ಹನಿ ಸಿಂಗ್ – ಶಾಲಿನಿ ತಲ್ವಾರ್ ವಿಚ್ಚೇದನ: ಒಂದು ಕೋಟಿ ರೂ ಜೀವನಾಂಶ ನೀಡಿದ ಸಿಂಗರ್
Team Udayavani, Sep 9, 2022, 5:06 PM IST
ಹೊಸದಿಲ್ಲಿ: ಪಂಜಾಬಿ ಗಾಯಕ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಪರಿಹಾರಕ್ಕಾಗಿ ಹನಿ ಸಿಂಗ್ ಒಂದು ಕೋಟಿ ರೂಪಾಯಿ ಜೀವನಾಂಶ ಪಾವತಿಸಿದ್ದಾರೆ.
2021 ರಲ್ಲಿ, ಶಾಲಿನಿ ತಲ್ವಾರ್ ಅವರು ಪತಿ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು.
ಗುರುವಾರ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಅವರು ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಜೀವನಾಂಶದ ಕುರಿತಾಗಿ ಇತ್ಯರ್ಥಕ್ಕೆ ಬಂದರು.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ವಿನೋದ್ ಕುಮಾರ್ ಅವರ ಸಮ್ಮುಖದಲ್ಲಿ, ಹನಿ ಸಿಂಗ್ ಅವರು ಶಾಲಿನಿ ತಲ್ವಾರ್ ಅವರಿಗೆ ಮುಚ್ಚಿದ ಕವರ್ ನಲ್ಲಿ ಒಂದು ಕೋಟಿ ರೂ.ಗಳ ಜೀವನಾಂಶವನ್ನು ನೀಡಿದರು. ಪ್ರಕರಣದ ಮುಂದಿನ ವಿಚಾರಣೆಯು 2023ರ ಮಾರ್ಚ್ 20ರಂದು ನಡೆಯಲಿದೆ.
ಇದಕ್ಕೂ ಮುನ್ನ ಹನಿ ಸಿಂಗ್ ಕೌಟುಂಬಿಕ ದೌರ್ಜನ್ಯ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಎಲ್ಲಾ ಆರೋಪಗಳನ್ನು ನಿರಾಕರಿಸಿದ ಅವರು, ಆರೋಪಗಳನ್ನು ‘ಸುಳ್ಳು ಮತ್ತು ದುರುದ್ದೇಶಪೂರಿತ’ ಎಂದರು.
ಇದನ್ನೂ ಓದಿ:ನೂಪುರ್ ಶರ್ಮಾ ಬಂಧನಕ್ಕೆ ಕೋರಿ ಮನವಿ: ಪರಿಗಣಿಸಲು ನಿರಾಕರಿಸಿದ ಸುಪ್ರೀಂ
“ನನ್ನ ಸಾಹಿತ್ಯ, ನನ್ನ ಆರೋಗ್ಯದ ಬಗ್ಗೆ ಊಹಾಪೋಹಗಳು ಮತ್ತು ನೆಗೆಟಿವ್ ಪಬ್ಲಿಸಿಟಿಗಳಿದ್ದರೂ ನಾನು ಈ ಹಿಂದೆ ಯಾವುದೇ ಸಾರ್ವಜನಿಕ ಹೇಳಿಕೆ ಅಥವಾ ಪತ್ರಿಕಾ ಟಿಪ್ಪಣಿಯನ್ನು ನೀಡಿಲ್ಲ. ಆದಾಗ್ಯೂ, ಈ ಬಾರಿ ಅಧ್ಯಯನದ ಮೌನವನ್ನು ಕಾಯ್ದುಕೊಳ್ಳುವುದರಲ್ಲಿ ನಾನು ಯಾವುದೇ ಅರ್ಥ ಕಾಣುತ್ತಿಲ್ಲ. ಯಾಕೆಂದರೆ ಕೆಲವು ಆರೋಪಗಳು ನನ್ನ ಕುಟುಂಬ, ನನ್ನ ಹೆತ್ತವರು ಮತ್ತು ತಂಗಿಯ ಮೇಲೆ ಗುರಿಯಾಗಿಸಿದೆ. ಅವರು ಕೆಲವು ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದಾರೆ” ಎಂದು ಹನಿ ಸಿಂಗ್ ಬರೆದುಕೊಂಡಿದ್ದಾರೆ.
ಹನಿ ಸಿಂಗ್ ವಿರುದ್ಧ ಶಾಲಿನಿ ತಲ್ವಾರ್ ಅವರು ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ, ವಂಚನೆ ಮತ್ತು ಆರ್ಥಿಕ ವಂಚನೆ ಆರೋಪ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.