ಮೂಡಲಗಿ: ಪಾದ ಪೂಜೆ ಸಲ್ಲಿಸಿ ಪತ್ರಿಕಾ ವಿತರಕರ ದಿನಾಚರಣೆ ಆಚರಣೆ
Team Udayavani, Sep 4, 2022, 10:13 PM IST
ಮೂಡಲಗಿ: ಪತ್ರಿಕಾ ವಿತರಕರ ಪಾದ ಪೂಜೆಯನ್ನು ಮಾಡುವ ಮೂಲಕ ಮೂಡಲಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕ ಹಾಗೂ ಮಾಧ್ಯಮ ವಿವಿಧ ಸಂಘಟನೆಯವರು ಭಾನುವಾರ ಪತ್ರಿಕಾ ವಿತರಕರ ದಿನಾಚರಣೆಯನ್ನು ಇಡೀ ರಾಜ್ಯದಲ್ಲಿ ಮೊದಲ ಭಾರಿಗೆ ವಿಶೇಷ ಮಾದರಿಯಾಗಿ ಆಚರಿಸಿದರು.
ರವಿವಾರದಂದು ಪಟ್ಟಣದ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಆಯೋಜಿಸಲಾದ ಪತ್ರಿಕಾ ವಿತರಕರ ದಿನಾಚಾರಣೆಯ ಕಾರ್ಯಕ್ರಮದ ಅಂಗವಾಗಿ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಶಿವಬಸು ಗಾಡವಿ ಅವರು ಪತ್ರಿಕಾ ವಿತರಕರ ಪಾದಗಳನ್ನು ನೀರಿನಿಂದತೊಳೆದು ಪೂಜೆಯನ್ನು ಸಲ್ಲಿಸಿ, ಅವರ ಪಾದಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ನಂತರ ವಿತರಕರಿಗೆ ಸಿಹಿ ತಿನಿಸಿ ಶಾಲು, ಹೂಮಾಲೆ ಹಾಕಿ. ಪೆನ್, ನೋಟ್ ಬುಕ್‌ಗಳನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳ ಬೆಳವಣಿಗೆಗೆ ಪ್ರಮುಖ ಕಾರಣಿಕರ್ತರು ವಿತರಕರು ಹಾಗಾಗಿ ಅವರನ್ನು ನಾವೆಲ್ಲರೂ ಗೌರದಿಂದ ಪಾದ ಪೂಜೆ ಮಾಡುವ ಮೂಲಕ ಸತ್ಕಾರಿಸಿ ಗೌರವಿಸಿದ್ದೇವೆ. ಪ್ರತಿ ದಿನ ಬೆಳಕು ಹರಿಯುವ ಮುನ್ನ ಓದುಗರ ಮನೆಬಾಗಿಲಲ್ಲಿ ಪತ್ರಿಕೆ ಇರಬೇಕು ಎಂಬುದೊಂದೇ ವಿತರಕರ ಲಕ್ಷö್ಯ ಇರುತ್ತದೆ. ಕೊರೋನಾ ಕಾಲಘಟ್ಟದಲ್ಲಿ ಸಹ ವಿತರಕರು ಸೋಂಕಿನ ಆತಂಕದಲ್ಲಿಯೂ ಸಹ ತಮ್ಮ ಸುರಕ್ಷೆಯನ್ನು ಲೆಕ್ಕಿಸದೆ ನಿಭಾಯಿಸಿಕೊಂದು ಓದುಗರಿಗೆ ಸುದ್ದಿ ಪತ್ರಿಕೆಗಳನ್ನು ತಲುಪಿಸುವ ಕಾರ್ಯವನ್ನನು ಶ್ರದ್ಧೆಯಿಂದ ಮಾಡಿದ್ದಾರೆ ಎಂದರು.
ಹಿರಿಯ ಪತ್ರಕರ್ತರ ಬಾಲಶೇಖರ ಬಂದಿ ಹಾಗೂ ಸ್ಥಳೀಯ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷö್ಮಣ ಅಡಿಹುಡಿ ಮಾತನಾಡಿ, ಮಳೆ, ಚಳಿ, ಬಿಸಿಲು ಎನ್ನದೆ ನಸುಕಿನಲ್ಲಿ ಪತ್ರಿಕೆಯನ್ನು ಓದುಗರ ಕೈಗೆ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಪತ್ರಿಕೋದ್ಯಮದಲ್ಲಿ ಮಹತ್ವದಾಗಿದೆ. ಕಾರ್ಮಿಕರಿಗೆ ನೀಡುವಂತೆ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ, ಪ್ರತಿ ದಿನ ಓಡಾಡಲು ಸೈಕಲ್, ಗೌರವಧನ ಹೀಗೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ಪತ್ರಿಕಾ ವಿತರಕರಿಗೂ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಸಂಘ ಮೂಡಲಗಿ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕಾರ್ಯದರ್ಶಿ ಅಲ್ತಾಫ್ ಹವಾಲ್ದಾರ, ಸಂಘದ ಸದಸ್ಯರಾದ ಸುಭಾಷ ಗೊಡ್ಯಾಗೋಳ, ಚಂದ್ರಶೇಖರ ಪತ್ತಾರ, ಹಣಮಂತ ಸತ್ತರಡ್ಡಿ ಹಾಗೂ ಪತ್ರಕರ್ತರಾದ ಭಗವಂತ ಉಪ್ಪಾರ, ಸುಭಾಷ ಕಡಾಡಿ ಹಾಗೂ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.
ನಮ್ಮ ಪಾದ ಪೂಜೆಯನ್ನು ಮಾಡಿದ್ದು ನಮ್ಮ ಹೃದಯ ತುಂಬಿ ಬಂದಿದೆ. ಪೇಪರ್ ಹಂಚಾವರಿಗೆ ಇಂಥಾ ದೊಡ್ಡ ಗೌರವ ಕೊಟ್ಟಿದ್ದು ಹೆಮ್ಮ ಎನಿಸುತ್ತಿದೆ ಎಂದು ಪತ್ರಿಕೆ ಹಂಚುವ ವಿಶಾಲ ಬುಗಡಿಕಟ್ಟಿ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.