ದಟ್ಟ ಅರಣ್ಯದ ನಡುವೆ ನಿಸರ್ಗದಿಂದಲೇ ನಿರ್ಮಾಣಗೊಂಡಿದೆ ಕವಳಾ ಗುಹೆ…


Team Udayavani, Sep 10, 2022, 5:40 PM IST

ದಟ್ಟ ಅರಣ್ಯದ ನಡುವೆ ನಿಸರ್ಗದಿಂದಲೇ ನಿರ್ಮಾಣಗೊಂಡಿದೆ ಕವಳಾ ಗುಹೆ…

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ… ಇಲ್ಲಿ ಜಲಪಾತ, ಗಿರಿ ಶಿಖರ, ನದಿಗಳು, ದಟ್ಟ ಅರಣ್ಯ ಪ್ರದೇಶಗಳು, ಐತಿಹಾಸಿಕ ತಾಣಗಳು ಸೇರಿದಂತೆ ಪ್ರವಾಸಿಗರನ್ನು ದಾಂಡೇಲಿಗೆ ಕೈಬೀಸಿ ಕರೆಯುತ್ತದೆ. ದಾಂಡೇಲಿಯಲ್ಲಿ ಪ್ರವಾಸಿ ತಾಣಗಳ ಪಟ್ಟಿ ಮಾಡಿದರೆ ಮುಗಿಯದಷ್ಟು ಸ್ಥಳಗಳು ಇಲ್ಲಿ ಕಾಣಸಿಗುತ್ತವೆ ಆದರೆ ನಾನಿಂದು ದಾಂಡೇಲಿಯಲ್ಲಿ ಬಹಳ ವಿಶೇಷವಾಗಿರುವ ಸ್ಥಳದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇನೆ ಅಲ್ಲದೆ ದಾಂಡೇಲಿ ಪ್ರವಾಸ ಕೈಗೊಂಡವರು ಈ ಸ್ಥಳಕ್ಕೂ ಭೇಟಿ ನೀಡಿ. ನಿಜಕ್ಕೂ ಈ ಸ್ಥಳ ನಿಮಗೆ ಒಂದು ಹೊಸ ಅನುಭವ ನೀಡಬಹುದು, ಅಂದ ಹಾಗೆ ನಾನು ಹೇಳ ಹೊರಟಿರುವುದು ದಾಂಡೇಲಿಯ ದಟ್ಟ ಅರಣ್ಯದಲ್ಲಿ ನೈಸರ್ಗಿಕವಾಗಿ ನೆಲೆ ನಿಂತಿರುವ ಕವಳಾ ಗುಹೆ…

ದಾಂಡೇಲಿಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಕವಳಾ ಗುಹೆ ದಟ್ಟ ಅರಣ್ಯದ ಮಧ್ಯೆ ಇರುವ ಬೆಟ್ಟದ ಮೇಲಿದ್ದು ಇಲ್ಲಿಗೆ ತಲುಪಬೇಕಾದರೆ ಸುಮಾರು ಮೂನ್ನೂರ ಐವತ್ತಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಲೇ ಬೇಕು ಆ ಬಳಿಕ ಗುಹೆಯ ಪ್ರವೇಶ ದ್ವಾರ ಸಿಗುತ್ತದೆ ಅಲ್ಲಿಂದ ಮುಂದುವರೆದಂತೆ ಕಡಿದಾದ ದಾರಿಸಿಗುತ್ತದೆ ಅಲ್ಲಿಂದ ಮುಂದೆ ಪ್ರವೇಶಿಸಿದರೆ ಪ್ರಕೃತಿಯಿಂದಲೇ ನಿರ್ಮಾಣಗೊಂಡ ಐದು ಅಡಿ ಎತ್ತರದ ದುಂಡಾಕಾರದ ಶಿವಲಿಂಗ ಕಾಣಸಿಗುತ್ತದೆ ಈ ಶಿವಲಿಂಗದ ಮೇಲೆ ಬಂಡೆಕಲ್ಲುಗಳು ಆವರಿಸಿಕೊಂಡಿದ್ದು ಇದರಿಂದ ಚಿಮ್ಮುವ ನೀರಿನಿಂದಲೇ ಶಿವಲಿಂಗಕ್ಕೆ ನಿತ್ಯ ಅಭಿಷೇಕ.

ಶಿವರಾತ್ರಿ ಇಲ್ಲಿ ವಿಶೇಷ :

ಪ್ರಕೃತಿಯಿಂದಲೇ ನಿರ್ಮಾಣಗೊಂಡ ಶಿವಲಿಂಗಕ್ಕೆ ಶಿವರಾತ್ರಿಯ ಸಂದರ್ಭ ಇಲ್ಲಿ ವಿಶೇಷ ಪೂಜೆ ನಡೆಯುತ್ತಂತೆ ಅಲ್ಲದೆ ರಾಜ್ಯದ ನಾನಾ ಕಡೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ ಶಿವರಾತ್ರಿಯ ದಿನ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಭಕ್ತರಿಗೆ ದೇವರ ದರ್ಶನ ಆಗಬೇಕಾದರೆ ಸಂಜೆ ವರೆಗೂ ಕಾಯಬೇಕಾಗುತ್ತದೆ ಎಂದು ಇಲ್ಲಿಗೆ ಭೇಟಿ ನೀಡಿದ ಭಕ್ತರ ಮಾತು.ಅಲ್ಲದೆ ಈ ಬೆಟ್ಟದ ಮೇಲೆ ನಿಂತು ನೋಡಿದರೆ ಬೆಟ್ಟದ ಬುಡದಲ್ಲಿ ಹರಿಯುವ ಕಾಳಿ ನದಿ ಹಾಗೂ ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ಕಾಣಬಹುದು.

ಜ್ವಾಲಾಮುಖಿಯಿಂದ ಗುಹೆ ನಿರ್ಮಾಣ :
ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸಂಭವಿಸಿದ ಜ್ವಾಲಾಮುಖಿಯಿಂದ ಈ ಗುಹೆ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ ಅದಕ್ಕೆ ಪೂರಕವೆಂಬಂತೆ ಇಲ್ಲಿನ ಕಲ್ಲು ಬಂಡೆಗಳು ಜ್ವಾಲಾಮುಖಿ ಸ್ಪೋಟಗೊಂಡು ನಿರ್ಮಾಣವಾದಂತೆ ಭಾಸವಾಗುತ್ತದೆ.

ಅರಣ್ಯ ಇಲಾಖೆಯ ಅನುಮತಿ ಅಗತ್ಯ :
ಕವಳಾ ಗುಹೆಗೆ ಶಿವರಾತ್ರಿ ದಿನ ಬಿಟ್ಟು ಉಳಿದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಅಲ್ಲದೆ ಪ್ರವಾಸಿಗರಿಗೆ ಗುಹೆ ಪ್ರವೇಶಿಸಲು ಪ್ರವೇಶ ಶುಲ್ಕ ಪಾವತಿಸಬೇಕು. ಮುಖ್ಯ ವಿಚಾರ ಏನೆಂದರೆ ಈ ಗುಹೆಗೆ ಭೇಟಿ ನೀಡಲು ಬೆಳಿಗ್ಗೆ 8 ರಿಂದ ಸಂಜೆ 5ರ ವರೆಗೆ ಮಾತ್ರ ಅರಣ್ಯ ಇಲಾಖೆಯ ಅನುಮತಿ ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಸ್ವಚ್ಛತೆ ಕಾಪಾಡಿ :
ಯಾವುದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು ನಾನು ಅಲ್ಲಿನ ಪರಿಸರವನ್ನು ಸ್ವಚ್ಛವಾಗಿರಿಸುವುದು ನಮ್ಮ ಕರ್ತವ್ಯ ಹಾಗಾಗಿ ನಾವು ಕೊಂಡುಹೋದ ತಿಂಡಿ ತಿನಿಸುಗಳ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ ಜೊತೆಗೆ ಇತರರಿಗೂ ಈ ವಿಚಾರ ತಿಳಿಸಿ.

ಎಚ್ಚರವೂ ಅಗತ್ಯ :
ಕವಳಾ ಗುಹೆ ಪ್ರದೇಶ ದಟ್ಟ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಕಾಡು ಪ್ರಾಣಿಗಳು, ಹಾವುಗಳಂತ ವಿಷಕಾರಿ ಜೀವಿಗಳು ಇರುವ ಸಾಧ್ಯತೆ ಹೆಚ್ಚು ಅದೂ ಮಳೆಗಾಲದಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುವ ಕಾರಣ ಎಚ್ಚರ ಅಗತ್ಯ.

ಮಾರ್ಗ ಹೇಗೆ :
ಕವಳಾ ಗುಹೆ ಪ್ರವೇಶಿಸಲು ಎರಡು ಮಾರ್ಗಗಳಿವೆ ಮೊದಲನೆಯದು ಜೋಯಿಡಾ ತಾಲೂಕಿನ ಪಣಸೋಲಿಯಿಂದ ದಟ್ಟ ಅರಣ್ಯದ ಮಧ್ಯೆ ಸಾಗುವ ದಾರಿಯಾದರೆ, ಎರಡನೆಯದು ಅಂಬಿಕಾನಗರದ ನಾಗಝರಿಯಿಂದ ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗುವ ಮಾರ್ಗವಾಗಿದೆ.

ನೀವು ಮೂರು ನಾಲ್ಕು ದಿನಗಳ ಲೆಕ್ಕಾಚಾರದಲ್ಲಿ ದಾಂಡೇಲಿ ಪ್ರವಾಸ ಕೈಗೊಂಡರೆ ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿರುವ ಸ್ಕೈ ಪಾಯಿಂಟ್ ಮೂಲಕ ಕಾಳಿ ಕಣಿವೆಯ ರುದ್ರ ರಮಣೀಯ ನೋಟವನ್ನು ನೋಡಬಹುದಾಗಿದೆ. ಅಲ್ಲದೆ ರಿವರ್ ರಾಫ್ಟಿಂಗ್ ಗೂ ಕಾಳಿ ನದಿ ಹೆಸರುವಾಸಿ. ದಾಂಡೇಲಿ ಅಭಯಾರಣ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಅರಣ್ಯ ಇಲಾಖೆಯ ಅನುಮತಿ ಪಡೆದು ಎಲ್ಲ ಪ್ರದೇಶವನ್ನು ವೀಕ್ಷಿಸಬಹುದಾಗಿದೆ, ಇಲ್ಲಿ ಪ್ರವಾಸಿಗರಿಗೆ ಉಳಿಯಲು ಹೋಟೆಲ್, ರೆಸಾರ್ಟ್ ಗಳ ವ್ಯವಸ್ಥೆಯೂ ಇದೆ.

– ಸುಧೀರ್ ಆಚಾರ್ಯ 

ಟಾಪ್ ನ್ಯೂಸ್

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.