ಪಾಕ್ಗೆ ಮತ್ತೆ ಅಮೆರಿಕದಮಿಲಿಟರಿ ನೆರವು!
Team Udayavani, Sep 9, 2022, 6:30 AM IST
ವಾಷಿಂಗ್ಟನ್: ಪಾಕಿಸ್ತಾನ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಅಂಶ ಅಂತಾರಾಷ್ಟ್ರೀಯವಾಗಿ ಗೊತ್ತಿದ್ದರೂ ಅಮೆರಿಕ ಸರ್ಕಾರ ಆ ದೇಶಕ್ಕೆ 450 ಮಿಲಿಯನ್ ಅಮೆರಕನ್ ಡಾಲರ್ ಮೊತ್ತದ ಎಫ್-16 ಯುದ್ಧ ವಿಮಾನಗಳನ್ನು ನೀಡಲಿದೆ. 2018ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನಕ್ಕೆ ಮಿಲಿಟರಿ ನೆರವು ಸ್ಥಗಿತಗೊಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮತ್ತೆ ಮಿಲಿಟರಿ ನೆರವಿನ ಕೊಡುಗೆ ನೀಡಲಾಗುತ್ತಿದೆ.
“ಪಾಕಿಸ್ತಾನವು ಒಂದು ಪ್ರಮುಖ ಭಯೋತ್ಪಾದನಾ ನಿಗ್ರಹ ಪಾಲುದಾರ ದೇಶ. ದೀರ್ಘಕಾಲದ ನೀತಿಯ ಭಾಗವಾಗಿ ಸುಸ್ಥಿರ ಪ್ಯಾಕೇಜ್ಗಳನ್ನು ಅಮೆರಿಕ ಒದಗಿಸುತ್ತದೆ. ಪಾಕಿಸ್ತಾನ ವಾಯುಪಡೆಯ ಎಫ್-16 ಪ್ರೋಗ್ರಾಂ ಅನ್ನು ಮುಂದುವರಿಸಲು ವಿದೇಶಿ ಮಿಲಿಟರಿ ನೆರವು ನೀಡಲು ಸೆನೆಟ್ಗೆ ಸರ್ಕಾರ ಸಲಹೆ ಮಾಡಿದೆ’ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಎಫ್-16 ಏರ್ಕ್ರಾಫ್ಟ್ ಸ್ಟ್ರಕ್ಚರಲ್ ಇಂಟೆಗ್ರಿಟಿ ಪ್ರೋಗ್ರಾಂ, ಅಂತಾರಾಷ್ಟ್ರೀಯ ಭದ್ರತಾ ನೆರವು ಕಾರ್ಯಕ್ರಮ, ಅಂತಾರಾಷ್ಟ್ರೀಯ ಎಂಜಿನ್ ನಿರ್ವಹಣಾ ಕಾರ್ಯಕ್ರಮ, ಎಂಜಿನ್ ಘಟಕ ಸುಧಾರಣೆ ಕಾರ್ಯಕ್ರಮ ಮತ್ತು ಇತರ ತಾಂತ್ರಿಕ ಸಮನ್ವಯ ವಿಭಾಗಗಳಲ್ಲಿ ಪಾಕಿಸ್ತಾನಕ್ಕೆ 450 ಮಿಲಿಯನ್ ವಿದೇಶಿ ಮಿಲಿಟರಿ ಮಾರಾಟ ನೆರವು ಘೋಷಿಸಿದೆ.
ಅಫ್ಘಾನಿಸ್ತಾನಿ ತಾಲಿಬಾನ್ ಮತ್ತು ಹಕ್ಕಾನಿ ಜಾಲದ ಉಗ್ರ ಪಡೆಗಳನ್ನು ಹತ್ತಿಕ್ಕಲು ವಿಫಲ ಹಾಗೂ ದೇಶದಲ್ಲಿ ಉಗ್ರರ ಸುರಕ್ಷಿತ ತಾಣಗಳನ್ನು ಧ್ವಂಸಗೊಳಿಸಲು ವಿಫಲವಾದ ಪಾಕಿಸ್ತಾನಕ್ಕೆ ಎರಡು ಬಿಲಿಯನ್ ಡಾಲರ್ ಶಸ್ತ್ರಾಸ್ತ್ರ ನೆರವನ್ನು 2018ರಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಸ್ಥಗಿತಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.