ಎಸ್ಸಿ, ಎಸ್ಟಿಗೆ ಉಚಿತ ವಿದ್ಯುತ್ ನಿಯಮ ಪರಿಷ್ಕರಣೆಗೆ ಆದೇಶ ವಾಪಸ್
Team Udayavani, Sep 4, 2022, 8:48 PM IST
ಬೆಂಗಳೂರು: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಸಂಬಂಧ ಹೊರಡಿಸಲಾಗಿದ್ದ ಆದೇಶವನ್ನು ಸರಕಾರ ಹಿಂಪಡೆದಿದೆ.
ಯೋಜನೆಗೆ ಸಂಬಂಧಿಸಿ ವಿಧಿಸಿದ ಕೆಲವು ನಿಯಮಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಆಗಸ್ಟ್ 24ರಂದು ಹೊರಡಿಸಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ. ಪರಿಷ್ಕರಣೆಯೊಂದಿಗೆ ಮರುಜಾರಿಗೆ ಬರಲಿದೆ ಎಂದು ಇಲಾಖೆ ತಿಳಿಸಿದೆ.
ಗ್ರಾಹಕರು ಸಲ್ಲಿಸಿರುವ ಅರ್ಜಿಗಳ ವೀಕ್ಷಣೆ ಮತ್ತು ಪರಿಶೀಲನೆ, ಡೌನ್‌ಲೋಡ್ ಮಾಡಿದ ಎಕ್ಸೆಲ್ ಫೈಲ್ ಮಾಹಿತಿಯನ್ನು ಉಪವಿಭಾಗ ಮಟ್ಟದ ಎಲ್1 ಅಧಿಕಾರಿಗಳಿಗೆ ಪರಿಶೀಲಿಸಲು ಕಳುಹಿಸುವುದು, ಸುವಿಧಾ ಪೋರ್ಟಲ್‌ನಲ್ಲಿ ಹೊಸ ಗ್ರಾಹಕರ ಅರ್ಜಿಗಳ ಒನ್‌ಟೈಮ್ ಪರಿಶೀಲನೆ, ಪ್ರತಿ ತಿಂಗಳ ಮಾಹಿತಿಯ ಪರಿಶೀಲನೆ ಸಹಿತ ವಿವಿಧ ನಿಯಮಗಳನ್ನು ಒಳಗೊಂಡಂತೆ ಆಗಸ್ಟ್ 24ರಂದು ಸುತ್ತೋಲೆ ಹೊರಡಿಸಲಾಗಿತ್ತು. ಈ ಆದೇಶವನ್ನು ಮಾತ್ರ ಹಿಂಪಡೆಯಲಾಗಿದೆ ಎಂದು ಇಲಾಖೆ ಪ್ರಕಟನೆ ತಿಳಿಸಿದೆ.
ಯೋಜನೆ ಘೋಷಣೆ ಬಳಿಕ ಈವರೆಗೆ ಇಂಧನ ಇಲಾಖೆ ಹೊರಡಿಸಿದ ಮೂರನೇ ಸುತ್ತೋಲೆ ಇದಾಗಿದೆ. ಮೊದಲಿಗೆ ಯೋಜನೆ ಜಾರಿ ಕುರಿತು ಹೊರಡಿಸಲಾಗಿತ್ತು. ಅನಂತರದಲ್ಲಿ ಪರಿಷ್ಕರಣೆಯೊಂದಿಗೆ ಆದೇಶ ಹೊರಡಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.