ಪಟೇಲ್ ವಿಮೋಚನಾ ಚಳವಳಿ ಗಾಂಧಿ
Team Udayavani, Sep 8, 2022, 4:59 PM IST
ಕಲಬುರಗಿ: ನಿಜಾಮನ ಆಡಳಿತದ ವೇಳೆ ಈ ಭಾಗದ ವಿಮೋಚನೆಗಾಗಿ ನಡೆದ ಚಳವಳಿಯನ್ನು ತಾರ್ತಿಕ ಅಂತ್ಯಕ್ಕೆ ತಂದು, ಭಾರತ ಒಕ್ಕೂಟದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಸೇರಿಸುವಲ್ಲಿ ಯಶಸ್ವಿಯಾದ ಸರ್ದಾರ ವಲ್ಲಭಭಾಯ್ ಪಟೇಲ್ ಅವರು ವಿಮೋಚನಾ ಚಳವಳಿಯ ಗಾಂಧಿ ಇದ್ದಂತೆ ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ವ್ಯಾಖ್ಯಾನಿಸಿದರು.
ನಗರದ ಆರಾಧನಾ ಕಾಲೇಜಿನಲ್ಲಿ ಬುಧವಾರ ಜಿಲ್ಲಾಡಳಿತ, ಉಪ ನಿರ್ದೇಶಕರು, ಪ.ಪೂ ಕಾಲೇಜು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ವಿಮೋಚನಾ ಸಪ್ತಾಹ ಕುರಿತ ಚಿಂಥನ-ಮಂಥನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹೈದ್ರಾಬಾದ ಸಂಸ್ಥಾನದ ರಾಜನಾಗಿದ್ದ ನಿಜಾಮ ಒಕ್ಕೂಟ ಭಾರತದಲ್ಲಿ ಸೇರಲು ಒಪ್ಪದೇ ಇದ್ದಾಗ ಸರ್ದಾರ ವಲ್ಲಭಭಾಯ್ ಪಟೇಲ್ ಅವರು ಸೇನಾ ಕಾರ್ಯಾಚರಣೆ ಮುಂದಾಗಿದ್ದಾಗ ನಿಜಾಮ ಕೊನೆಗೆ ಒಪ್ಪಿಕೊಳ್ಳುತ್ತಾನೆ. ಇದಕ್ಕಿಂತ ಮೊದಲು ಈ ಭಾಗದಲ್ಲಿ ರಜಾಕಾರರ ಹಾವಳಿಯಿಂದಾಗಿ ಈ ಭಾಗ ನಲುಗಿ ಹೋಗಿತ್ತು. ಈ ಎಲ್ಲ ವಿಷಯಗಳನ್ನು ಯುವಕರಿಗೆ ತಿಳಿಸಬೇಕು. ಆದ್ದರಿಂದ ಸರ್ಕಾರ ಎಲ್ಲ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಚ್‌ಕೆಸಿಸಿಐ ಕಾರ್ಯದರ್ಶಿ ಶರಣುಪಪ್ಪಾ ಚಾಲನೆ ನೀಡಿ, ವಿಮೋಚನೆ ಎನ್ನುವ ಶಬ್ದ ವಿಸ್ತಾರವಾದುದು. ಅದರ ಅರ್ಥ ತಿಳಿಯಬೇಕಾದರೆ ವಿಮೋಚನೆಗಾಗಿ ಈ ಭಾಗದಲ್ಲಿ ನಡೆದು ಹೋಗಿರುವ ಕಥಾನಕವನ್ನು ಯುವ ಜನಾಂಗಕ್ಕೆ ತಿಳಿಸಿ ಎಂದರು.
ಆರಾಧಾನಾ ಕಾಲೇಜು ಕಾರ್ಯದರ್ಶಿ ಚೇತನಕುಮಾರ ಗಾಂಗಜೀ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಗೌರವಾಧ್ಯಕ್ಷ ಜಗನಾಥ ಸೂರ್ಯವಂಶಿ ನೇತೃತ್ವ ವಹಿಸಿದ್ದರು. ಒಕ್ಕೂಟದ ಕಾರ್ಯಾಧ್ಯಕ್ಷ ಸಚಿನ್ ಫರಹತಾಬಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಮಂಜುನಾಥ ಶ. ನಾಲವಾರಕರ್ ನಿರೂಪಿಸಿದರು, ನಾಗರಾಜ ಸ್ವಾದಿ, ವಿಠ್ಠಲ ವಾಲಿಕಾರ, ಗೋಪಾಲ ನಾಟೀಕಾರ, ಮಲ್ಲಿಕಾರ್ಜುನ ಕಿಳ್ಳಿ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.