ಕಾಂಗ್ರೆಸ್ ಪಕ್ಷಕ್ಕಾಗಿ ರಕ್ತ ನೀಡಿದೆ, ಆದರೆ… : ಕಿಡಿಕಾರಿದ ಗುಲಾಂ ನಬಿ ಆಜಾದ್
Team Udayavani, Sep 4, 2022, 4:14 PM IST
ಶ್ರೀನಗರ: ಇತ್ತೀಚೆಗೆ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಭಾನುವಾರ ಜಮ್ಮು ಜಿಲ್ಲೆಯ ಸೈನಿಕ್ ಫಾರ್ಮ್ಸ್‌ನಲ್ಲಿ ಮೆಗಾ ರ್ಯಾಲಿಯನ್ನು ನಡೆಸಿದ್ದಾರೆ. ಅಲ್ಲಿ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡಿದರು. “ನಾವು ಕಾಂಗ್ರೆಸ್ ಗಾಗಿ ನಮ್ಮ ರಕ್ತವನ್ನು ನೀಡಿದೆವು, ಆದರೆ ನಮ್ಮ ಸಹಾಯವನ್ನು ಕಾಂಗ್ರೆಸ್ ಮರೆತಿದೆ” ಎಂದರು.
ಸುಮಾರು 20,000 ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಆಜಾದ್, ಕಾಂಗ್ರೆಸ್ ಹಲವು ಶ್ರಮದಿಂದ ರಚಿಸಲಾಗಿದೆಯೇ ಹೊರತು ಟ್ವೀಟ್ ಗಳು ಮತ್ತು ಎಸ್‌ಎಂಎಸ್‌ಗಳಿಂದಲ್ಲ ಎಂದು ಟೀಕಿಸಿದರು.
“ಕಾಂಗ್ರೆಸ್ ಅನ್ನು ನಾವು ನಮ್ಮ ರಕ್ತದಿಂದ ರಚಿಸಿದ್ದೇವೆ, ಕಂಪ್ಯೂಟರ್ ಗಳಿಂದಲ್ಲ, ಟ್ವಿಟರ್‌ನಿಂದಲ್ಲ. ಜನರು ನಮ್ಮನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಅವರ ವ್ಯಾಪ್ತಿಯು ಕಂಪ್ಯೂಟರ್ ಮತ್ತು ಟ್ವೀಟ್ ಗಳಿಗೆ ಸೀಮಿತವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಎಲ್ಲಿಯೂ ಕಾಣಿಸುತ್ತಿಲ್ಲ” ಎಂದು ಆಜಾದ್ ಹೇಳಿದರು.
ಇದನ್ನೂ ಓದಿ:ಶಿಕ್ಷಣ ಇಲಾಖೆಯಲ್ಲೂ ಕಮಿಷನ್: ಬಿ.ಸಿ ನಾಗೇಶ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ತಮ್ಮ ಹೊಸ ಪಕ್ಷದ ಕುರಿತು ಮಾತನಾಡಿದ ಕಣಿವೆ ರಾಜ್ಯದ ಹಿರಿಯ ನಾಯಕ, ನಾನು ಪಕ್ಷದ ಹೆಸರಿನ ಬಗ್ಗೆ ಇದುವರೆಗೂ ನಿರ್ಧರಿಸಿಲ್ಲ. ಜಮ್ಮು ಕಾಶ್ಮೀರದ ಜನತೆ ನಮ್ಮ ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸಲಿದ್ದಾರೆ. ನಾನು ನಮ್ಮ ಪಕ್ಷಕ್ಕೆ ಎಲ್ಲರಿಗೂ ಅರ್ಥವಾಗುವಂತಹ ಹಿಂದೂಸ್ಥಾನಿ ಹೆಸರನ್ನು ನೀಡುತ್ತೇನೆ” ಎಂದು ಹೇಳಿದರು.
#WATCH | J&K: “People from Congress now go to jail in buses, they call DGP, Commissioners, get their name written & leave within an hour. That is the reason Congress has been unable to grow,” says Ghulam Nabi Azad at a public meeting in Jammu pic.twitter.com/SVjxTVUeQ4
— ANI (@ANI) September 4, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.