ಸವಳು-ಜವಳು ಸಮಸ್ಯೆ ಬಗೆಹರಿಸಿ
Team Udayavani, Sep 11, 2022, 4:55 PM IST
ಮುದ್ದೇಬಿಹಾಳ: ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರು ಹಾಗೂ ಆಲಮಟ್ಟಿ ಎಡದಂಡೆ ಕಾಲುವೆಗಳಿಂದಾಗಿ ಕೃಷ್ಣಾ ನದಿ ತೀರದಲ್ಲಿರುವ ಹಡಗಲಿ ಗ್ರಾಮ ವ್ಯಾಪ್ತಿಯ ಅಂದಾಜು 150 ಎಕರೆ ಜಮೀನು ಸವಳು ಜವಳು ಸಮಸ್ಯೆಗೋಡಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಡಗಲಿ ಗ್ರಾಮದ ರೈತರು ಶಿರಸ್ತೇದಾರ್ ವೀರೇಶ ತೊನಶ್ಯಾಳಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಗತಿಪರ ರೈತ ಬಾಪುರಾವ್ ದೇಸಾಯಿ ಮಾತನಾಡಿ, ಸವಳಾಗಿರುವ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಈ ಜಮೀನುಗಳನ್ನು ನಂಬಿಕೊಂಡಿದ್ದ ರೈತರು ಉಪ ಜೀವನ ನಡೆಸಲು ಕಷ್ಟಕರವಾಗಿದೆ. ಸರ್ಕಾರಕ್ಕೆ ಈ ಕುರಿತಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಹಿಂದೆ ಅಧಿಕಾರಿಗಳು ಕೃಷಿ ವಿಶ್ವ ವಿದ್ಯಾಲಯದಿಂದ ಸವಳು ಜಮೀನು ಎಂದು ಮಣ್ಣು ಪರೀಕ್ಷೆ ಮಾಡಿಸಿಕೊಂಡು ಬರಲು ತಿಳಿಸಿದ್ದರು. ಅದರಂತೆ ವರದಿ ಕೂಡಾ ಸಲ್ಲಿಸಿದ್ದರೂ ನಮಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ ಅವರು, ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕಾಡಳಿತ ಸೌಧದ ಎದುರಿಗೆ ಧರಣಿ ಸತ್ಯಾಗ್ರಹ ಕೂಡುವುದಾಗಿ ಸ್ಪಷ್ಟಪಡಿಸಿದರು.
ರೈತರಾದ ನಬಿಸಾ ಮುಲ್ಲಾ, ಸಂಗಣ್ಣ ಕುಂಚಗನೂರ, ಗುರುಭೀಮರಾವ ದೇಸಾಯಿ, ರವಿಕುಮಾರ ಮಾಗಿ, ಬೀರಪ್ಪ ಕುರಿ, ರಜಿಯಾಬೇಗಂ ಗುಂತಗೂಳಿ, ತಿಪ್ಪಮ್ಮ ರತ್ನಾಕರ, ಅಸ್ಪಾಕ ಬಿಳೇಕುದರಿ, ಧರಿಯಪ್ಪ ಬಟಕುರ್ಕಿ, ರಾಜೇಸಾಬ ವಾಲೀಕಾರ, ಹನುಮಂತಪ್ಪ ತಳವಾರ, ನಾಗರಾಜ ಬಡಿಗೇರ, ಮುತ್ತಪ್ಪ ಅಂಬಿಗೇರ, ಚಂದ್ರಪ್ಪ ಹುಡೇದ, ಹನುಮಂತಗೌಡ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.