ಹೊರಗುತ್ತಿಗೆ ಸಿಬಂದಿಗೆ ರಾಜ್ಯ ಸರಕಾರದ ಬಲ: ಸಂಸ್ಥೆಯ ಪೂರ್ವಾಪರ ಪರಿಶೀಲನೆ ಕಡ್ಡಾಯ
ಕಾರ್ಮಿಕ ಕಾನೂನು ಪಾಲನೆ ಬಗ್ಗೆ ನಿಗಾ
Team Udayavani, Sep 11, 2022, 6:45 AM IST
ದಾವಣಗೆರೆ: ಸರಕಾರಿ, ಅರೆ ಸರಕಾರಿ ಸಹಿತ ವಿವಿಧ ಇಲಾಖೆ, ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬಂದಿಯನ್ನು ನೇಮಿಸಿಕೊಳ್ಳುವಾಗ ಅಧಿಕಾರಿಗಳು ಗುತ್ತಿಗೆದಾರ ಸಂಸ್ಥೆಯ ಪೂರ್ವಾಪರ ಪರಿಶೀಲಿಸಬೇಕು. ಈ ವಿಚಾರದಲ್ಲಿ ಕಾರ್ಮಿಕ ಇಲಾಖೆ ನಿಯಮ ಉಲ್ಲಂಘನೆಯನ್ನು ಗಂಭೀರ ವಾಗಿ ಪರಿಗಣಿಸುವುದಾಗಿ ಸರಕಾರ ಹೇಳಿದೆ.
ಮಾನವ ಸಂಪನ್ಮೂಲ ಪೂರೈಸುವ ಸಂಸ್ಥೆಯವರು ಸಿಬಂದಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿ ಮಾಡುತ್ತಿಲ್ಲ. ಸಿಬಂದಿಗೆ ನೀಡಬೇಕಾದ ತಮ್ಮ ಪಾಲಿನ ಪಿಎಫ್, ಇಎಸ್‌ಐ ವಂತಿಗೆಯನ್ನು ಸರಿಯಾಗಿ ತುಂಬುತ್ತಿಲ್ಲ. ಎಂಟು ತಾಸುಗಳಿಗಿಂತ ಹೆಚ್ಚು ಕೆಲಸ ಮಾಡಿದ್ದಕ್ಕೆ ಭತ್ತೆ ನೀಡುತ್ತಿಲ್ಲ ಮುಂತಾದ ದೂರುಗಳು ಹೊರಗುತ್ತಿಗೆ ಸಿಬಂದಿಯಿಂದ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಸಿಬಂದಿಗೆ ಗುತ್ತಿಗೆದಾರ ಸಂಸ್ಥೆಯಿಂದಾಗುವ ಕಿರುಕುಳ ತಪ್ಪಿಸಲು ಸಂಬಂಧಪಟ್ಟ ಅಧಿಕಾರಿ ಗಳು ಟೆಂಡರ್ ನೀಡುವ ಮೊದಲೇ ಸಂಸ್ಥೆಯ ಪೂರ್ವಾ ಪರವನ್ನು ಕಡ್ಡಾಯವಾಗಿ ಪರಾಮರ್ಶಿಸಬೇಕೆಂದು ನಿರ್ದೇಶನ ನೀಡಿದೆ.
ಕನಿಷ್ಠ ವೇತನ ದರಗಳು ಶಾಸನಬದ್ಧ ಪರಿಮಿತಿ ಆಗಿರುವುದರಿಂದ ಗುತ್ತಿಗೆದಾರ ಸಂಸ್ಥೆ ಕನಿಷ್ಠ ವೇತನ ದರ ನಮೂದಿಸದೆ ಟೆಂಡರ್ ದಾಖಲೆಯಲ್ಲಿ ಕೇವಲ ಸೇವಾ ಶುಲ್ಕ ಮಾತ್ರ ನಮೂದಿಸುವ ಅವಕಾಶವನ್ನು ಕಲ್ಪಿಸುವ ಷರತ್ತಿನೊಂದಿಗೆ ಟೆಂಡರ್ ಪ್ರಕಟಿಸಬೇಕು. ಸಂಸ್ಥೆಯು ಈ ಹಿಂದೆ ನೌಕರರ ಇಎಸ್‌ಐ, ಪಿಎಫ್‌ನ ಮಾಲಕರ ವಂತಿಗೆಯನ್ನು ಸರಿಯಾಗಿ ಪಾವತಿಸಿದೆಯೇ? ಕಾರ್ಮಿಕ ಕಾನೂನು ಪಾಲನೆಯಾಗಿದೆಯೇ ಮುಂತಾದವುಗಳನ್ನು ಪರಿಶೀಲಿಸಿಕೊಳ್ಳಬೇಕು. ಸಂಸ್ಥೆ ಈ ಹಿಂದೆ ಯಾವುದೇ ಸಕ್ಷಮ ನ್ಯಾಯಾಲಯದಿಂದ ಕಾರ್ಮಿಕ ಕಾನೂನಿನ ಉಲ್ಲಂಘನೆಗಾಗಿ ದಂಡನೆಗೊಳಗಾಗಿದ್ದರೆ ಟೆಂಡರ್ ನೀಡಬಾರದು ಎಂದೂ ಸರಕಾರ ಸೂಚಿಸಿದೆ.
ನಿಯಮ ಪಾಲಿಸಿ
ಸರಕಾರ ವಿವಿಧ ಕೆಲಸಗಳಿಗೆ ನಿಗದಿಪಡಿಸಿದ ಕನಿಷ್ಠ ವೇತನ ದರವನ್ನು ಗುತ್ತಿಗೆ ಸಂಸ್ಥೆ ನೀಡಬೇಕು. ಕಾರ್ಮಿಕರ ಕೆಲಸದ ಸ್ವರೂಪದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಲ್ಲಿ ಈ ಕುರಿತು ಸ್ಪಷ್ಟ ನಿರ್ಣಯಕ್ಕೆ ಬರಲು ಆಯಾ ಇಲಾಖೆಗಳ ಹಂತದಲ್ಲಿ ಅಧಿಸೂಚನೆಯಲ್ಲಿ ನಮೂದಾಗಿರುವ ಕೆಲಸದ ಸ್ವರೂಪಗಳನ್ನು ಅಧ್ಯಯನ ಮಾಡಿ, ಆಯಾ ಸ್ವರೂಪದ ಕೆಲಸಗಳಿಗೆ ವೇತನ ಅನ್ವಯಿಸಿಕೊಳ್ಳಬೇಕು. ಗುತ್ತಿಗೆದಾರ ಸಂಸ್ಥೆ ಪ್ರತಿವರ್ಷ ಎಪ್ರಿಲ್‌ನಲ್ಲಿ ಏರಿಕೆಯಾಗುವ ವ್ಯತ್ಯಸ್ಥ ತುಟ್ಟಿಭತ್ತೆ ದರಗಳನ್ನು ಸೇರಿಸಿ ಪಾವತಿಸಬೇಕು. ವಿರಾಮವು ಒಳಗೊಂಡಂತೆ ದಿನಕ್ಕೆ ಎಂಟು ತಾಸುಗಳ ಕೆಲಸಕ್ಕೆ ಕನಿಷ್ಠ ವೇತನವಿದ್ದು, ಅದಕ್ಕಿಂತ ಹೆಚ್ಚಿನ ಕೆಲಸಕ್ಕಾಗಿ ಹೆಚ್ಚುವರಿ ಭತ್ತೆಯನ್ನು ಗಂಟೆ ಹೆಚ್ಚಾದಂತೆ ದ್ವಿಗುಣ ದರದಲ್ಲಿ ನೀಡಬೇಕು. ವೇತನ ಲೆಕ್ಕ ಹಾಕುವಾಗ ತಿಂಗಳಿನ ನಾಲ್ಕು ರಜಾ ದಿನಗಳನ್ನು ಪರಿಗಣಿಸಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಮುಂತಾದ ಷರತ್ತಿನೊಂದಿಗೆ ಗುತ್ತಿಗೆ ನೀಡಬೇಕೆಂದು ಸರಕಾರ ಆದೇಶಿಸಿದೆ.
ಸರಕಾರಿ ಇಲಾಖೆಗಳು, ಸಂಘ- ಸಂಸ್ಥೆಗಳು, ಸರಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಪಡೆಯುವಾಗ ಕಾರ್ಮಿಕ ಇಲಾಖೆ ಯನ್ವಯ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇವುಗಳನ್ನು ಪಾಲಿಸದೆ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಸರಕಾರವು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿದೆ.
– ಸಂಧ್ಯಾ ನಾಯಕ್,
ಸರಕಾರದ ಉಪ ಕಾರ್ಯದರ್ಶಿ, ಕಾರ್ಮಿಕ ಇಲಾಖೆ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.