“ವೈಟ್ಲಿಸ್ಟ್’ನಲ್ಲಿರುವ ಆ್ಯಪ್ ಗಳಿಂದ ಮಾತ್ರ ಸಾಲ ಪಡೆಯಿರಿ
Team Udayavani, Sep 10, 2022, 7:35 AM IST
ನವದೆಹಲಿ: ಇನ್ನು ಮುಂದೆ, ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಪಟ್ಟಿ ಮಾಡುವ ಲೋನ್ ಆ್ಯಪ್ಗ್ಳ ಮೂಲಕವಷ್ಟೇ ನೀವು ಆನ್ಲೈನ್ ಸಾಲ ಪಡೆಯಬಹುದು.
ದೇಶಾದ್ಯಂತ ಕಾನೂನುಬಾಹಿರ ಡಿಜಿಟಲ್ ಲೋನ್ ಆ್ಯಪ್ ಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಅದರಂತೆ, “ಸಾಲ ನೀಡುವ ಕಾನೂನುಬದ್ಧವಾದ ಆ್ಯಪ್’ಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸರ್ಕಾರವು ಆರ್ಬಿಐಗೆ ಸೂಚಿಸಿದೆ. ಆರ್ಬಿಐ ಇಂಥ ಕಾನೂನುಬದ್ಧ ಆ್ಯಪ್ ಗಳ “ವೈಟ್ಲಿಸ್ಟ್’ ತಯಾರಿಸಲಿದ್ದು, ದೇಶದ ನಾಗರಿಕರು ಈ ಪಟ್ಟಿಯಲ್ಲಿರುವ ಆ್ಯಪ್ ಗಳಿಂದ ಮಾತ್ರ ಸಾಲ ಪಡೆಯಬಹುದು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಹೊರಗಿರುವಂಥ ಕಾನೂನುಬಾಹಿರ ಲೋನ್ ಆ್ಯಪ್ ಗಳು ಕಡಿಮೆ ಆದಾಯವಿರುವ ಜನರನ್ನು ವಂಚಿಸುತ್ತಿರುವ ಬಗ್ಗೆ ಅನೇಕ ದೂರುಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು. ಪ್ರಸಕ್ತ ವರ್ಷದ ಆರಂಭದಲ್ಲಿ ಆರ್ಬಿಐ ಸುಮಾರು 600ರಷ್ಟು ಅಕ್ರಮ ಲೋನ್ ಆ್ಯಪ್ ಗಳನ್ನು ಪತ್ತೆಹಚ್ಚಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.