ಬುಲೆಟ್ ರೈಲಿನ ದಾಖಲೆ ಮುರಿದ ವಂದೇ ಭಾರತ್ ರೈಲು!
Team Udayavani, Sep 11, 2022, 7:20 AM IST
ನವದೆಹಲಿ: ಸೆಮಿ ಹೈಸ್ಪೀಡ್ ರೈಲು “ವಂದೇ ಭಾರತ್’ ಎಕ್ಸ್ಪ್ರೆಸ್ ತನ್ನ ಪ್ರಾಯೋಗಿಕ ಸಂಚಾರದಲ್ಲಿ ಬುಲೆಟ್ ರೈಲಿನ ದಾಖಲೆ ಸರಿಗಟ್ಟಿದೆ. ಅಹಮದಾಬಾದ್ ಮತ್ತು ಮುಂಬೈ ನಡುವೆ ಶುಕ್ರವಾರ ಪ್ರಾಯೋಗಿಕ ಸಂಚಾರ ನಡೆಸಿದ ವಂದೇ ಭಾರತ್ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ. ವೇಗ ಪಡೆದುಕೊಂಡಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇದನ್ನು “ಭಾರತೀಯ ರೈಲ್ವೆಯ ಹೆಮ್ಮೆಯ ಕ್ಷಣ’ ಎಂದು ಬಣ್ಣಿಸಿದ್ದಾರೆ. ಇದರ ಮೂಲಕ ವಂದೇ ಭಾರತ್ ರೈಲಿನ ಮೂರನೇ ರೇಕುವಿನ ಪರೀಕ್ಷೆಯೂ ಯಶಸ್ವಿಯಾಗಿ ಪೂರ್ಣಗೊಂಡಂತಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಪ್ರಾಯೋಗಿಕ ಸಂಚಾರವು ಪೂರ್ಣಗೊಂಡಿರುವ ಕಾರಣ, ಆದಷ್ಟು ಬೇಗ ಉಳಿದ 72 ರೈಲುಗಳ ಸರಣಿ ಉತ್ಪಾದನೆ ಆರಂಭವಾಗಲಿದೆ ಎಂದೂ ತಿಳಿಸಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳು:
ಸೆಮಿ ಹೈಸ್ಪೀಡ್ ರೈಲುಗಳ ಹೊಸ ಅವತಾರದಲ್ಲಿ ಹಲವಾರು ಹೊಸ ಫೀಚರ್ಗಳಿವೆ. ಮೊದಲ ತಲೆಮಾರಿನ ವಂದೇ ಭಾರತ್ ರೈಲುಗಳ ವೇಗ ಗಂಟೆಗೆ 160 ಕಿ.ಮೀ. ಇದ್ದು, 54.6 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ಪಡೆಯುತ್ತಿತ್ತು. ಆದರೆ, 3ನೇ ವಂದೇ ಭಾರತ್ ರೈಲಿನ ವೇಗ ಗಂಟೆಗೆ 180 ಕಿ.ಮೀ. ಆಗಿದ್ದು, 100 ಕಿ.ಮೀ. ವೇಗ ಪಡೆಯಲು ಕೇವಲ 52 ಸೆಕೆಂಡು ಸಾಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.