ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ: ರಾಜ್ಯದ ಶಿಶಿರ್ ದೇಶಕ್ಕೇ ಮೊದಲಿಗ
ವೆಚ್ಚ ಜ್ಞಾನ ಮಹೇಶ್‌ಗೆ 10ನೇ ರ್‍ಯಾಂಕ್
Team Udayavani, Sep 12, 2022, 7:00 AM IST
ಹೊಸದಿಲ್ಲಿ/ಬೆಂಗಳೂರು: ಐಐಟಿ ಸೇರಿದಂತೆ ಅತ್ಯುನ್ನತ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಜೆಇಇ-ಅಡ್ವಾನ್ಸ್ಡ್ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಆರ್.ಕೆ. ಶಿಶಿರ್ ದೇಶಕ್ಕೆ ಮೊದಲಿಗರಾಗಿದ್ದಾರೆ. ಅಷ್ಟೇ ಅಲ್ಲ, ಟಾಪ್ 10ರಲ್ಲಿ ರಾಜ್ಯದಲ್ಲಿ ವ್ಯಾಸಂಗ ಮಾಡಿದ ಇಬ್ಬರಿಗೆ ಸ್ಥಾನ ಸಿಕ್ಕಿರು ವುದು ವಿಶೇಷ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಯೊಬ್ಬರು ಜೆಇಇ- ಅಡ್ವಾನ್ಸ್ಡ್ ನಲ್ಲಿ ದೇಶಕ್ಕೆ ಮೊದಲಿಗರಾಗಿದ್ದಾರೆ. ಶಿಶಿರ್ 360 ಅಂಕಗಳಲ್ಲಿ 314 ಅಂಕಗಳನ್ನು ಪಡೆದಿದ್ದಾರೆ. ಅವರು ಜೆಇಇ ಮೈನ್ಸ್‌ನಲ್ಲಿ 56ನೇ ರ್‍ಯಾಂಕ್ ಪಡೆದಿದ್ದರಲ್ಲದೆ ಕರ್ನಾಟಕ ಸಿಇಟಿಯ ಬಿ. ಫಾರ್ಮಾ ವಿಭಾಗದಲ್ಲಿ ಪ್ರಥಮ ರ್‍ಯಾಂಕ್, ಎಂಜಿನಿಯರಿಂಗ್‌ನಲ್ಲಿ 4ನೇ ರ್‍ಯಾಂಕ್ ಪಡೆದಿದ್ದರು.
ಶಿಶಿರ್ ಬೆಂಗಳೂರಿನ ಆರ್.ವಿ. ಕೃಷ್ಣಕುಮಾರ್ ಮತ್ತು ಕೃಪಾರಾಣಿ ದಂಪತಿಯ ಪುತ್ರ. ಹಾಗೆಯೇ ಬೆಂಗಳೂರಿನ ವಿದ್ಯಾರಣ್ಯಪುರದ ನಾರಾಯಣ ಪಿ.ಯು. ಕಾಲೇಜಿನ ವಿದ್ಯಾರ್ಥಿ ವೆಚ್ಚ ಜ್ಞಾನ ಮಹೇಶ್ ಹತ್ತನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.ಕೆ.ಆರ್. ಶಿಶಿರ್ ಐಐಟಿ ಬಾಂಬೆ ವಲಯದ ವ್ಯಾಪ್ತಿಯಲ್ಲಿದ್ದಾರೆ.
ಐಐಟಿ ದಿಲ್ಲಿ ವಲಯದಲ್ಲಿ ತನಿಷ್ಕಾ ಕಾಬ್ರಾ ವಿದ್ಯಾರ್ಥಿನಿಯರ ವಿಭಾಗ ದಲ್ಲಿ 277 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಖೀಲ ಭಾರತ ಮಟ್ಟದಲ್ಲಿ ಇವರ ರ್‍ಯಾಂಕಿಂಗ್ 16 ಆಗಿದೆ.
ದಕ್ಷಿಣ ಭಾರತದವರಿಗೆ ಅಗ್ರ ಸ್ಥಾನ
ಐಐಟಿ ಬಾಂಬೆ ವಲಯಕ್ಕೆ ಸೇರಿದ ದಕ್ಷಿಣ ಭಾರತದ ವಿದ್ಯಾರ್ಥಿಗಳೇ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 1,55,538 ಮಂದಿ ಜೆಇಇ ಅಡ್ವಾನ್ಸ್ಡ್ ಬರೆದಿದ್ದರು. ಇವರಲ್ಲಿ 40,712 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ 6,516 ಮಂದಿ ವಿದ್ಯಾರ್ಥಿನಿಯರು ಇದ್ದಾರೆ ಎಂದು ಪರೀಕ್ಷೆ ನಡೆಸಿದ್ದ ಐಐಟಿ ಬಾಂಬೆಯ ನಿರ್ದೇಶಕ ಚೌಧರಿ ತಿಳಿಸಿದ್ದಾರೆ. ಪೊಲು ಲಕ್ಷ್ಮೀ ಸಾಯಿ ಲೋಹಿತ್ ರೆಡ್ಡಿ ಮತ್ತು ಥಾಮಸ್ ಬಿಜು ಚೀರಮ್‌ವೆಲಿಲ್ ದ್ವಿತೀಯ ಮತ್ತು ತೃತೀಯ ರ್‍ಯಾಂಕ್ ಪಡೆದಿದ್ದಾರೆ.
ಐಐಟಿ ಬಾಂಬೆ ಆದ್ಯತೆ
ರ್‍ಯಾಂಕ್ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಿಶಿರ್, ಪಾಲಕರು- ಉಪನ್ಯಾಸಕರಿಗೆ ಧನ್ಯ ವಾದ ಹೇಳಿದ್ದಾರೆ. ಮುಂದೆ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡ ಬೇಕು ಎಂದುಕೊಂಡಿದ್ದೇನೆ. ವ್ಯಾಸಂಗ ಮುಗಿದ ಬಳಿಕ ಸ್ಟಾರ್ಟ್‌ಅಪ್ ಆರಂಭಿಸಿ ದೇಶಕ್ಕೆ ಹೊಸ ಕೊಡುಗೆ ನೀಡಬೇಕೆಂದು ಕೊಂಡಿದ್ದೇನೆ ಎಂದು ಶಿಶಿರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.