟ್ಟಡದಲ್ಲಿರುವ ಹಿಗ್ಗಿನ್‌ ಬೋಥಮ್ಸ್ ಪುಸ್ತಕ ಮಳಿಗೆ ಓದುಗರ ಸ್ವರ್ಗ.

  • ಬುಕ್ ಫೇರ್ (ಕೋರಮಂಗಲ) :

ಸಾಕಷ್ಟು ಹೆಸರುವಾಸಿಯಾಗಿರುವ ಪುಸ್ತಕದಂಗಡಿಯಾಗಿರುವ ಬುಕ್ ಫೇರ್ ಕೆಲವು ವಿಶಿಷ್ಟ ಸಂಗ್ರಹಗಳನ್ನು ಹೊಂದಿದೆ. ಇಲ್ಲಿ ಪುಸ್ತಕಗಳ ದರಕ್ಕೆ ಅನುಗುಣವಾಗಿ ವಿಭಾಗ ಮಾಡಲಾಗಿದ್ದು 100, 200 ಮತ್ತು 500 ರೂಗಳಾಗಿ ವಿಂಗಡಿಸಲಾಗಿದೆ.

  • ಸಪ್ನ ಬುಕ್ ಹೌಸ್ (ಕೋರಮಂಗಲ/ಇಂದಿರಾನಗರ ) :

ಎಂಬಿಎ ಮತ್ತು ಐಐಟಿ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡುವ ಪುಸ್ತಕಗಳನ್ನು ಈ ಮಳಿಗೆಯು ಮಾರಾಟ ಮಾಡುವುದರಿಂದ ಇದು ವಾಣಿಜ್ಯ ಮಳಿಗೆಯಾಗಿಯೂ ಗುರುತಿಸಲ್ಪಡುತ್ತದೆ. ಈ ಮಳಿಗೆಯು ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪುಸ್ತಕ ಖರೀದಿಗೆ ಒಂದು ದೊಡ್ಡ ಕೇಂದ್ರವಾಗಿದೆ.

  • ಬುಕ್ ವರ್ಮ್ (ಚರ್ಚ್ ರಸ್ತೆ) :

ಇದನ್ನು 2002 ರಲ್ಲಿ ಕೃಷ್ಣ ಎಂಬವರು ಸ್ಥಾಪಿಸಿದರು, ಈ ಮಾರಾಟಗಾರನು ಪಾದಚಾರಿ ಮಾರ್ಗದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿ ಕೆಲವು ವರ್ಷ ಕಳೆದ ಮೇಲೆ ಈ ಪುಸ್ತಕದಂಗಡಿ ತೆರೆದರು.

ಭಾರತೀಯ ಪುರಾಣಗಳ ಪ್ರಕಾರ, ನಿತ್ಯ ಮಂತ್ರೋಚ್ಛಾರಣೆಯಿಂದ ಆಯುಷ್ಯ ವೃದ್ಧಿಸುತ್ತದೆ ಎನ್ನುತ್ತಾರೆ. ಇಲ್ಲಿ ಮಂತ್ರ ಎಂದರೆ ನಾವು ಆಡೋ ಪ್ರತೀ ಮಾತು, ಆ ಮಾತು ಮಂತ್ರವಾಗಬೇಕಾದರೆ ನಾವು ನಿತ್ಯ ಅಧ್ಯಯನದಲ್ಲಿ ತೊಡಗಬೇಕು. ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು – ಗುರುವೇ ದೇವರು.

  • – ದಿನೇಶ ಎಂ. ಹಳೆನೇರೆಂಕಿ.

ಟಾಪ್ ನ್ಯೂಸ್

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

renukaacharya

Waq ಹೋರಾಟಕ್ಕೆ ವಿಜಯೇಂದ್ರ ತಂಡಗಳೇ ಅಧಿಕೃತ: ರೇಣುಕಾಚಾರ್ಯ

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.