ಜಾಗತಿಕ ಮಾರುಕಟ್ಟೆಗಾಗಿ ಭಾರತದಲ್ಲೇ ತಯಾರಾಗಲಿದೆ ಮರುಬಳಕೆಯ ರಾಕೆಟ್
ಇಸ್ರೋದಿಂದಲೇ ವಿನ್ಯಾಸ ಮತ್ತು ಅಭಿವೃದ್ಧಿ; ಕೆಲವೇ ವರ್ಷಗಳಲ್ಲಿ ಈ ಯೋಜನೆ ಜಾರಿ
Team Udayavani, Sep 7, 2022, 6:45 AM IST
ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸೃಷ್ಟಿಸುತ್ತಿರುವ ಇಸ್ರೋ ಈಗ ಜಾಗತಿಕ ಮಾರುಕಟ್ಟೆಗಾಗಿಯೇ ಹೊಸ ಮರುಬಳಕೆಯ ರಾಕೆಟ್‌ಗಳ ವಿನ್ಯಾಸ ಮತ್ತು ನಿರ್ಮಾಣದತ್ತ ಮುಖಮಾಡಿದೆ. ಇದರಿಂದ ಉಪಗ್ರಹಗಳ ಉಡಾವಣೆಯ ವೆಚ್ಚವೂ ಗಣನೀಯವಾಗಿ ತಗ್ಗಲಿದೆ.
ಈ ಕುರಿತು ಮಾತನಾಡಿರುವ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಮತ್ತು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, “ಪ್ರಸ್ತುತ 1ಕೆಜಿ ಪೇಲೋಡ್ ಅನ್ನು ಕಕ್ಷೆಗೆ ಸೇರಿಸಲು ಸುಮಾರು 10 ಸಾವಿರದಿಂದ 15 ಸಾವಿರ ಅಮೆರಿಕನ್ ಡಾಲರ್‌ನಷ್ಟು ವೆಚ್ಚವಾಗುತ್ತದೆ. ಇದನ್ನು ನಾವು ಕೆ.ಜಿ.ಗೆ 5 ಸಾವಿರ ಅಥವಾ 1 ಸಾವಿರ ಡಾಲರ್‌ಗೆ ಇಳಿಸಬೇಕೆಂದು ಬಯಸುತ್ತೇವೆ. ಇದನ್ನು ಸಾಧ್ಯವಾಗಿಸಲು ಇರುವ ಏಕೈಕ ವಿಧಾನವೆಂದರೆ ರಾಕೆಟ್‌ಗಳ ಮರುಬಳಕೆ. ಹೀಗಾಗಿ, ನಾವು ಮುಂದೆ ನಿರ್ಮಿಸಲಿರುವ ಜಿಎಸ್‌ಎಲ್‌ವಿ ಎಂಕೆ 3 ರಾಕೆಟ್ ಅನ್ನು ಮರುಬಳಕೆಗೆ ಯೋಗ್ಯವನ್ನಾಗಿ ಮಾಡಲು ಪ್ರಯತ್ನಿಸಲಿದ್ದೇವೆ’ ಎಂದು ಹೇಳಿದ್ದಾರೆ.
ಕೈಗಾರಿಕೆಗಳು, ಸ್ಟಾರ್ಟಪ್‌ಗಳು ಮತ್ತು ಇಸ್ರೋದ ವಾಣಿಜ್ಯ ಅಂಗ ನ್ಯೂಸ್ಪೇಸ್ ಇಂಡಿಯಾ ಲಿ.(ಎನ್‌ಎಸ್‌ಐಎಲ್) ಸಹಭಾಗಿತ್ವದಡಿ ಮರುಬಳಕೆ ಮಾಡಬಲ್ಲ ರಾಕೆಟ್‌ಗಳನ್ನು ಇಸ್ರೋ ನಿರ್ಮಿಸಲಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಪ್ರಸ್ತಾಪಕ್ಕೆ ಒಂದು ಹೊಸ ರೂಪ ಬರಲಿದೆ. ಕಡಿಮೆ ವೆಚ್ಚದ, ಉತ್ಪಾದನಾ ಸ್ನೇಹಿ, ಸ್ಪರ್ಧಾತ್ಮಕ ರಾಕೆಟ್‌ಗಳನ್ನು ಭಾರತದ ನೆಲದಲ್ಲೇ ತಯಾರಿಸಿ, ಬಾಹ್ಯಾಕಾಶ ವಲಯದ ಸೇವೆಗಾಗಿ ಜಾಗತಿಕವಾಗಿ ಲಭ್ಯವಾಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದೂ ಸೋಮನಾಥ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.