ಪತ್ನಿ ಬಲಿದಾನದ ಇತಿಹಾಸ: ಅಣಜಿಯ ಶರಣೆ ಹೊನ್ನಮ್ಮ ದೊಡ್ಡ ಕೆರೆ ವೀಕ್ಷಣೆಗೆ ಪ್ರವಾಸಿಗರ ದಂಡು
ಅಕ್ಕ ಪಕ್ಕದ ಗ್ರಾಮಗಳ ಜನರು ಕೋಡಿ ಬಿದ್ದಿರುವ ಕೆರೆಗಳನ್ನು ವೀಕ್ಷಿಸುತ್ತಿದ್ದಾರೆ
Team Udayavani, Sep 12, 2022, 4:05 PM IST
ಮಾಯಕೊಂಡ: ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಹಾಗೂ ಅಣಜಿಯ ಶಿವ ಶರಣೆ ಹೊನ್ನಮ್ಮ ದೊಡ್ಡ ಕೆರೆ ಎಂದು ಖ್ಯಾತಿ ಪಡೆದಿರುವ ಅಣಜಿ ಕೆರೆ 40 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ದಾವಣಗೆರೆ, ಹರಿಹರ, ಜಗಳೂರು ತಾಲೂಕಿನ ಗ್ರಾಮಸ್ಥರು ಮೈದುಂಬಿ ಹರಿಯುತ್ತಿರುವ ಕೆರೆಯ ವೀಕ್ಷಣೆಗೆ ಧಾವಿಸಿ ಬರುತ್ತಿದ್ದಾರೆ.
ದಾವಣಗೆರೆ ತಾಲೂಕಿನ 56 ಕೆರೆಗಳು ತುಂಬಿರುವುದರಿಂದ ಕೋಡಿ ಬಿದ್ದಿರುವ ದೊಡ್ಡ ಕೆರೆಗಳು ಈಗ ಪ್ರವಾಸಿ ತಾಣವಾಗಿವೆ. ಪ್ರಸ್ತುತ ಮುಂಗಾರಿನ ಸತತ ಮಳೆಯ ಪರಿಣಾಮವಾಗಿ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಈಗ ಅಣಜಿ ಕೆರೆ ಕೋಡಿ ಬಿದ್ದಿದೆ. ಜಗಳೂರು ರಸ್ತೆಗೆ ಹೊಂದಿಕೊಂಡಿರುವ ಕೋಡಿಯಲ್ಲಿ ನೀರಿನ ಹರಿವು ನೋಡಲು ದಾವಣಗೆರೆ, ಹರಿಹರ, ಆನಗೋಡು, ಮಾಯಕೊಂಡ ಹೋಬಳಿಗಳ ಸುತ್ತಮುತ್ತಲಿನ ಜನರು ಕಾರು, ದ್ವಿಚಕ್ರ ವಾಹನ, ಬಸ್‌ಗಳಲ್ಲಿ ಆಗಮಿಸುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಾ ಕೆರೆಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.
ಅಣಜಿ ಕೆರೆಯ ಜೊತೆಗೆ ಕೊಡಗನೂರು, ರಾಂಪುರ, ಹುಚ್ಚವ್ವನಹಳ್ಳಿ, ಮಾಯಕೊಂಡ, ಹದಡಿ, ಆನಗೋಡು, ಕಂದಗಲ್ಲು, ಕಬ್ಬೂರು, ಮಳಲ್ಕೆರೆ, ಲೋಕಿಕೆರೆ, ಕೋಲ್ಕುಂಟೆ ಕೆರೆಗಳು ಸಹ ಕೋಡಿ ಬಿದ್ದಿವೆ. ಅಕ್ಕ ಪಕ್ಕದ ಗ್ರಾಮಗಳ ಜನರು ಕೋಡಿ ಬಿದ್ದಿರುವ ಕೆರೆಗಳನ್ನು ವೀಕ್ಷಿಸುತ್ತಿದ್ದಾರೆ. ಅಣಜಿ ಕೆರೆ ಭರ್ತಿಯಾಗಿರುವುದರಿಂದ ಬೇರೆ ಬೇರೆ ತಾಲೂಕುಗಳಿಂದ ಕಾರು, ವ್ಯಾನ್, ದ್ವಿಚಕ್ರ ವಾಹನಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ. ಕೆರೆಯ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅಣಜಿ ಗ್ರಾಮದ ಮುಖಂಡ ಭೀಮಪ್ಪ ಒತ್ತಾಯಿಸಿದ್ದಾರೆ.
ಕೆರೆಯ ಇತಿಹಾಸ
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ಕೆರೆಯನ್ನು ಅಣಜಿ ಗ್ರಾಮದ ಮಲ್ಲನಗೌಡರು ಸುಮಾರು 3-4 ವರ್ಷಗಳ ಕಾಲ 7 ಸಾವಿರ ಕಾರ್ಮಿಕರೊಂದಿಗೆ ನಿರ್ಮಿಸಿದರು. ಕೆರೆ ಕಟ್ಟಿ ಮೂರ್‍ನಾಲ್ಕು ವರ್ಷಗಳಾದರೂ ನೀರು ಬಾರದೆ ಇದ್ದಾಗ ಮಗ ವೀರನಗೌಡನ ಪತ್ನಿ ಹೊನ್ನಮ್ಮಳನ್ನು ದಿಗಂಬರ ಮುನಿಗಳ ಮಾತಿನಂತೆ ಕೆರೆಗೆ ಬಲಿ ಕೊಡಲಾಯಿತು. ನಂತರ ಮಳೆಯಾಗಿ ಕೆರೆಗೆ ನೀರು ಬಂದಿತು. ಕೆರೆಯ ಪಕ್ಕದಲ್ಲಿಯೇ ಶಿವಶರಣೆ ಹೊನ್ನಮ್ಮನ ದೇವಸ್ಥಾನವಿದೆ.
*ಶಶಿಧರ ಶೇಷಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.