ಏಷ್ಯಾ ಮಟ್ಟದಲ್ಲೇ ವೈಫ‌ಲ್ಯ; ಟಿ20 ವಿಶ್ವಕಪ್‌ನಲ್ಲಿ?

ಎರಡೂ "ಸೂಪರ್‌ ಫೋರ್‌' ಪಂದ್ಯಗಳಲ್ಲಿ ಸೋಲುಂಡ ಭಾರತ ;ವಿಶ್ವಕಪ್‌ ತಯಾರಿಗೆ ಹಿನ್ನಡೆ

Team Udayavani, Sep 8, 2022, 8:05 AM IST

thumb news cricket rohit

ದುಬಾೖ: ಸತತ ಎರಡು ಪಂದ್ಯಗಳನ್ನು ಸೋತು “ಏಷ್ಯಾ ಕಪ್‌ ಕ್ರಿಕೆಟ್‌’ ಫೈನಲ್‌ ರೇಸ್‌ನಿಂದ ಹೊರಬಿದ್ದಿರುವ ಟೀಮ್‌ ಇಂಡಿಯಾ, ಗುರುವಾರದ ತನ್ನ ಅಂತಿಮ “ಸೂಪರ್‌ ಫೋರ್‌’ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು ಎದುರಿಸಲಿದೆ. ರೋಹಿತ್‌ ಬಳಗಕ್ಕಷ್ಟೇ ಅಲ್ಲ, ಅಫ್ಘಾನಿಸ್ಥಾನ ಪಾಲಿಗೂ ಇದು ಲೆಕ್ಕದ ಭರ್ತಿಯ ಪಂದ್ಯ.

ಬುಧವಾರದ ಪಂದ್ಯದಲ್ಲಿ ಪಾಕಿಸ್ಥಾನ ತಂಡ ಅಫ್ಘಾನಿಸ್ಥಾನವನ್ನು ಸೋಲಿಸುವುದರೊಂದಿಗೆ ಕೂಟದ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ. ತಲಾ ಎರಡು ಪಂದ್ಯಗಳನ್ನು ಗೆದ್ದ ಪಾಕಿಸ್ಥಾನ ಮತ್ತು ಶ್ರೀಲಂಕಾ ರವಿವಾರದ ಪ್ರಶಸ್ತಿ ಸಮರದಲ್ಲಿ ಸೆಣಸ ಲಿವೆ. ಇದಕ್ಕೂ ಮುನ್ನ ಇತ್ತಂಡಗಳು ಶುಕ್ರ ವಾರ “ಸೂಪರ್‌ ಫೋರ್‌’ ಸುತ್ತಿನ ಕೊನೆಯ ಪಂದ್ಯ ದಲ್ಲಿ ಮುಖಾಮುಖೀಯಾಗಲಿವೆ. ಇದು ಫೈನಲ್‌ ಪಂದ್ಯಕ್ಕೊಂದು ರಿಹರ್ಸಲ್‌ ಆಗಲಿದೆ.

ಅಫ್ಘಾನಿಸ್ಥಾನದ ಮೇಲಿನ ದೊಡ್ಡ ಒತ್ತಡ ವೆಂದರೆ, ಸತತ ಎರಡು ದಿನ ಎರಡು ಪಂದ್ಯಗಳನ್ನು ಆಡಬೇಕಾಗಿ ಬಂದದ್ದು. ಬುಧವಾರ ಪಾಕಿಸ್ಥಾನವನ್ನು ಎದುರಿಸಿದ್ದು, ಮರುದಿನವೇ ಭಾರತದ ಸವಾಲು ಎದುರಾಗಲಿದೆ.

ಭಾರತಕ್ಕೇನಾಯಿತು?
ಹೌದು, ಭಾರತಕ್ಕೇನಾಯಿತು? ಐಪಿಎಲ್‌ನಲ್ಲಿ ದೊಡ್ಡ ಹೀರೋ ಆಗಿ ಮೆರೆದವರೆಲ್ಲ ದೇಶಕ್ಕಾಗಿ ಆಡುವಾಗ, ಅದೂ ಜಾಗತಿಕ ಮಟ್ಟದ ಟೂರ್ನಿಗಳಲ್ಲಿ ಪರದಾಡುವುದೇಕೆ? ಇದು ಎಲ್ಲರ ಮುಂದಿರುವ ಪ್ರಶ್ನೆ.

ಹಾಗೆಯೇ ಟೀಮ್‌ ಇಂಡಿಯಾ ಆಯ್ಕೆ ಯಲ್ಲೂ ಎಡವಟ್ಟು ಸಂಭವಿಸಿದ ಬಗ್ಗೆ ಎಲ್ಲರೂ ಬೆಟ್ಟು ಮಾಡುತ್ತಿದ್ದಾರೆ. ವೇಗದ ಬೌಲರ್‌ಗಳನ್ನೆಲ್ಲ ಭಾರತದಲ್ಲೇ ಬಿಟ್ಟು ಹೋಗಿದ್ದಾರೆಂಬುದು ದೊಡ್ಡ ತಕರಾರು. ಏಕೈಕ ಅನುಭವಿ ಭುವನೇಶ್ವರ್‌ ಕುಮಾರ್‌ “19ನೇ ಓವರ್‌ನ ದುಬಾರಿ ಬೌಲರ್‌’ ಎಂಬ ಹಣೆಪಟ್ಟಿ ಹಚ್ಚಿಕೊಂಡಿದ್ದಾರೆ. ಸ್ಪಿನ್ನರ್‌ಗಳಿಂದ ಯಾವುದೇ ಮ್ಯಾಜಿಕ್‌ ಸಾಧ್ಯವಾಗುತ್ತಿಲ್ಲ. ಏಷ್ಯನ್‌ ಆಟಗಾರರೆಲ್ಲ ಸ್ಪಿನ್‌ ಎದುರಿಸುವಲ್ಲಿ ನಿಷ್ಣಾತರು ಎಂಬುದನ್ನು ಮರೆಯುವಂತಿಲ್ಲ.

ಹಾಗೆಯೇ ಭಾರತ ಆಡುವ ಬಳಗದ ಆಯ್ಕೆಯಲ್ಲೂ ಎಡವಟ್ಟು ಸಂಭವಿಸುತ್ತಿರುವುದು ಗುಟ್ಟೇನಲ್ಲ. ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ ಫಾರ್ಮ್ ಭಾರತದ ಪಾಲಿನ ಭಾರೀ ಚಿಂತೆಯ ಸಂಗತಿಯಾಗಿದೆ. ತಂಡದ ಫೀಲ್ಡಿಂಗ್‌ ಗುಣಮಟ್ಟವೂ ಕಳಪೆ. ಶ್ರೀಲಂಕಾ ವಿರುದ್ಧ ಅಂತಿಮ ಎಸೆತದಲ್ಲಿ ಎರಡೆರಡು ರನೌಟ್‌ ಅವಕಾಶವನ್ನು ಕೈಚೆಲ್ಲಿದ್ದು ಇದಕ್ಕೊಂದು ನಿದರ್ಶನ. ಹಾಗೆಯೇ ದೀಪಕ್‌ ಹೂಡಾ ಅವರಂಥ ಆಲ್‌ರೌಂಡರ್‌ಗಳನ್ನು ಕೇವಲ ಬ್ಯಾಟಿಂಗಿಗೇ ಸೀಮಿತಗೊಳಿಸುವುದು ಅರ್ಥ ವಾಗದ ಸಂಗತಿ. ರೋಹಿತ್‌ ಶರ್ಮ ನಾಯಕನ ಆಟವಾಡುತ್ತಿರುವಾಗ ಉಳಿದವರು ಸ್ವಲ್ಪ ವಾದರೂ ಬೆಂಬಲ ನೀಡದಿದ್ದರೆ ಹೇಗೆ?ಏಷ್ಯಾ ಮಟ್ಟದಲ್ಲೇ ಟೀಮ್‌ ಇಂಡಿಯಾ ಇಷ್ಟೊಂದು ಒತ್ತಡಕ್ಕೆ ಸಿಲುಕಿದರೆ, ಟಿ20 ವಿಶ್ವಕಪ್‌ ವೇಳೆ ಇವರೆಂಥ ಆಟವಾಡಿಯಾರು ಎಂಬುದು ಆತಂಕಕ್ಕೆ ಕಾರಣವಾಗಿದೆ. ಅಕಸ್ಮಾತ್‌ ಅಫ್ಘಾನಿಸ್ಥಾನ ಕೂಡ ನಮ್ಮವರನ್ನು ಮಣಿಸಿದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.

ಅಫ್ಘಾನ್‌ಗೆ ಅನುಭವದ ಕೊರತೆ
ಲೀಗ್‌ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಮಣಿಸಿ ಅಪಾಯಕಾರಿಯಾಗಿ ಗೋಚರಿಸಿದ ಅಫ್ಘಾನಿಸ್ಥಾನ, ಸೂಪರ್‌ ಫೋರ್‌ನಲ್ಲಿ ಲಂಕೆ ಮತ್ತು ಪಾಕಿಸ್ಥಾನಕ್ಕೆ ಶರಣಾಗಿದೆ. ಆದರೆ ಕೆಲವು “ಟಾಪ್‌ ಕ್ವಾಲಿಟಿ’ಯ ಟಿ20 ಆಟಗಾರರನ್ನು ಹೊಂದಿರುವುದನ್ನು ಮರೆಯುವಂತಿಲ್ಲ. ರಶೀದ್‌ ಖಾನ್‌, ಮುಜೀಬ್‌ ಜದ್ರಾನ್‌, ಮೊಹಮ್ಮದ್‌ ನಬಿ, ಹಜ್ರತುಲ್ಲ ಜಜಾಯ್‌, ರೆಹಮಾನುಲ್ಲ ಗುರ್ಬಜ್‌ ಪ್ರಮುಖರು. ಆದರೆ ಇವರೆಲ್ಲ ಪಾಕ್‌ ವಿರುದ್ಧ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ತಂಡದ ಬೌಲಿಂಗ್‌, ಫೀಲ್ಡಿಂಗ್‌ ಗಮನಾರ್ಹ ಮಟ್ಟದಲ್ಲಿದೆ. ಒಂದೇ ಸಮಸ್ಯೆಯೆಂದರೆ, ಅದು ದೊಡ್ಡ ಕ್ರಿಕೆಟ್‌ ರಾಷ್ಟ್ರಗಳೊಂದಿಗೆ ನಿರಂತರವಾಗಿ ಆಡದೇ ಇರುವುದು. ಇದರಿಂದ ಅನುಭವದ ಕೊರತೆ ಕಾಡುತ್ತಿದೆ.

ಭಾರತ-ಪಾಕ್‌ ಫೈನಲ್‌, ಕನಸು…
ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ಥಾನ ಈವರೆಗೆ ಫೈನಲ್‌ನಲ್ಲಿ ಎದುರಾಗಿಲ್ಲ. ಈ ಸಲವಾದರೂ ಮುಖಾಮುಖಿ ಆಗಬಹುದು ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಪಾಕ್‌ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಸೇರಿದಂತೆ ಅನೇಕರು ಇಂಥದೊಂದು ಕನಸು ಕಾಣುತ್ತಿದ್ದರು. ಆದರೆ ಇದು ಸಾಕಾರಗೊಳ್ಳಲೇ ಇಲ್ಲ.

ಇಂದಿನ ಪಂದ್ಯ
ಸೂಪರ್‌ ಫೋರ್‌
ಭಾರತ-ಅಫ್ಘಾನಿಸ್ಥಾನ
ಸ್ಥಳ: ದುಬಾೖ
ಆರಂಭ: ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.