ಅಂಪಾರು: ಹೆಚ್ಚುತ್ತಿರುವ ರಾಜ್ಯ ಹೆದ್ದಾರಿ ಬದಿ ಬರೆ ಕುಸಿತ
ಶೀಘ್ರ ದುರಸ್ತಿಗೆ ಮುಂದಾಗದಿದ್ದರೆ ಇನ್ನಷ್ಟು ಅಪಾಯ ಖಚಿತ
Team Udayavani, Sep 13, 2022, 12:15 PM IST
ಅಂಪಾರು: ಕುಂದಾಪುರ- ಸಿದ್ದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಅಂಪಾರು ಸಮೀಪದ ಜಂಕ್ಷನ್‌ಗಿಂತ ತುಸು ದೂರದಲ್ಲಿ ಬರೆಯೊಂದು ಕಳೆದ ತಿಂಗಳ ಮಳೆಗೆ ಕುಸಿಯಲು ಆರಂಭವಾಗಿದ್ದು, ದಿನೇ ದಿನೇ ಕುಸಿಯುತ್ತಿದೆ. ಆದಷ್ಟು ಬೇಗ ಎಚ್ಚೆತ್ತುಕೊಂಡು ದುರಸ್ತಿಗೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿಗೆ ಆಪತ್ತು ಎದುರಾಗುವ ಸಾಧ್ಯತೆಗಳು ಇಲ್ಲಿದಿಲ್ಲ.
ಅಂಪಾರು ಜಂಕ್ಷನ್‌ನ ಅನತಿ ದೂರದಲ್ಲಿಯೇ ಸಿದ್ದಾಪುರ ಕಡೆಗೆ ಸಂಚರಿಸುವ ಮಾರ್ಗದ ಬದಿ ಬರೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಈ ಬರೆ ಕುಸಿಯಲು ಆರಂಭವಾಗಿದೆ.
ಈವರೆಗೆ ಕುಸಿತ ತಡೆಯಲು ಸರಿಯಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳದ ಕಾರಣ, ಮತ್ತಷ್ಟು ಕುಸಿಯುತ್ತಿದೆ.
ಪ್ರಮುಖ ಹೆದ್ದಾರಿ
ಕುಂದಾಪುರದಿಂದ ಮಲೆನಾಡಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಸಿದ್ದಾಪುರ, ಹೊಸಂಗಡಿ, ತೀರ್ಥಹಳ್ಳಿ, ಶಿವಮೊಗ್ಗ ಕಡೆಗೆ ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕುಂದಾಪುರ – ಸಿದ್ದಾಪುರ, ಕುಂದಾಪುರ – ತೀರ್ಥಹಳ್ಳಿ ಕಡೆಗೆ ದಿನಕ್ಕೆ ಹತ್ತಾರು ಬಸ್‌ಗಳು ಸಂಚರಿಸುತ್ತವೆ.
ಸೈಡ್‌ವಾಲ್‌ಗೂ ಅಪಾಯ
ಸುಮಾರು 50 ಮೀ. ದೂರದವರೆಗೆ ಉದ್ದಕ್ಕೂ ಬರೆ ಕುಸಿದಿದೆ. ಈ ಹಿಂದೆ ಜಂಕ್ಷನ್ ಕಾಮಗಾರಿ ವೇಳೆ ಬರೆ ಕುಸಿಯದಿರಲೆಂದು ನಿರ್ಮಿಸಿದ ಸೈಡ್‌ವಾಲ್ ಮೇಲೂ ಭಾರೀ ಪ್ರಮಾಣದಲ್ಲಿ ಬರೆಯ ಮಣ್ಣು ಕುಸಿದಿದೆ. ಅದಲ್ಲದೆ ಒಂದೆಡೆ ಸೈಡ್‌ವಾಲ್ ಕೂಡ ವಾಲಿಕೊಂಡಿದೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಸೈಡ್‌ವಾಲ್‌ಗೂ ಅಪಾಯ ಎದುರಾಗುವ ಸಾಧ್ಯತೆಗಳಿವೆ.
ದುರಸ್ತಿಗೆ ಮನವಿ: ನಾವು ಅಂಪಾರು ಗ್ರಾ.ಪಂ.ನಿಂದ ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಬರೆ ಕುಸಿಯುತ್ತಿರುವ ಬಗ್ಗೆ, ದುರಸ್ತಿ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಅದಲ್ಲದೆ ಹೆದ್ದಾರಿಗೆ ಕುಸಿಯುವ ಭೀತಿಯಲ್ಲಿದ್ದ ಒಂದೆರಡು ಅಪಾಯಕಾರಿ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದೆವು. – ಅಶೋಕ ಕೆ., ಅಂಪಾರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ
ಶೀಘ್ರ ದುರಸ್ತಿಗೆ ಕ್ರಮ: ಅಂಪಾರಿನ ಹೆದ್ದಾರಿ ಬದಿ ಬರೆ ಕುಸಿದಿರುವ ಬಗ್ಗೆ ಈಗಾಗಲೇ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಪ್ರಾಕೃತಿಕ ವಿಕೋಪದಡಿ ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು. – ದುರ್ಗಾದಾಸ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.