![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
Team Udayavani, Sep 13, 2022, 12:28 PM IST
ಹೈದರಾಬಾದ್: ದಕ್ಷಿಣ ಭಾರತದ ಸೂಪರ್ ಹಿಟ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಆರ್.ಆರ್.ಆರ್ ಬಳಿಕ ಯಾವ ಮತ್ತು ಯಾರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವುದು ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ಈಗ ಈ ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಅಪ್ಡೇಟ್ ಹೊರ ಬಿದ್ದಿದೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ರಾಜಮೌಳಿ ಸಿನಿಮಾ ಮಾಡಲಿದ್ದಾರೆ. ಮಹೇಶ್ ಬಾಬು ಅವರ 29ನೇ ಸಿನಿಮಾ ಅವರ ಸಿನಿ ಕೆರಿಯರ್ ನಲ್ಲಿ ಒಂದು ದೊಡ್ಡ ಹಿಟ್ ಆಗುವ ಸಾಧ್ಯತೆಯಿದೆ. ಈ ಚಿತ್ರ ಅನೌನ್ಸ್ ಆದ ಬಳಿಕ ಪ್ರೇಕ್ಷಕರಲ್ಲಿ ಯಾವಾಗ ಸೆಟ್ಟೇರುತ್ತದೆ, ಕಥಯೇನು ಹೀಗೆ ನಾನಾ ವಿಷಯದ ಬಗ್ಗೆ ಪ್ರಶ್ನೆಗಳು ಕಾಡುತ್ತಿತ್ತು. ಈಗ ನಿರ್ದೇಶಕ ರಾಜಮೌಳಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಪ್ ಡೇಟ್ ವೊಂದನ್ನು ಕೊಟ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ.
ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವ ರಾಜಮೌಳಿ, ಅಲ್ಲಿ ಕಾರ್ಯಕ್ರಮದಲ್ಲಿ ಮಾತಾನಾಡಿ, ಇದೊಂದು ವಿಶ್ವ ಪರ್ಯಟನೆವುಳ್ಳ ಸಾಹಸಮಯವಾದ ಸಿನಿಮಾ,ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್ ಬಾಂಡ್ ಅಥವಾ ಇಂಡಿಯಾನ ಜೋನ್ಸ್ ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್ ನಲ್ಲಿ ಎಲ್ಲರನ್ನೂ ರೋಮಾಂಚನಗೊಳಿಸಲಿದೆ. ಸದ್ಯ ಈ ಸಿನಿಮಾದ ಸ್ಕ್ರಿಪ್ಟ್ ನಡೆಯುತ್ತಿದೆ. ಇದಾದ ಬಳಿಕ ಎರಡು ತಿಂಗಳು ಮಹೇಶ್ ಬಾಬು ಅವರೊಂದಿಗೆ ವರ್ಕ್ ಶಾಪ್ ನಡೆಸಲಿದ್ದೇನೆ. 2023 ರ ಮಧ್ಯದಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀರಂಗರ ಒಡನಾಡಿ, ರಂಗಭೂಮಿ ಹಿರಿಯ ನಿರ್ದೇಶಕ ಎಚ್.ವಿ. ವೆಂಕಟಸುಬ್ಬಯ್ಯ ವಿಧಿವಶ
ಈ ಬಗ್ಗೆ ಪಿಂಕ್ ವಿಲ್ಲಾದೊಂದಿಗೆ ಮಾತಾನಾಡಿರುವ ರಾಜಮೌಳಿ ಅವರ ತಂದೆ, ಬರಹಗಾರ ಕೆ.ವಿ. ವಿಜಯೇಂದ್ರ ಪ್ರಸಾದ್, ಮಹೇಶ್ ಬಾಬು ಅವರೊಂದಿಗೆ ಸಿನಿಮಾ ಇದೊಂದು ಆಫ್ರಿಕನ್ ಕಾಡಿನ ಸಾಹಸಮಯದೊಂದಿಗೆ ನಡೆಯುವ ಚಿತ್ರ .ಇದರಲ್ಲಿ ಅದ್ಧೂರಿ ದೃಶ್ಯ, ಥ್ರಿಲ್, ಡ್ರಾಮಾ ಇರಲಿದೆ. ಸಿನಿಮಾದ ಇತರ ಕಲಾವಿದರು ಬಗ್ಗೆ ಆಯ್ಕೆ ಇನ್ನು ನಡೆದಿಲ್ಲ ಎಂದಿದ್ದಾರೆ.
ಈ ಸಿನಿಮಾ ಕೂಡ ಹಿಂದಿನ ಸಿನಿಮಾಗಳಂತೆ ದಟ್ಟ ಕಾಡಿನಲ್ಲಿ ನಡೆಯಲಿದೆ. ಇದಕ್ಕಾಗಿ ನುರಿತ ಕಂಪ್ಯೂಟರ್ ಗ್ರಾಫಿಕ್ಸ್ ಟೀಮ್ ಇರಲಿದೆ. ಈ ಸಿನಿಮಾ ರಾಜಾಮೌಳಿ ಅವರ ಹಿಂದಿನ ಎಲ್ಲಾ ಸಿನಿಮಾಗಿಂತ ಭಿನ್ನವಾಗಿರಲಿದೆ ಎಂದು ವರದಿ ತಿಳಿಸಿದೆ. ಸದ್ಯ ಸೂಪರ್ ಸ್ಟಾರ್ ಮಹೇಶ್ ಬಾಬು ತಿವಿಕ್ರಮ್ ಶ್ರೀನಿವಾಸ್ ಅವರ ಎಸ್ ಎಸ್ ಬಿ28 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
Karan Johar : ರಾಜಮೌಳಿ ಸಿನಿಮಾದಲ್ಲಿ ಲಾಜಿಕ್ ಇರಲ್ಲ – ನಿರ್ಮಾಪಕ ಕರಣ್ ಜೋಹರ್
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
You seem to have an Ad Blocker on.
To continue reading, please turn it off or whitelist Udayavani.