ಯುಎಸ್ ಓಪನ್ ಕ್ವಾರ್ಟರ್ ಫೈನಲ್: ನಿಕ್ ಕಿರ್ಗಿಯೋಸ್‌ಗೆ ಕಶನೋವ್ ಶಾಕ್
ಕಶನೋವ್‌ಗೆ ಕ್ಯಾಸ್ಪರ್ ರೂಡ್ ಎದುರಾಳಿ ; ಮ್ಯಾಟಿಯೊ ಬೆರೆಟಿನಿ ಪರಾಭವ
Team Udayavani, Sep 7, 2022, 11:24 PM IST
ನ್ಯೂಯಾರ್ಕ್: ಯುಎಸ್ ಓಪನ್‌ನಲ್ಲಿ ದೈತ್ಯ ಆನೆಯಂತೆ ಮುನ್ನುಗ್ಗು ತ್ತಿದ್ದ ಆಸ್ಟ್ರೇಲಿಯ ನಿಕ್ ಕಿರ್ಗಿಯೋಸ್ ಅವರನ್ನು ರಷ್ಯಾದ ಕರೆನ್ ಕಶನೋವ್ ಖೆಡ್ಡಕ್ಕೆ ಬೀಳಿಸಿದ್ದಾರೆ. 5 ಸೆಟ್‌ಗಳ ಜಿದ್ದಾಜಿದ್ದಿ ಕ್ವಾರ್ಟರ್ ಫೈನಲ್ ಪಂದ್ಯವನ್ನು 7-5, 4-6, 7-5, 6-7 (3-7), 6-4 ಅಂತರದಿಂದ ಗೆದ್ದ ಕಶನೋವ್, ನಾರ್ವೆಯ ಕ್ಯಾಸ್ಪರ್ ರೂಡ್ ಅವರನ್ನು ಎದುರಿಸಲು ಸಜ್ಜಾದರು.
ವಿಂಬಲ್ಡನ್‌ನಲ್ಲಿ ಫೈನಲ್ ತನಕ ದಾಪುಗಾಲಿಕ್ಕಿದ್ದ ನಿಕ್ ಕಿರ್ಗಿಯೋಸ್ ನ್ಯೂಯಾರ್ಕ್‌ನಲ್ಲೂ ಗೆಲುವಿನ ಓಟ ಬೆಳೆ ಸಿದ್ದರು. ನಂ.1 ಖ್ಯಾತಿಯ ಹಾಲಿ ಚಾಂಪಿ ಯನ್ ಡ್ಯಾನಿಲ್ ಮೆಡ್ವೆಡೇವ್ ಅವರನ್ನು ಕೆಡವಿದ ಹೆಗ್ಗಳಿಕೆ ಇವರದಾಗಿತ್ತು. ಆದರೆ 27ನೇ ಶ್ರೇಯಾಂಕದ ಕಶನೋವ್ ವಿರುದ್ಧ ಕಿರ್ಗಿಯೋಸ್ ಆಟ ನಡೆಯಲಿಲ್ಲ.
ಇದು ಕಶನೋವ್ ಆಡುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್. 2019ರ ಫ್ರೆಂಚ್ ಓಪನ್ ಹಾಗೂ ಕಳೆದ ವರ್ಷದ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ಇವರ ಅತ್ಯುತ್ತಮ ಸಾಧನೆಯಾಗಿತ್ತು.
“ನಾನೇನು ನಿರೀಕ್ಷಿಸಿದ್ದೆನೋ ಹಾಗೆಯೇ ಆಗಿದೆ. ಇದೊಂದು ಕ್ರೇಝಿ ಮ್ಯಾಚ್ ಆಗಿತ್ತು’ ಎಂಬುದು ಕಶನೋವ್ ಪ್ರತಿಕ್ರಿಯೆಯಾದರೆ, ಕಿರ್ಗಿಯೋಸ್ ರ್ಯಾಕೆಟ್ ಎಸೆದು “ನಾನು ಅನೇಕ ಮಂದಿಯ ನಿರೀಕ್ಷೆಯನ್ನು ಹುಸಿಗೊಳಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತಮ ಫಾರ್ಮ್ ನಲ್ಲಿರುವ,, 5ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಇಟಲಿಯ ಮ್ಯಾಟಿಯೊ ಬೆರೆಟಿನಿ ಅವರನ್ನು 6-1, 6-4, 7-6 (7-4) ಅಂತರದಿಂದ ಮಣಿಸಿದರು. ಬರೆಟಿನಿ ಈ ವರ್ಷದ ಫ್ರೆಂಚ್ ಓಪನ್ ರನ್ನರ್ ಅಪ್ ಆಗಿದ್ದು, ಮೊದಲ ಸಲ ನ್ಯೂಯಾರ್ಕ್ ಟೂರ್ನಿಯ ಉಪಾಂತ್ಯಕ್ಕೆ ಬಂದಿದ್ದಾರೆ.
ಗಾರ್ಸಿಯಾಗೆ ಶರಣಾದ ತವರಿನ ಗಾಫ್
ವನಿತಾ ಸಿಂಗಲ್ಸ್‌ನಲ್ಲಿ ಆತಿಥೇಯ ಅಮೆರಿಕದ ಆಶಾಕಿರಣವಾಗಿದ್ದ 18 ವರ್ಷದ ಕೊಕೊ ಗಾಫ್ ಆಟ ಕ್ವಾರ್ಟರ್ ಫೈನಲ್‌ನಲ್ಲಿ ಕೊನೆ ಗೊಂಡಿದೆ. ತವರಿನ ಅಭಿ ಮಾನಿಗಳ ಭಾರೀ ಬೆಂಬಲ ಹೊಂದಿದ್ದ ಗಾಫ್ ಅವರನ್ನು ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ 6-3, 6-4 ಅಂತರದಿಂದ ಹಿಮ್ಮೆಟ್ಟಿಸಿದರು. ಇದ ರೊಂದಿಗೆ ಗಾರ್ಸಿಯಾ ಅವರ ಸತತ ಗೆಲುವಿನ ಓಟ 13 ಪಂದ್ಯಗಳಿಗೆ ವಿಸ್ತರಿಸಲ್ಪಟ್ಟಿತು.
ಈ ಜಯದೊಂದಿಗೆ ಕ್ಯಾರೋಲಿನ್ ಗಾರ್ಸಿಯಾ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಸೆಮಿ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರ ರಾದರು. ಜತೆಗೆ ಡಬ್ಲ್ಯುಟಿಎ ರ್‍ಯಾಂಕಿಂಗ್ ನಲ್ಲಿ ಮರಳಿ ಟಾಪ್-10 ಸ್ಥಾನ ಅಲಂ ಕರಿಸುವುದೂ ಖಾತ್ರಿಯಾಯಿತು.
ಸೆಮಿಫೈನಲ್‌ನಲ್ಲಿ 17ನೇ ಶ್ರೇಯಾಂಕದ ಗಾರ್ಸಿಯಾ ಅವರ ಎದುರಾಳಿಯಾಗಿ ಕಣಕ್ಕಿಳಿಯುವವರು ಟ್ಯುನೀಶಿಯಾದ ಓನ್ಸ್ ಜೆಬ್ಯೂರ್. ಅವರು ಆಸ್ಟ್ರೇಲಿಯದ ಅಜ್ಲಾ ಟೊಮ್ಜಾನೋವಿಕ್ ಓಟಕ್ಕೆ 6-4, 7-6 (7-4) ಅಂತರದಿಂದ ಬ್ರೇಕ್ ಹಾಕಿದರು.
ಟೊಮ್ಜಾನೋವಿಕ್ 3ನೇ ಸುತ್ತಿನಲ್ಲಿ ಆತಿಥೇಯ ನಾಡಿನ ದೈತ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಕೆಡವಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.