2085ರವರೆಗೂ ಓದುವಂತಿಲ್ಲ ಆ ರಹಸ್ಯ ಪತ್ರ! ಬ್ರಿಟನ್ ರಾಣಿ 2ನೇ ಎಲಿಜಬೆತ್ ಬರೆದಿರುವ ಲೆಟರ್
1986ರಿಂದಲೂ ಸಿಡ್ನಿಯ ಕೊಠಡಿಯಲ್ಲಿ ಭದ್ರ
Team Udayavani, Sep 13, 2022, 7:40 AM IST
ಲಂಡನ್: ಅದು 1986ರಲ್ಲಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರು ಬರೆದಿರುವ ಪತ್ರ. ಆದರೆ, ಈವರೆಗೆ ಅದನ್ನು ಯಾರೂ ಓದಿಲ್ಲ. ಅದರೊಳಗೆ ಏನಿದೆ ಎಂಬುದೂ ಗೊತ್ತಿಲ್ಲ. ಈಗ ರಾಣಿ ಬದುಕಿಲ್ಲ. ಹಾಗಂತ ಆ ಪತ್ರವನ್ನು ಈಗಲಾದರೂ ಓದಬಹುದೇ?
ಇಲ್ಲ. 2085ರವರೆಗೂ ಆ ಪತ್ರದಲ್ಲಿರುವ ಅಂಶಗಳು ರಹಸ್ಯವಾಗಿಯೇ ಇರಬೇಕು ಎಂಬುದು ಸ್ವತಃ ರಾಣಿಯ ಆಜ್ಞೆಯಾಗಿದೆ. ಈ ಸೀಕ್ರೆಟ್ ಪತ್ರ ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವಿಕ್ಟೋರಿಯಾ ಕಟ್ಟಡದ ಕೋಣೆಯೊಂದರೊಳಗೆ ಭದ್ರವಾಗಿದೆ. ಅದನ್ನು ನಿರ್ಬಂಧಿ ಪ್ರದೇಶದಲ್ಲಿ ಗಾಜಿನ ಪೆಟ್ಟಿಗೆಯೊಂದರಲ್ಲಿ ರಕ್ಷಿಸಿಡಲಾಗಿದೆ.
ಅದರಲ್ಲೇನಿದೆ?
ಪತ್ರದಲ್ಲಿ ಏನನ್ನು ಬರೆಯಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ರಾಣಿಯು ಸಿಡ್ನಿಯ ಜನರಿಗೆ ಈ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಪತ್ರದ ಹೊರಗೆ ನೀಡಿರುವ ಟಿಪ್ಪಣಿಯಲ್ಲಿ ಸಿಡ್ನಿ ಮೇಯರ್ ಅನ್ನು ಉದ್ದೇಶಿಸಿ, “ನೀವೇ ಆಯ್ಕೆ ಮಾಡಿರುವ ದಿನಾಂಕದಂತೆ 2085ರಲ್ಲಿ ನೀವು ಈ ಪತ್ರವನ್ನು ತೆರೆಯಬೇಕು ಮತ್ತು ಸಿಡ್ನಿ ಜನರಿಗೆ ನಾನು ನೀಡಿರುವ ಸಂದೇಶವನ್ನು ರವಾನಿಸಬೇಕು’ ಎಂದು ಬರೆಯಲಾಗಿದೆ.
ನಿಸ್ವಾರ್ಥ ಸೇವೆಯ ಹಾದಿಯನ್ನು ಪಾಲಿಸುವೆ:
ಈ ನಡುವೆ, ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಲ್ಲಿನ ಸಂಸತ್ ಉದ್ದೇಶಿಸಿ ರಾಜ ಮೂರನೇ ಚಾರ್ಲ್ಸ್ ಸೋಮವಾರ ಮಾತನಾಡಿದ್ದಾರೆ. “ಸಾಂವಿಧಾನಿಕ ಆಡಳಿತದ ಅಮೂಲ್ಯ ತತ್ವಗಳನ್ನು ಎತ್ತಿಹಿಡಿಯುವಲ್ಲಿ ದಿ. ರಾಣಿ ಎರಡನೇ ಎಲಿಜಬತ್ ಅವರ ನಿಸ್ವಾರ್ಥ ಕರ್ತವ್ಯದ ಹಾದಿಯನ್ನು ಅನುಸರಿಸಲಾಗುವುದು,” ಎಂದು ವಾಗ್ಧಾನ ಮಾಡಿದ್ದಾರೆ.
ಜೆಟ್‌ನಲ್ಲಿ ಬರಬೇಡಿ, ಬಸ್ಸಲ್ಲೇ ಬನ್ನಿ!
ಸೆ.19ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೇಯಲ್ಲಿ ನಡೆಯಲಿರುವ ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ವಿಶ್ವನಾಯಕರಿಗೆ ಹಲವು ಷರತ್ತುಗಳು ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದೆ. “ಖಾಸಗಿ ವಿಮಾನಗಳಲ್ಲಿ ಬರುವಂತಿಲ್ಲ, ಬದಲಿಗೆ ವಾಣಿಜ್ಯ ವಿಮಾನಗಳ ಮೂಲಕ ಆಗಮಿಸಿ. ಯು.ಕೆ.ಗೆ ಪ್ರವೇಶಿಸಿದ ಬಳಿಕವೂ ಹೆಲಿಕಾಪ್ಟರ್ ಬಳಸುವಂತಿಲ್ಲ. ಅಂತ್ಯಕ್ರಿಯೆ ನಡೆಯುವಲ್ಲಿಗೆ ನಿಮ್ಮ ಸ್ವಂತ ಸರ್ಕಾರಿ ಕಾರುಗಳಲ್ಲಿ ಬರುವಂತಿಲ್ಲ. ಬದಲಿಗೆ ನಾವೇ ಕಳುಹಿಸಿಕೊಡುವ ಬಸ್ ಮೂಲಕವೇ ಆಗಮಿಸಬೇಕು’ ಎಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.