ಪುರಸಭೆ ವಾಣಿಜ್ಯ ಮಳಿಗೆ ನಿರ್ವಹಣೆಯಲ್ಲಿ ವಿಫಲ
Team Udayavani, Sep 4, 2022, 4:28 PM IST
ಹೊಳೆನರಸೀಪುರ: ಪಟ್ಟಣದ ಪುರಸಭೆಗೆ ಅದಾಯದ ದೃಷ್ಟಿಯಿಂದ ಕೋಟ್ಯಂತ ರ ರೂ. ವೆಚ್ಚದಲ್ಲಿ ಪ್ರಮುಖ ವೃತ್ತಗಳಲ್ಲಿ ಎರಡು ಅಂತಸ್ತಿನ ವಾಣಿಜ್ಯ ಮಳಿಗೆ ನಿರ್ಮಿಸಿದೆ. ಆದರೆ ಇವುಗಳ ನಿರ್ವಹಣೆ ಮಾಡುವಲ್ಲಿ ವಿಫಲವಾ ಗಿರುವುದರಿಂದ ವಾಣಿಜ್ಯ ಸಂಕಿರ್ಣಗಳ ಮೇಲೆ ಗಿಡಗಂಟಿಗಳು ಬೆಳೆದು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
ಪುರಸಭೆ ಅಧಾಯಕ್ಕಾಗಿ ಮಾಜಿ ಸಚಿವ ಹಾಗು ಶಾಸಕ ರೇವಣ್ಣ ಅವರು ಪಟ್ಟಣದ ಹಲವು ಹೃದಯ ಭಾಗಗಳಲ್ಲಿ ವಾಣಿಜ್ಯ ಸಂಕಿರ್ಣಗಳನ್ನು ನಿರ್ಮಿಸಿ ಅವುಗಳ ವಿಲೇವಾರಿ ಮಾಡಿರುವುದರಿಂದ ಪ್ರತಿ ತಿಂಗಳು ಪುರಸಭೆ ಲಕ್ಷಾಂತರ ರೂ.ಬಾಡಿಗೆ ರೂಪದಲ್ಲಿ ಬರ ತೊಡಗಿದೆ. ಆದರೆ ಈ ಮಳಿಗೆಗಳ ಸ್ವತ್ಛತೆ ಬಗ್ಗೆ ನಿರ್ವಹಿಸಬೇಕಾದ ಪುರಸಭೆ ಇತ್ತೀಚೆಗೆ ಯಾವುದನ್ನು ಮಾಡದೆ ಇರುವುದರಿಂದ ವಾಣಿಜ್ಯ ಸಂಕೀರ್ಣಗಳ ಮೇಲೆ ಗಿಡ ಮರಗಳು ಬೆಳೆದು ಬೇರು ಬಿಟ್ಟ ಪರಿಣಾ ಮ ಕಟ್ಟಡದ ಹಲವು ಭಾಗಗಳಲ್ಲಿ ಬಿರುಕು ಕಾಣಿಸಿ ಕೊಂಡು ತಂತಾನೇ ಬೀಳುವ ಹಂತ ತಲುಪಿದೆ. ಇದಕ್ಕೆ ಉದಾಹರಣೆಯಾಗಿ ಪುರಸಭೆಗೆ ಸೇರಿದ ವಾಣೀಜ್ಯ ಸಂಕಿರ್ಣ ಎಸ್‌ಎಲ್‌ಎ ನ್ ಚಿತ್ರಮಂದಿರಕ್ಕೆ ತೆರಳುವ ವಾಣಿಜ್ಯ ಸಂಕೀರ್ಣದಲ್ಲಿ ದೊಡ್ಡದಾದ ಗಿಡ ಬೆಳೆದು ನಿಂತಿರುವುದು ಮತ್ತು ಗೋಡೆಗಳ ಬಿರುಕು ಕಾಣಿಸಿಕೊಂಡಿದೆ.
ತಪ್ಪಿದ ಹೆಚ್ಚಿನ ಅನಾಹುತ: ಪುರಸಭೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕರ್ತವ್ಯದಲ್ಲಿ ಜಾಗೃತರಾಗಿದ್ದಾರೆ ಎಂಬುದಕ್ಕೆ ಪ್ರಸ್ತುತ ಪುರಸಭೆ ಕಚೇರಿ ಕಟ್ಟಡದ ಮೀಟಿಂಗ್ ಹಾಲ್‌ನ ಮೇಲ್ಛಾ ವಣಿ ಕುಸಿದುಬಿದ್ದ ಪರಿಣಾಮ ಯಾವುದೆ ಸಾವು ನೋವು ಸಂಭವಿಸಲಿಲ್ಲ. ಮೀಟಿಂಗ್ ಹಾಲ್ ಲಕ್ಷಾಂತರ ರೂ.ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸಭಾಂಗಣದ ಮೇಲ್ಚಾವಣಿ ಕುಸಿದು ಬಿದಿತ್ತು. ಅದೃಷ್ಟವಶಾತ್ ಆ ವೇಳೆಯಲ್ಲಿ ಯಾರೋಬ್ಬರು ಇಲ್ಲದೆ ಪ್ರಾಣಾಪಾಯ ಸಂಭವಿಸಿಲ್ಲ. ಇದಕ್ಕಾಗಿ ಪುರಸಭೆ ದುರಸ್ತಿಗೆ ಮುಂದಾಗಿದೆ. ಇದಕ್ಕೆಲ್ಲ ಕಾರಣ ಪುರಸಭೆ ಅಧಿಕಾರಿಗಳ ಬೇಜಾವಾಬ್ದರಿತ ಎಂದು ಹೇಳಲಾಗಿದೆ.
ಈ ಬಗ್ಗೆ ಪುರಸಭೆ ಅಧ್ಯಕ್ಷೆ ಸುಧಾನಳಿನ ಅವರನ್ನು ಸಂಪರ್ಕಿಸಿದಾಗ ಹೌದು ಪುರ ಸಭೆ ಸಭಾಂಗಣದ ಮೇಲ್ಛಾವಣಿ ಕುಸಿದಿದೆ. ಜೊತೆಗೆ ಕುಸಿದ ವೇಳೆ ನಾವು ಗಳು ಸಹ ಸ್ಥಳದಲ್ಲೆ ಇದ್ದೆವು, ಅದೃಷ್ಟವಶಾತ್ ನಮ್ಮ ತಲೆಯ ಮೇಲೆ ಬೀಳದೆ ಸ್ವಲ್ಪ ದೂರದಲ್ಲಿ ಬಿತ್ತೆಂದು ತಿಳಿಸಿ ಈ ಸಭಾಂಗಣದ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.