ಕರ್ತವ್ಯ ಪಥ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಅನಾವರಣ

Team Udayavani, Sep 8, 2022, 7:45 PM IST

1rwrwer

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಅನಾವರಣ ಮಾಡಿ ಪುಷ್ಪ ನಮನ ಸಲ್ಲಿಸಿದರು.

28 ಅಡಿ ಎತ್ತರದ ಪ್ರತಿಮೆ ಕೇಂದ್ರದ 13,450 ಕೋಟಿ ರೂ.ಗಳ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿದೆ, ಇದು ಹೊಸ ಸಂಸತ್ತಿನ ಕಟ್ಟಡ, ಹೊಸ ಕಚೇರಿ ಮತ್ತು ಪ್ರಧಾನ ಮಂತ್ರಿ ಮತ್ತು ಉಪಾಧ್ಯಕ್ಷರ ನಿವಾಸಗಳು ಮತ್ತು ಹೊಸ ಸಚಿವಾಲಯದ ಕಟ್ಟಡಗಳನ್ನು ಹೊಂದಿರುತ್ತದೆ. ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳು, ರಾಷ್ಟ್ರಪತಿ ಭವನದ ಸುತ್ತಲಿನ ಸಚಿವಾಲಯದ ಕಟ್ಟಡಗಳನ್ನು ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸಲಾಗುತ್ತಿದೆ.

ಕಪ್ಪು ಗ್ರಾನೈಟ್ ಪ್ರತಿಮೆಯನ್ನು 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಬ್ಲಾಕ್‌ನಿಂದ ಕೆತ್ತಲಾಗಿದೆ. ತೆಲಂಗಾಣದಿಂದ ಪ್ರತಿಮೆಗಾಗಿ ಗ್ರಾನೈಟ್‌ನ ಬ್ಲಾಕ್ ಅನ್ನು ದೆಹಲಿಗೆ ಸಾಗಿಸಿ ಎರಡು ತಿಂಗಳಲ್ಲಿ ಪ್ರತಿಮೆಯನ್ನು ಕೆತ್ತಲಾಗಿದೆ.

ಬಿಗಿ ಭದ್ರತೆಯ ನಡುವೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಬಹು ನಿರೀಕ್ಷಿತ, ಪರಿಷ್ಕೃತ ‘ಕರ್ತವ್ಯ ಪಥ’ವನ್ನು ಉದ್ಘಾಟಿಸಲಿದ್ದಾರೆ.. ಪುನರಾಭಿವೃದ್ಧಿಗೊಂಡ ಮಾರ್ಗವು ಕೇಂದ್ರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆಯ ಒಂದು ಭಾಗವಾಗಿದೆ.

ಪ್ರತಿಮೆಯ ವಿಶೇಷ ಏನು? : 

28 ಅಡಿ- ಇಷ್ಟು ಎತ್ತರ. ಅಂದರೆ ಎರಡು ಮಹಡಿ ಕಟ್ಟಡದ ಎತ್ತರಕ್ಕಿಂತ ಕೊಂಚ ಎತ್ತರವಿದೆ. 600 ಅಡಿ ಎತ್ತರ ಇರುವ ಗುಜರಾತ್‌ನ ಏಕತಾಮೂರ್ತಿಗೆ  ಹೋಲಿಕೆ ಮಾಡಿದರೆ ಕಡಿಮೆ.

280 ಟನ್‌- ಪ್ರತಿಮೆಗೆ ಬಳಕೆ ಮಾಡಲಾಗಿರುವ ಕಪ್ಪು ಗ್ರ್ಯಾನೈಟ್‌ನ ತೂಕ

65,000

ಕೆ.ಜಿ.- ಪ್ರತಿಮೆಯ ತೂಕ

26,000

ಮಾನವ ಗಂಟೆ- ಕೆತ್ತಲು ಬೇಕಾದ ಅವಧಿ

ಎಲ್ಲಿ ಸ್ಥಾಪನೆ? :

ಐದನೇ ಕಿಂಗ್‌ ಜಾರ್ಜ್‌ ಇದ್ದ ಪ್ರತಿಮೆ ಸ್ಥಾನದಲ್ಲಿ ನೇತಾಜಿಯವರ ಹಾಲೋಗ್ರಾಂ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ಜ.23ರಂದು ಅನಾವರಣಗೊಳಿಸಿದ್ದರು. ಅದೇ ಜಾಗದಲ್ಲಿ ಹೊಸ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.

ಶಿಲೆ ಎಲ್ಲಿಯದ್ದು? :

ಪ್ರತಿಮೆಗಾಗಿ ತೆಲಂಗಾಣದ ತೆಲಂಗಾಣದ ಕಪ್ಪು ಗ್ರಾನೈಟ್‌ ಬಳಕೆ ಮಾಡಲಾಗಿದೆ. ಅದನ್ನು ಸಂಪೂರ್ಣ ಕೈಯಿಂದಲೇ ಕೆತ್ತಲಾಗಿದೆ. ಕೆಲಸ ಪೂರ್ತಿಗೊಂಡ ಬಳಿಕ ತೆಲಂಗಾಣದ ಖಮ್ಮಂನಿಂದ 1,665 ಕಿ.ಮೀ. ದೂರ ವಿಶೇಷವಾಗಿರುವ ಟ್ರಕ್‌ ಮೂಲಕ ನೇತಾಜಿ ಪ್ರತಿಮೆಯನ್ನು ಹೊಸದಿಲ್ಲಿಗೆ ತರಲಾಗಿದೆ. 100 ಅಡಿ ಉದ್ದದ ಟ್ರಕ್‌ ಮತ್ತು 140 ಟೈರ್‌ಗಳನ್ನು ಅದು ಹೊಂದಿತ್ತು.

ಶಿಲ್ಪಿ ಯಾರು? :

ಕೇದಾರನಾಥದಲ್ಲಿ 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಅನಾವರಣಗೊಂಡ 12 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು  ಕೆತ್ತನೆ ಮಾಡಿದ  ಮೈಸೂರಿನ ಅರುಣ್‌ ಯೋಗಿರಾಜ್‌ ಅವರೇ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯ ಕೆತ್ತನೆಯನ್ನು ಮಾಡಿದ್ದಾರೆ.

ಕೆನೋಪಿಯ ಮಹತ್ವವೇನು? :

ಇಂಡಿಯಾ ಗೇಟ್‌ನಿಂದ 150 ಮೀಟರ್‌ ದೂರದಲ್ಲಿ ಪೂರ್ವಕ್ಕೆ ಇರುವ ಸಿ-ಹೆಕೊÕàಜೆನ್‌ನಲ್ಲಿ 73 ಅಡಿ ಎತ್ತರದ ಕನೋಪಿ ಯನ್ನು ಸ್ಥಾಪಿಸಲಾಗಿದೆ. ಮಹಾಬಲಿಪುರಂನಲ್ಲಿ ಇರುವ ಆರನೇ ಶತಮಾನದ ಕಲಾಕೃತಿಯಿಂದ ಸ್ಫೂರ್ತಿಗೊಂಡು ಎಡ್ವಿನ್‌ ಲ್ಯೂಟೆನ್‌ ಅದನ್ನು ವಿನ್ಯಾಸಗೊಳಿಸಿದ್ದ. 1936ರಲ್ಲಿ  ಇಂಡಿಯಾ ಗೇಟ್‌ ಆವರಣಕ್ಕೆ ಅದನ್ನು ಸೇರ್ಪಡೆಗೊಳಿಸಲಾಗಿತ್ತು. ಅದಕ್ಕೆ ಪೂರಕವಾಗಿ ಭಾರತದ ಚಕ್ರವರ್ತಿಯಾಗಿದ್ದ ಐದನೇ ಕಿಂಗ್‌ ಜಾರ್ಜ್‌ನ 50 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗಿತ್ತು.  ಸ್ವಾತಂತ್ರ್ಯ ನಂತರ ಪ್ರತಿಮೆಯ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ ಅದು ದೇಶದ ಆಡಳಿತದ ನೀತಿ ನಿರೂಪಣೆ ಮಾಡುವ ಸ್ಥಳದ ಕೇಂದ್ರ ಭಾಗದಲ್ಲಿತ್ತು. ಅನಂತರ 1968ರಲ್ಲಿ ಅದನ್ನು ಸ್ಥಳಾಂತರ ಮಾಡಲಾಯಿತು.

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.