ಲಂಡನ್ ನಲ್ಲಿ ಕಳವಾದ ದುಬಾರಿ ಬೆಂಟ್ಲಿ ಕಾರು ಪಾಕಿಸ್ಥಾನದಲ್ಲಿ ಪತ್ತೆ! ಹೇಗೆ ಗೊತ್ತಾ?
Team Udayavani, Sep 4, 2022, 1:28 PM IST
ಕರಾಚಿ: ಹಲವು ವಾರಗಳ ಹಿಂದೆ ಲಂಡನ್ ನಲ್ಲಿ ಕಳವಾರ ದುಬಾರಿ ಬೆಲೆಯ ಬೆಂಟ್ಲಿ ಕಾರೊಂದು ಪಾಕಿಸ್ಥಾನದ ಕರಾಚಿ ನಗರದಲ್ಲಿ ಪತ್ತೆಯಾಗಿದೆ. ಕಸ್ಟಮ್ಸ್ ಇಲಾಖೆಯವರು ಕರಾಚಿಯ ಬಂಗಲೆಯೊಂದಕ್ಕೆ ದಾಳಿ ಮಾಡಿ ಈ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ನ ರಾಷ್ಟ್ರೀಯ ಅಪರಾಧ ದಳದ ಮಾಹಿತಿ ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ಕರಾಚಿಯ ಡಿಎಚ್ ಎ ಏರಿಯಾದ ಬಂಗಲೆಯೊಂದಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಬೆಂಟ್ಲಿ ಮುಲ್ಸಾನ್ನೆ ಸೆಡಾನ್ ಕಾರು ಪತ್ತೆಯಾಗಿದೆ.
ಕಾರಿನ ಕಳ್ಳತನದಲ್ಲಿ ತೊಡಗಿರುವವರು ಬೆಂಟ್ಲಿಯಲ್ಲಿ ಟ್ರೇಸಿಂಗ್ ಟ್ರ್ಯಾಕರ್ ಅನ್ನು ತೆಗೆದುಹಾಕಲು ಅಥವಾ ಸ್ವಿಚ್ ಆಫ್ ಮಾಡಲು ವಿಫಲರಾಗಿದ್ದಾರೆ. ಈ ಸುಧಾರಿತ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ವಾಹನದ ನಿಖರ ಸ್ಥಳವನ್ನು ಪತ್ತೆ ಮಾಡಲು ಯುಕೆ ಅಧಿಕಾರಿಗಳು ಸಫಲರಾಗಿದ್ದಾರೆ.
ದಾಳಿಯ ವೇಳೆಗೆ ಬೆಂಟ್ಲಿ ಕಾರಿನ ನಂಬರ್ ಪ್ಲೇಟ್ ಮತ್ತು ರಿಜಿಸ್ಟ್ರೇಶನ್ ದಾಖಲೆಯನ್ನು ಪಾಕಿಸ್ಥಾನಿ ರೂಪಕ್ಕೆ ಬದಲಾಯಿಸಿರುವು ಪತ್ತೆಯಾಗಿದೆ. ಆದರೆ ಕಳವಾದ ಕಾರಿನ ಚೇಸಸ್ ಸಂಖ್ಯೆಯು ಈ ಕಾರಿನ ಚೇಸಸ್ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗುತ್ತಿತ್ತು.
ಇದನ್ನೂ ಓದಿ:ಯುವತಿ ಬೇರೆ ಯುವಕನನ್ನು ಮದುವೆಯಾಗಿದ್ದಕ್ಕೆ ಆಕೆಯ ಪತಿಯನ್ನು ಅಟ್ಟಾಡಿಸಿ ಕೊಂದ ಪ್ರೇಮಿ!
ದಾಳಿಯ ವೇಳೆಗೆ ಮನೆಯ ಮಾಲಕ ಕಾರಿನ ಬಗ್ಗೆ ಸರಿಯಾದ ದಾಖಲೆ ಪತ್ರಗಳನ್ನು ಒದಗಿಸಲು ವಿಫಲನಾಗಿದ್ದ. ಮನೆ ಮಾಲಿಕ ಮತ್ತು ಆತನಿಗೆ ಕಾರನ್ನು ಮಾರಿದ್ದ ಬ್ರೋಕರ್ ನನ್ನು ಕೂಡಾ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇಡೀ ದಂಧೆಯಲ್ಲಿ ಭಾಗಿಯಾಗಿರುವವರು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಿಕೊಂಡು ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಕಸ್ಟಮ್ಸ್ ಅಧಿಕಾರಿಗಳ ಎಫ್ಐಆರ್ ಪ್ರಕಾರ, ಕಾರನ್ನು ಕಳ್ಳತನದ ಮೂಲಕ ಸಾಗಾಟ ಮಾಡಿದ ಕಾರಣ ಸುಮಾರು 300 ಮಿಲಿಯನ್ ಪಾಕಿಸ್ಥಾನಿ ರೂಪಾಯಿ ತೆರಿಗೆಯಿಂದ ಆರೋಪಿ ತಪ್ಪಿಸಿಕೊಂಡಿದ್ದ. ಇಡೀ ಘಟನೆಯ ಮಾಸ್ಟರ್ ಮೈಂಡ್ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.