ಸೋಮವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Sep 5, 2022, 7:18 AM IST
ಮೇಷ: ಆರೋಗ್ಯ ಗಮನಿಸಿ. ಕೆಲಸ ಕಾರ್ಯಗಳಲ್ಲಿ ಪ್ರಗತಿಗೆ ಅಡ್ಡಿ ಆತಂಕಗಳು. ವಿಘ್ನ ಅಡಚಣೆ ಆಗದಂತೆ ಸರಿಯಾಗಿ ವಿಚಾರ ಮಾಡಿ ಪ್ರವೃತ್ತರಾಗಿ. ಪರರ ಸಂಪತ್ತನ್ನು ವಿನಿಯೋಗಿಸುವಾಗ ಜಾಗ್ರತೆ ವಹಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಗುರುಹಿರಿಯರ ಮಾರ್ಗದರ್ಶನ.
ವೃಷಭ: ಆರೋಗ್ಯ ಬಗ್ಗೆ ಉದಾಸೀನತೆ ಸಲ್ಲದು. ಅನ್ಯರ ಮಾತನ್ನು ಅವಲಂಬಿಸುವಾಗ ನಿಮ್ಮತನವನ್ನು ಕಳೆದುಕೊಳ್ಳದೇ ಕಾರ್ಯ ಪ್ರವೃತ್ತರಾಗಿರಿ. ದೂರದ ವಿದೇಶ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕೆ ಧನ ವ್ಯಯ.
ಮಿಥುನ: ಮಕ್ಕಳಿಂದ ಸುಖ. ಬಂಧುಜನರೊಂದಿಗೆ ವಿಲಾಸ. ಸ್ಥಾನ ಮಾನ ಪದವಿ ವೃದ್ಧಿ. ಶ್ರೇಯಸ್ಕರ ಕಾರ್ಯಗಳಿಂದ ಜನಮನ್ನಣೆ. ಆಚಾರ ವಿಚಾರಗಳಲ್ಲಿ ತಲ್ಲೀನತೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದರಿಂದ ಸಂತೋಷ.
ಕರ್ಕ: ದೇವತಾರಾಧನೆಯಿಂದ ನೆಮ್ಮದಿ ಲಭಿಸೀತು. ಅನಾವಶ್ಯಕ ಸಂಚಾರಕ್ಕೆ ಆಸ್ಪದ ನೀಡದಿರಿ. ಅನ್ಯರ ವಿಚಾರದಲ್ಲಿ ಭಾಗಿಯಾಗದಿರಿ. ಆದಷ್ಟು ವಿಶ್ರಾಂತಿ ಪಡೆದು ದೈಹಿಕ ಮಾನಸಿಕ ಸುಖ ಅನುಭವಿಸಲು ಪ್ರಯತ್ನಿಸಿ.
ಸಿಂಹ: ಆರೋಗ್ಯ ಗಮನಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ಸುಖ ಕಾಣಿರಿ. ಸ್ತ್ರೀ ಪುರುಷರು ಪರಸ್ಪರರ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಪ್ರಾಮಾಣಿಕತೆಗೆ ಆದ್ಯತೆ ನೀಡಿ. ಅನಾವಶ್ಯಕ ಸಂಚಾರ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.
ಕನ್ಯಾ: ಆರೋಗ್ಯ ಉತ್ತಮ. ಕುಟುಂಬ ಸುಖ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿಕೆ. ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ, ಉತ್ತಮ ಧನಾರ್ಜನೆ. ಸಾಮಾಜಿಕ ಸುಖ ಪ್ರಾಪ್ತಿಗಾಗಿ ಹಿತೋಕ್ತಿ ಬೋಧನೆ. ದಾಂಪತ್ಯ ಸುಖ ವೃದ್ಧಿ.
ತುಲಾ: ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯ ಶೈಲಿ. ಸ್ವಾರ್ಜಿತ ಧನ ಸಂಪತ್ತು ವೃದ್ಧಿ. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಚರ್ಚೆಗೆ ಆಸ್ಪದ ನೀಡದೆ ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ಮಾನಸಿಕ ನೆಮ್ಮದಿ.
ವೃಶ್ಚಿಕ: ಅನಿರೀಕ್ಷಿತ ಧನಸಂಪತ್ತಿನ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ. ಗುರುಹಿರಿಯರ ಬೆಂಬಲ. ದಂಪತಿಗಳಲ್ಲಿ ಅನುರಾಗ ವೃದ್ಧಿ.
ಧನು: ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ ಜವಾಬ್ದಾರಿಯಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪ್ರಗತಿಪರ ಬದಲಾವಣೆ. ದಾಂಪತ್ಯ ತೃಪ್ತಿಕರ. ಗುರುಹಿರಿಯರ ಆರೋಗ್ಯ ಸ್ಥಿರ. ಸರಕಾರೀ ಕಾರ್ಯಗಳಲ್ಲಿ ಪ್ರಗತಿ.
ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗದಂತೆ ಕಾರ್ಯ ಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ ಸಹಕಾರ ಅಗತ್ಯ. ಬಂಧುಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಮಾಡದಿರಿ.
ಕುಂಭ: ಸಣ್ಣ ಪ್ರಯಾಣ ಸಂಭವ. ಅಧ್ಯಯನದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಪ್ರಗತಿ. ದೂರದ ಮಿತ್ರರ ಭೇಟಿ. ಗುರುಹಿರಿಯರ ಸಹಕಾರ ಮಾರ್ಗದರ್ಶನ.
ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ. ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಅಧ್ಯಯನದಲ್ಲಿ ತಲ್ಲೀನತೆಯಿಂದ ಮಾನಸಿಕ ತೃಪ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.