ಚಿಂಚೋಳಿ: ಧಾರಾಕಾರ ಮಳೆಗೆ ಭರ್ತಿಯಾದ ಮುಲ್ಲಾಮಾರಿ ಜಲಾಶಯ
Team Udayavani, Sep 11, 2022, 12:49 PM IST
ಚಿಂಚೋಳಿ: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯ ಹಾಗೂ ಚನ್ನಪಟ್ಟಣ ಜಲಾಶಯ ಭರ್ತಿಯಾಗಿ 2 ಜಲಾಶಯದಿಂದ ಗೇಟ್ ಗಳ ಮೂಲಕ ನೀರು ಹರಿಬಿಡಲಾಗಿದೆ.
ಮುಲ್ಲಾಮಾರಿ ನದಿ ದಂಡೆಯಲ್ಲಿರುವ ತಾಜ್ಲಾಪುರ್ ಗೌಡನಹಳ್ಳಿ ಗಾರಂಪಳ್ಳಿ ಕನಕಪುರ ಗರಗಪಳ್ಳಿ ಪೋಲಕಪಳ್ಳಿ ಬ್ಯಾರೇಜ್ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ತಾಲ್ಲೂಕಿನ ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿದೆ.
ಕುಂಜರ ವನ್ಯಜೀವಿಧಾಮದ ವ್ಯಾಪಕ ಧಾರಾಕಾರವಾಗಿ ಆರ್ಭಟದಿಂದ ಮಳೆಯಾಗುತ್ತಿದ್ದು ತೆಲಂಗಾಣದ ಕೊಹಿರ ನದಿ ತುಂಬಿ ಹರಿಯುತ್ತಿದೆ. ನದಿಯ ಕೆಳಭಾಗದಲ್ಲಿರುವ ಎತ್ತಪೋತ ಜಲಾಗಾರಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿವ ಜಲಧಾರೆ ಮೈದುಂಬಿ ಹರಿಯುತ್ತಿದೆ ಇದರಿಂದ ಜಲಧಾರೆಯನ್ನು ನೋಡಲು ವಿವಿಧ ಕಡೆಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಆನಂದ ಪಡುತ್ತಿದ್ದಾರೆ.
ಅಲ್ಲದೆ ಮಾಣಿಕಪುರ ಜಲಧಾರೆ ಕೂಡ ಮೈ ತುಂಬಿ ಹರಿಯುತ್ತಿದೆ. ತೆಲಂಗಾಣದ ಜಹೀರಾಬಾದ್ ಬೀದರಚಿಂಚೋಳಿ ತಾಂಡೂರು ಕುಂಚಾವರಂ ವಿವಿಧ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಮೈದುಂಬಿ ಹರಿಯುತ್ತಿರುವ ಜಲಧಾರೆಯನ್ನು ಕಣ್ತುಂಬ ನೋಡಿ ಸಂತಸ ಪಡುತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.