ರಾಣಿ ಎಲಿಜಬೆತ್ II ಭಾಗಿಯಾಗಿದ್ದ ಏಕೈಕ ಚಲನಚಿತ್ರ ಸೆಟ್ ನಮ್ಮದೇನೋ: ಕಮಲ್ ಹಾಸನ್
ಇಪ್ಪತ್ತೈದು ವರ್ಷಗಳ ಹಿಂದಿನ ನೆನಪು ಮಾಡಿದ ಹಿರಿಯ ನಟ
Team Udayavani, Sep 9, 2022, 4:38 PM IST
ಚೆನ್ನೈ: ಹಿರಿಯ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಸಂಸ್ಥಾಪಕ ಕಮಲ್ ಹಾಸನ್ ಶುಕ್ರವಾರ ರಾಣಿ ಎಲಿಜಬೆತ್ II ರ ನಿಧಾನಕ್ಕೆ ಸಂತಾಪ ಸೂಚಿಸಿದ್ದು, 1997 ರಲ್ಲಿ ಅಪೂರ್ಣವಾದ ‘ಮರುಧನಾಯಗಮ್’ ನ ಸೆಟ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ್ದಾರೆ.
”ಇಪ್ಪತ್ತೈದು ವರ್ಷಗಳ ಹಿಂದೆ, ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿದರು ಮತ್ತು ಮರುಧನಾಯಗಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಮ್ಮನ್ನು ಸ್ವಾಗತಿಸಿದರು. ಬಹುಷಃ ಆಕೆ ಭಾಗವಹಿಸಿದ್ದ ಏಕೈಕ ಚಲನಚಿತ್ರ ಚಿತ್ರೀಕರಣ ಇದಾಗಿದೆ ಎಂದು ಅವರು ಹೇಳಿದರು.
ನಾವು ಮಾತನಾಡಿದ ಸಂಭಾಷಣೆಗಳು ವಸಾಹತುಶಾಹಿ ಆಡಳಿತದ ವಿರುದ್ಧವಾಗಿತ್ತು. ಗೊತ್ತಿದ್ದೂ ಅವರು ಅಲ್ಲಿಗೆ ಬಂದಿದ್ದರು. ಅವರು ರಾಣಿಯಾಗಿ ಬಂದಿಲ್ಲ ಆದರೆ ತಾಯಿಯಾಗಿ ಬಂದಿದ್ದನ್ನು ತೋರಿಸುತ್ತದೆ, ರಾಜಕೀಯ ಬದಲಾಗಿದೆ, ಜಗತ್ತು ಬದಲಾಗಿದೆ ಎಂದು ಅರಿತುಕೊಂಡವರು. ಅದು ನನಗೆ ಇಷ್ಟವಾಯಿತು ಎಂದು ಹಾಸನ್ ಸುದ್ದಿಗಾರರಿಗೆ ತಿಳಿಸಿದರು.
ಅವರು “ಸಂಪೂರ್ಣ” ಜೀವನವನ್ನು ನಡೆಸಿದರು ಮತ್ತು ದೀರ್ಘಕಾಲ ಆಳ್ವಿಕೆ ನಡೆಸಿದರು ಎಂದು ಹೇಳಿದರು.
ಮರುದನಾಯಗಂ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ದೇಶಿಸಿದ ಮತ್ತು ನಿರ್ಮಿಸಿದ ಅಪೂರ್ಣ ಐತಿಹಾಸಿಕ ಕಥೆಯುಳ್ಳ ಚಲನಚಿತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.