ಸಾಲ ಪಡೆಯುವ ನೇಕಾರರಿಗೆ ಇಲಾಖೆ ಅನುಮತಿ ಕಡ್ಡಾಯ: ಶಾಸಕ ಸಿದ್ದು ಸವದಿ
Team Udayavani, Sep 4, 2022, 6:44 PM IST
ರಬಕವಿ-ಬನಹಟ್ಟಿ : ಶೇ.1 ಮತ್ತು ಶೇ.3 ಬಡ್ಡಿ ದರದ ಆಕರಣೆಯಲ್ಲಿ ರಾಜ್ಯದಲ್ಲಿನ ನೇಕಾರರಿಗೆ ಒದಗಿಸುತ್ತಿರುವ ಯೋಜನೆಯು ಸುಲಭವಾಗಿ ಹಾಗೂ ಸರಳೀಕರಣವಾಗಲು ಜವಳಿ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿದ್ದು, ಇದರಿಂದ ಸರ್ಕಾರದ ಸೌಲಭ್ಯಗಳು ದೊರಕುವಲ್ಲಿ ಸಾಧ್ಯ. ಬದಲಾಗಿ ಅನುಮತಿಯಿಲ್ಲದೆ ಬ್ಯಾಂಕ್ ,ಸಹಕಾರಿ ಸಂಘಗಳಲ್ಲಿ ಪಡೆದ ಸಾಲಕ್ಕೆ ಮಾನ್ಯತೆಯಿಲ್ಲದಂತಾಗುವದೆಂದು ತೇರದಾಳ ಶಾಸಕ ಸಿದ್ದು ಸವದಿ ನೇಕಾರರಿಗೆ ಕಿವಿಮಾತು ಹೇಳಿದರು.
ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಬನಹಟ್ಟಿ ಹಟಗಾರ ಸೊಸೈಟಿ ಹಾಗೂ ಕಾಡಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 2017 ರಿಂದ ನೇಕಾರರಿಗೆ ದೊರಕಬೇಕಾದ ಶೇ.1 ಮತ್ತು ಶೆ.3 ಬಡ್ಡಿ ದರದ ಸಹಾಯ ಧನವು ಇದೀಗ ಬಿಡುಗಡೆಗೊಂಡಿದ್ದು, ತಿಂಗಳೊಳಗಾಗಿ ಎಲ್ಲ ನೇಕಾರ ಸಾಲಗಾರರ ಖಾತೆಗೆ ಜಮೆಯಾಗಲಿದೆ. ಶೀಘ್ರವೇ ಸರ್ಕಾರದಿಂದ ಸುತ್ತೋಲೆಯೊಂದಿಗೆ ಬರಲಿದ್ದು, ನಿಯಮಾನುಸಾರ ಆಯಾ ಸಹಕಾರಿ ಬ್ಯಾಂಕ್ ಹಾಗು ಸಂಘಗಳು ಪಾಲನೆಯೊಂದಿಗೆ ನ್ಯಾಯಯುತವಾಗಿ ನೇಕಾರ ಸಮುದಾಯಕ್ಕೆ ಈ ಯೋಜನೆ ತಲುಪವಂತೆ ಪ್ರಾಮಾಣಿಕವಾಗಿ ಕಾರ್ಯ ನಡೆಸಬೇಕೆಂದು ಸವದಿ ಮನವಿ ಮಾಡಿದರು.
2008 ರಲ್ಲಿಯೇ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರ ಅವಧಿಯಿಂದ ಈ ಯೋಜನೆ ಜಾರಿಯಲ್ಲಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗು ತಾಂತ್ರಿಕ ತೊಂದರೆಯಿಂದ ನೇಕಾರರಿಗೆ ದೊರಕಬೇಕಾದ ಸೌಲಭ್ಯ ವಿಳಂಬಕ್ಕೆ ಸವದಿ ಕ್ಷಮೆಯಾಚಿಸಿದರು.
ರೈತರಂತೆ ನೇಕಾರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯಡಿ ಸೌಲಭ್ಯ ಹಾಗು ನೇಕಾರ ಸಮ್ಮಾನ ಯೋಜನೆಯಲ್ಲಿ ಕೈಮಗ್ಗವಷ್ಟೇ ಅಲ್ಲದೆ ಪ್ರತಿ ಕೂಲಿ ನೇಕಾರನಿಗೂ ಪ್ರಸಕ್ತ ವರ್ಷದಿಂದ ವಾರ್ಷಿಕ 5 ಸಾವಿರ ರೂ. ತಲುಪಿಸುವಲ್ಲಿ ಶೀಘ್ರ ವ್ಯವಸ್ಥೆ ಮಾಡಲಾಗುವದು. ಒಟ್ಟಾರೆ ನೇಕಾರ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಉದ್ದೇಶವಾಗಿದೆ ಎಂದರು.
ರಾಜ್ಯದ ಕೆಎಚ್‌ಡಿಸಿ ನಿಗಮವು 160 ಕೋಟಿ ರೂ.ಗಳಷ್ಟು ಹಾನಿಯಲ್ಲಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿರುವ ನಿಗಮವನ್ನು ಹೊರೆ ಹಾಕಿದರೂ, ಪ್ರಾಮಾಣಿಕವಾಗಿ ಸೇವೆ ಒದಗಿಸಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವಧಿಯೊಳಗಾಗಿ ಲಾಭದತ್ತ ಕೊಂಡೊಯ್ಯುವ ಉದ್ದೇಶವಾಗಿದೆ ಎಂದರು.
ವಾಮಮಾರ್ಗದೊಂದಿಗೆ ದುರುಪಯೋಗದಿಂದ ಸಹಕಾರಿ ಬ್ಯಾಂಕ್ ಹಾಗು ಸಂಘಗಳಲ್ಲಿ ಅಕ್ರಮವೆಸಗಿ, ನೈಜ ನೇಕಾರರಿಗೆ ಯೋಜನೆಗಳು ಕಂಟಕವಾಗಿದ್ದು, ಪಾರದರ್ಶಕವಾಗಿದ್ದಲ್ಲಿ ಜವಳಿ ಕ್ಷೇತ್ರ ಉಳಿವಿಗೆ ಸಾಧ್ಯ.–ಸಿದ್ದು ಸವದಿ, ಶಾಸಕರು, ತೇರದಾಳ ಮತಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.