ವೈಭವದ ಮಡಿಕೇರಿ ದಸರಾ ಆಚರಣೆಗೆ ನಿರ್ಧಾರ : 1 ಕೋ.ರೂ. ಅನುದಾನ; 18 ಲಕ್ಷ ರೂ. ಜಿಎಸ್‌ಟಿ!
Team Udayavani, Sep 6, 2022, 9:37 AM IST
ಮಡಿಕೇರಿ : ಮಡಿಕೇರಿ ದಸರಾ ಜನೋತ್ಸವವನ್ನು ಸೆ. 26ರಿಂದ ವಿಜೃಂಭಣೆಯಿಂದ ಆಚರಿಸಲು ದಸರಾ ಸಮಿತಿ ನಿರ್ಧರಿಸಿದೆ. ದಶಮಂಟಪಗಳಿಗೆ ತಲಾ 3.30 ಲಕ್ಷ ರೂ. ಮತ್ತು ಕರಗಗಳಿಗೆ ತಲಾ 2 ಲಕ್ಷ ರೂ. ಅನುದಾನ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರ ದಸರಾ ಸಮಿತಿ ಅಧ್ಯಕ್ಷೆಯೂ ಆಗಿರುವ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಅನುದಾನ ಹಂಚಿಕೆಯ ವಿವರ ಪ್ರಕಟಿಸಿದರು.
ಮಡಿಕೇರಿ ದಸರಾಕ್ಕೆ ಶಾಸಕರ ಪ್ರಯತ್ನದಿಂದ ಈ ಬಾರಿ ಸರಕಾರದಿಂದ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಪೈಕಿ 18 ಲಕ್ಷ ರೂ. ಜಿಎಸ್‌ಟಿಗೆ ಸಂದಾಯವಾಗಲಿದೆ. ಉಳಿದಂತೆ ದಶಮಂಟಪಗಳಿಗೆ ತಲಾ 3.30 ಲಕ್ಷ ರೂ. ಹಾಗೂ ನಾಲ್ಕು ಕರಗಗಳಿಗೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ ಎಂದು ಕೆ.ಎಸ್. ರಮೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ : ಮೂಲಸೌಕರ್ಯಕ್ಕೆ 3 ವರ್ಷದಲ್ಲಿ 3 ಲಕ್ಷ ಕೋಟಿ ರೂ. ಸಾಲ ಗುರಿ : ರಾಜ್‌ಕಿರಣ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.