ಬಳಸದೇ ತುಕ್ಕು ಹಿಡಿಯುತ್ತಿವೆ ಕೃಷಿ ಯಂತ್ರಗಳು
Team Udayavani, Sep 5, 2022, 1:24 PM IST
ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಸಮೀಪವಿರುವ ಕೃಷಿ ಯಂತ್ರಧಾರೆ ಕೇಂದ್ರದಲ್ಲಿಬೇಸಾಯಕ್ಕೆ ಬೇಕಾದ ಸಲಕರಣೆಗಳು,ವಾಹನಗಳು ಬಳಕೆಗೆ ಬಾರದೆ ನಿರುಪಯುಕ್ತವಾಗಿದ್ದು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಕೃಷಿ ಇಲಾಖೆಯಿಂದ ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಟ್ರ್ಯಾಕ್ಟರ್, ಪವರ್ ಟಿಲ್ಲರ್ಗಳು, ಜೋಳದ ಯಂತ್ರ, ರೋಟವೇಟರ್, ಮಣ್ಣು ಹದಮಾಡುವ ಯಂತ್ರ ಸೇರಿ ಇನ್ನಿತರ ಕೃಷಿ ಯಂತ್ರಗಳನ್ನು ರಿಯಾಯ್ತಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಆದರೆ, ಈ ಯೋಜನೆಯಏಜೆನ್ಸಿ ಪಡೆದ ವರ್ಷ ಎಂಬ ಖಾಸಗಿ ಕಂಪನಿಯುರೈತರಿಗೆ ಕೃಷಿ ಯಂತ್ರೋಪಕರಣ ನೀಡದೆನಿರ್ಲಕ್ಷ್ಯ ಧೋರಣೆ ತಾಳಿದೆ. ಇದರಿಂದ ವಿಧಿಯಿಲ್ಲದೆ ರೈತರು ಖಾಸಗಿ ಯಂತ್ರೋಪಕರಣಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತುಕ್ಕು ಹಿಡಿಯುತ್ತಿರುವ ಕೃಷಿ ಸಲಕರಣೆಗಳು: ಕೃಷಿ ಯಂತ್ರಧಾರೆ ಯೋಜನೆಯಡಿ ಇಲಾಖೆನೀಡಿರುವ ಕೃಷಿ ಯಂತ್ರೋಪಕರಣಗಳುನಿರ್ವಹಣೆ ಕೊರತೆಯಿಂದ ಬಿಸಿಲು, ಗಾಳಿ,ಮಳೆಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ. ಇದರಿಂದಲಕ್ಷಾಂತರ ರೂ. ಹಣ ವ್ಯಯ ಮಾಡಿಖರೀದಿಸಿರುವ ಸಲಕರಣೆಗಳು ರೈತರ ಬಳಕೆಗೆ ಸಿಗದಂತಾಗಿದೆ.
ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ: ಹಲವು ತಿಂಗಳಿಂದ ಕೃಷಿ ಯಂತ್ರಧಾರಣೆ ಕೇಂದ್ರದಲ್ಲಿಕೃಷಿ ಸಲಕರಣೆಗಳು ರೈತರಿಗೆ ಸಿಗದೆ ನಿರುಪಯುಕ್ತವಾಗಿ ಬಿದ್ದಿದೆ. ಹೀಗಿದ್ದರೂ, ಕೃಷಿ ಇಲಾಖೆ ಅಧಿಕಾರಿಗಳು ಖಾಸಗಿ ಏಜೆನ್ಸಿಯವರ ಮೇಲೆಕ್ರಮ ವಹಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.
ಸದಾಕಾಲ ಬಾಗಿಲು ಮುಚ್ಚಿರುವ ಕೇಂದ್ರ: ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದೆ. ಈ ಹಿನ್ನೆಲೆ ಕೃಷಿಸಲಕರಣೆಗಳನ್ನು ಬಾಡಿಗೆ ಪಡೆಯಲು ರೈತರುಕೇಂದ್ರದ ಮುಂದೆ ಧಾವಿಸಿದರೆ ಸದಾಕಾಲಬಾಗಿಲು ಮುಚ್ಚಿರುತ್ತದೆ. ಇದರಿಂದ ಕೃಷಿ ಯಂತ್ರೋಪಕರಣ ಕೇಂದ್ರ ಇದ್ದು ಇಲ್ಲದಂತಾಗಿದೆ.
ಕೃಷಿ ಯಂತ್ರಗಳನ್ನು ಖಾಸಗಿಯಾಗಿ ತಂದು ಜಮೀನಿನಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಹೊರೆ ಬೀಳುತ್ತದೆ.ಆದರೆ, ಸರ್ಕಾರ ರಿಯಾಯ್ತಿ ದರದಲ್ಲಿ ನೀಡುವ ಕೃಷಿಸಲಕರಣೆಗಳನ್ನು ಬಳಕೆ ಮಾಡಿಕೊಳ್ಳೋಣ ಎಂದರೆ ಈ ಕೇಂದ್ರ ಬಾಗಿಲು ಮುಚ್ಚಿದೆ. ಆದ್ದರಿಂದ ಪ್ರಸ್ತುತ ಇರುವ ಏಜೆನ್ಸಿಬದಲಾಯಿಸಿ, ಬೇರೆ ಏಜೆನ್ಸಿಗೆ ನೀಡಿ ಕೃಷಿ ಸಲಕರಣೆಗಳು ರೈತರ ಕೈಗೆ ಸಿಗುವಂತೆ ಮಾಡಬೇಕು. – ಮಹೇಂದ್ರ, ವೀರನಪುರ
ಪ್ರಸ್ತುತ ಇರುವ ಖಾಸಗಿ ಕಂಪನಿ ಬದಲಾಯಿಸಿ, ಹೊಸ ಏಜೆನ್ಸಿಗೆ ಕೃಷಿ ಯಂತ್ರೋಪಕರಣ ನೀಡಲು ಹೊಣೆನೀಡಲಾಗಿದೆ. ಶೀಘ್ರದಲ್ಲೇ ರೈತರು ಯಂತ್ರಗಳ ಉಪಯೋಗ ಪಡೆಯಬಹುದು. – ಪ್ರವೀಣ್, ಕೃಷಿ ಇಲಾಖೆ ಸಹಾಯ ನಿರ್ದೇಶಕ, ಗುಂಡ್ಲುಪೇಟೆ
– ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್ಮ್ಯಾನ್ ನೇಮಕ ಸಂದರ್ಶನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.