ಸೌರ ಬೆಳಕು ಭಾಗ್ಯ: ಘೋಷಿಸಿದ್ದು ಐದು, ಸಿಕ್ಕಿದ್ದು ಹತ್ತು ಕುಟುಂಬಗಳಿಗೆ !

ಕರ್ಣಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಅಡಿ‌ ಅನುಷ್ಠಾನ

Team Udayavani, Sep 4, 2022, 8:10 PM IST

1-d-sdsad

ಶಿರಸಿ: ಬೆಳಕೇ ಇಲ್ಲದ, ಬೆಳಕಿದ್ದೂ ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆಯ ಸಮಸ್ಯೆಯಲ್ಲಿದ್ದ ಪ್ರತಿಭಾವಂತ ಮಕ್ಕಳಿದ್ದ ಮನೆಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಜತೆಯಾಗಿ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಬೆಳಕಿನ ಭಾಗ್ಯ ಒದಗಿಸಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ ತಾಲೂಕಿನ ಹತ್ತು ಕುಟುಂಬಗಳಿಗೆ ಸೌರ ವಿದ್ಯುತ್ ಕೊಡಲಾಗುತ್ತಿದೆ. ಗಣೇಶ ಹಬ್ಬದ ಮೊದಲೇ ಐದಕ್ಕೂ ಅಧಿಕ ಕುಟುಂಬಗಳಿಗೆ ಸೌರ ಬೆಳಕು ನೀಡಲಾಗಿದ್ದು, ಮಾಸಾಂತ್ಯದೊಳಗೆ ಉಳಿದ ಫಲಾನುಭವಿ ಮನೆಗಳಿಗೂ ಸೆಲ್ಕೋ ಸೌರ ಬೆಳಕು ಬೆಳಗಲಿದೆ.

ನಮ್ಮನೆ ಹಬ್ಬದಲ್ಲಿ ಘೋಷಣೆ

ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನಡೆಸಿದ ನಮ್ಮನೆ ಹಬ್ಬದ ದಶಮಾನೋತ್ಸವದಲ್ಲಿ ನಮ್ಮನೆ ಪ್ರಶಸ್ತಿ ಸ್ವೀಕರಿಸಿದ್ದ ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರು ಟ್ರಸ್ಟ್ ಆಯ್ಕೆ ಮಾಡಿಕೊಟ್ಟ ಓದುವ ಮಕ್ಕಳಿರುವ ಐದು
ಕುಟುಂಬಗಳಿಗೆ ಉಚಿತವಾಗಿ ಸೌರ ಬೆಳಕಿನ ನೆರವು ಒದಗಿಸುವದಾಗಿ ಪ್ರಕಟಿಸಿದ್ದರು. ವಿದ್ಯುತ್ ಇಲ್ಲದ ಅಥವಾ ಕೊರತೆ ಅನುಭವಿಸುತ್ತಿರುವ ಕುಟುಂಬಗಳಿಗೆ ನಮ್ಮನೆ ಹಬ್ಬದ ಬೆಳಕಾಗಿಸುವ ಭರವಸೆ ನೀಡಿದ್ದರು. ಆ ಬೆಳಕಿನ ಯೋಜನೆ ಕರ್ನಾಟಕ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನಕ್ಕೆ ಬಂದಿದೆ. ಬರಲಿರುವ ಡಿಸೆಂಬರ್‌ನಲ್ಲಿ ನಡೆಯಲಿರುವ ಹನ್ನೊಂದನೇ ವರ್ಷದ ನಮ್ಮನೆ ಹಬ್ಬದೊಳಗೆ ಬೆಳಕಿನ ಭಾಗ್ಯ ಈಡೇರುತ್ತಿದೆ ಎಂಬುದು ವಿಶೇಷವಾಗಿದೆ.

ಆಯ್ಕೆಗೆ ಹೊಸ ಮಾರ್ಗ!
ಫಲಾನುಭವಿಗಳ ಆಯ್ಕೆಗೆ ವಿಶ್ವಶಾಂತಿ ಸೇವಾ ಟ್ರಸ್ಟ್ ಹೊಸ ವಿಧಾನ ಅನುಸರಿಸಿತು. ಶಿಕ್ಷಣ ಇಲಾಖೆ ಮೂಲಕ ವಿದ್ಯಾರ್ಥಿಗಳ ಆಯ್ಕೆ, ಹೆಸ್ಕಾಂ, ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಪ್ರಮುಖರ ಮೂಲಕ ಅರ್ಹ ಕುಟುಂಬಗಳ ಆಯ್ಕೆಗೆ ಯೋಜಿಸಿತು. ಶಿಕ್ಷಣ ಇಲಾಖೆಯ ಡಿಡಿಪಿಐ ಬಸವರಾಜು, ಬಿಇಓ ಎಂ.ಎಸ್.ಹೆಗಡೆ, ಹೆಸ್ಕಾಂ ಅಧಿಕಾರಿಗಳಾದ ಧರ್ಮ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಹುಬ್ಬಳ್ಳಿಯ ಉದ್ಯೋಗಿ ಜಗನ್ನಾಥ ಎಂ.ಪಿ., ಭಾಗವತರಾದ ಕೇಶವ ಹೆಗಡೆ ಕೊಳಗಿ, ತುಳಗೇರಿ ಗಜಾನನ ಹೆಗಡೆ, ಕಲಾವಿದ ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ, ಲಕ್ಷ್ಮೀನಾರಾಯಣ ಶಿರಗುಣಿ, ಅಂಕಣಕಾರ ವೈಶಾಲಿ ವಿ.ಪಿ.ಹೆಗಡೆ, ಗ್ರಾ.ಪಂ. ಸದಸ್ಯ ಸಂದೇಶ ಭಟ್ಟ ಬೆಳಖಂಡ ಸೇರಿದಂತೆ ಇತರರು
ಫಲಾನುಭವಿಗಳ ಆಯ್ಕೆಗೆ ನೆರವಾದರು. ಸಿದ್ದಾಪುರ, ಶಿರಸಿ, ಯಲ್ಲಾಪುರ, ಅಂಕೋಲಾ ತಾಲೂಕಿನ ಹತ್ತು ಫಲಾನುಭವಿಗಳನ್ನು ಹುಡುಕಿ ಆಯ್ಕೆ ಮಾಡಲಾಯಿತು.

ಹೇಳಿದ್ದು ಐವರಿಗೆ, ಕೊಟ್ಟಿದ್ದು 10 ಕುಟುಂಬಕ್ಕೆ!

ಸೆಲ್ಕೊ ಸಂಸ್ಥೆಯ ಸಿಇಓ ಮೋಹನ ಹೆಗಡೆ ಅವರು ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಶಿಕ್ಷಣಕ್ಕಾಗಿ ಬೆಳಕು ಯೋಜನೆ ಅಡಿಯಯಲ್ಲಿ ಐದು ಕುಟುಂಬಗಳಿಗೆ ಬೆಳಕು ನೀಡುವ ಪ್ರಸ್ತಾಪ ಮಾಡಿದ್ದರು. ಆದರೆ, ಆಯ್ಕೆ ವೇಳೆ ಐದಕ್ಕಿಂತ ಅಧಿಕ ಕುಟುಂಬಗಳು ಸಿಕ್ಕ ಕಾರಣಕ್ಕೆ ಇನ್ನೂ ಹೆಚ್ಚುವರಿಯಾಗಿ ಒಟ್ಟೂ ಹತ್ತು ಕುಟುಂಬಗಳಿಗೆ ನೆರವಾಗುವ ವಾಗ್ದಾನ ನೀಡಿದರು. ಘೊಷಿಸಿದ್ದು ಐದು ಕುಟುಂಬಕ್ಕೆ ಬೆಳಕಾದರೂ ಈಗ ಕೊಡುತ್ತಿರುವದು ಹತ್ತು ಕುಟುಂಬಕ್ಕೆ ಆಗಿದೆ!. ಕಾಡಿನ ನಡುವೆ ಇರುವ ಮನೆಗೆ ಬೆಳಕಿಲ್ಲದೇ, ಮಕ್ಕಳನ್ನು ಬಂಧುಗಳ ಮನೆಯಲ್ಲಿ ಉಳಿಸಿ ಕಳಿಸುತ್ತಿರುವವರು, ಓದಲು ಸೀಮೆ ಎಣ್ಣೆ ದೀಪಕ್ಕೂ ತತ್ವಾರ ಪಡುವ ಕುಟುಂಬಗಳು, ಪಕ್ಕದ ಮನೆಯಿಂದ ವಿದ್ಯುತ್ ಸಂಪರ್ಕ ಪಡೆದು ಒಂದು ಬಲ್ಬ ಹಾಕಿಕೊಂಡವರು, ವೃದ್ಧರಾದ ಅಜ್ಜಿ, ಮೊಮ್ಮಕ್ಕಳು ಇದ್ದರೂ ತಾಂತ್ರಿಕ ಕಾರಣದಿಂದ ಬೆಳಕು ಸಿಗದವರು, ಆಧಾರ ಕಾರ್ಡಿನ ಹೆಸರು ವ್ಯತ್ಯಾಸದಿಂದ ಬೆಳಕು ಸಿಗದವರು, ಕುಟುಂಬದ ಆಧಾರದ ಅಪ್ಪನಿಗೇ ಆರೋಗ್ಯ ಸಮಸ್ಯೆ ಇದ್ದೂ ಸಾಧನೆ ಮಾಡಿದ ವಿದ್ಯಾರ್ಥಿನಿ, ಕರೆಂಟ್ ಇದ್ದೂ ಗಾಳಿ ಮಳೆ ಬಂದರೆ ಕೈಕೊಡುವ ಬೆಳಕಿನ ಮನೆಗೆ, ಹೀಗೆ ಎಲ್ಲ ಬಗೆಯ ಸಮಸ್ಯೆ ಉಳ್ಳವರೂ ಫಲಾನುಭವಿ ಆಯ್ಕೆ ಪಟ್ಟಿಯಲ್ಲಿ ಇದ್ದರು. ನಾಲ್ಕಕ್ಕೂ ಅಧಿಕ ಮಕ್ಕಳ ಕುಟುಂಬಕ್ಕೆ ಬೆಳಕಿಲ್ಲ, ಬೆಳಕಿನ ತೊಂದರೆ ಇರುವದನ್ನು ಸ್ವತಃ ಆಯಾ ಶಾಲಾ ಮುಖ್ಯೋ ಧ್ಯಾಪಕರೂ ಶಿಫಾರಸು ಮಾಡಿದ್ದೂ ವಿಶೇಷವೇ ಆಗಿದೆ.

ಯಾರಿಗೆಲ್ಲ ಬೆಳಕಿನ ಸ್ಪರ್ಶ?

ಶಿರಸಿ ನಗರದಿಂದ ದೂರ ಇರುವ ಶಿರಗುಣಿ ಸಮೀಪದ ರಾಯರಮನೆ ಮಂಜುನಾಥ ಗೌಡ, ಸುಮಿತ್ರಾ ಮರಾಠಿ ಬಾಳೆಕಾಯಿಮನೆ, ದಿನೇಶ ಅರಸಿಕೆರೆ, ರಮ್ಯಾ ಮರಾಠಿ ಬಾಳೆಕಾಯಿಮನೆ, ಶಿರಸಿ, ಕರಿಗುಂಡಿ ಸೀತಾ ಜೋಗಳೇಕರ್, ಸಿದ್ದಾಪುರದ ಕಲಾವಿದ, ಗೃಹೋದ್ಯೋಗಿ ವೆಂಕಟ್ರಮಣ ಹೆಗಡೆ ಮಾದಿನಕಳ್ಳು, ಯಲ್ಲಾಪುರ ಹೆಮ್ಮಾಡಿ ಸಿಂಧೂ ಮಧುಕೇಶ್ವರ ನಾಯ್ಕ, ಬನವಾಸಿ ಭಾಸಿ ಸಣ್ಮನೆ ಸಂದೇಶ ಕಾಳೇನರ್, ರಮ್ಯಾ ಬಂದಿಗೇರ ಸಣ್ಮನೆ, ಅಂಕೋಲಾದ ಅಚವೆ ತಿಮ್ಮಾ ಗೌಡ ಹುಡಗೋಡ ಕುಟುಂಬ ಆಯ್ಕೆ ಆಗಿದೆ.

ಕರೆಂಟ್ ಇಲ್ಲದೇ ಮಕ್ಕಳಿಗೆ ಓದುವ ಸಮಸ್ಯೆ ಆಗುತ್ತಿತ್ತು. ಪರೀಕ್ಷೆ ಎದುರಿಗೇ ಕರೆಂಟ್ ಇರುತ್ತಿರಲಿಲ್ಲ, ಬೆಳಕು ನೀಡಿ ಉಪಕಾರ ಆಗಿದೆ ಎಂದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಸಂಸ್ಥೆಯ ನೆರವಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆ ಉಳಿಸಬೇಕು ಎಂದು ಆರಂಭಿಸಿದ ನಮ್ಮನೆ ಹಬ್ಬ ಈಗ ಹತ್ತು ಕುಟುಂಬಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೊ ಸಂಸ್ಥೆಯ ಮೂಲಕ ಮನೆಗಳಿಗೆ ಬೆಳಕಾಗುತ್ತಿರುವದು ಖುಷಿ ತಂದಿದೆ.
– ಗಾಯತ್ರೀ ರಾಘವೇಂದ್ರ, ಟ್ರಸ್ಟ್ ಕಾರ್ಯದರ್ಶಿ

ಕರ್ನಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿಕ್ಷಣ ಕ್ಕಾಗಿ ಬೆಳಕು ಯೋಜನೆ ಅನ್ವಯ ಈ ಕೆಲಸ ಆಗಿದೆ. ಬ್ಯಾಂಕ್ ನ ಎಂ.ಡಿ. ಮಹಾಬಲೇಶ್ವರ ಅವರ ಅತ್ಯಂತ ಯಶಸ್ವೀ ಕನಸು ಇದು. ಬೆಳಕಿಲ್ಲದೇ ವಿದ್ಯಾಭ್ಯಾಸಕ್ಕಾಗಿ ಅವರುಗಳು ಪಡುತ್ತಿರುವ ಶ್ರಮ ಇದರಿಂದ ಪರಿಹಾರ ಆಯಿತು ಎಂಬುದು ಸಮಾದಾನ. ವಿಶ್ವ ಶಾಂತಿ ಧ್ಯೇಯದ ನಮ್ಮನೆ ಹಬ್ಬದ ಅರ್ಥ ಪೂರ್ಣ ಯಶಸ್ಸು ಇದು. ಸಾಂಸ್ಕೃತಿಕ ಕಾರ್ಯ ಎಂದರೆ ಕೇವಲ ರಂಜನೆ ಅಲ್ಲ, ಸಮಾಜದ ಸಂಕಟವನ್ನು ಅರಿಯಲು ಹಾಗೂ ಪರಿಹಾರ ದೊರಕಿಸಲು ಇರುವ ವೇದಿಕೆಯೂ ಆದುದು ಬೆಲೆ ಕಟ್ಟಲಾಗದ ನಿಜವಾದ ಯಶಸ್ಸು.
– ಮೋಹನ ಭಾಸ್ಕರ ಹೆಗಡೆ, ಸಿಇಓ ಸೆಲ್ಕೋ ಇಂಡಿಯಾ

ಟಾಪ್ ನ್ಯೂಸ್

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.