ಸ್ಟೈಲಿಶ್ ಆಗಿ ಕಾಣೋ ಆತುರದಲ್ಲಿ ಈ ತಪ್ಪುಗಳನ್ನು ಮಾಡಿರುತ್ತೀರಿ…!

ಹಿಂದಿನ ಫ್ಯಾಷನ್‌ ನಾಳೆ ಟ್ರೆಂಡ್‌ ಆಗಬಹುದು!

ಶ್ವೇತಾ.ಎಂ, Sep 13, 2022, 5:40 PM IST

thumb web exclusive fashion

ಗಂಟೆ, ದಿನ, ಋತು ಬದಲಾದಂತೆ ಫ್ಯಾಷನ್ ಕೂಡ ಬದಲಾಗ್ತಿರುತ್ತದೆ. ಈಗಿದ್ದ ಫ್ಯಾಷನ್ ನಾಳೆ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಯಾವಾಗ ಬೇಕಾದರೂ ಹಳೇ ಫ್ಯಾಷನ್, ಟ್ರೆಂಡ್ ಆಗಬಹುದು.  ಇಂದಿನ ದಿನಗಳಲ್ಲಿ  ಫ್ಯಾಷನ್ ಗೆ ತಕ್ಕಂತೆ ನಾವು ಬದಲಾಗಬೇಕು ನಿಜ. ಹಾಗಂತ ಎಲ್ಲ ಫ್ಯಾಷನ್ ಅನ್ನು ನಾವು ಟ್ರೈ ಮಾಡಲು ಹೋದರೆ ತೊಂದರೆ ಆಗಬಹುದು. ಇರುವ ಸುಂದರ ಲುಕ್ ಹಾಳಾಗಬಹುದು.  ಹಾಗಾಗಿ ಫ್ಯಾಷನ್ ಮಾಡುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ.

ಯುವಜನತೆಗೆ ಫ್ಯಾಷನ್ ಬಗ್ಗೆ ಆಸಕ್ತಿ ಹೆಚ್ಚು. ಅದರಲ್ಲೂ ಹುಡುಗಿಯರು ಹೊಸ ಹೊಸ ಫ್ಯಾಷನ್ ಮೇಲೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಹೊಸ ಫ್ಯಾಷನ್ ಬರ್ತಿದ್ದಂತೆ ಅದನ್ನು ಫಾಲೋ ಮಾಡುತ್ತಾರೆ. ಅನೇಕ ಬಾರಿ ಫ್ಯಾಷನ್ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಲ್ಪಸ್ವಲ್ಪ ತಿಳಿದುಕೊಂಡು ಪ್ರಯತ್ನಕ್ಕೆ ಕೈ ಹಾಕಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರ ಲುಕ್ ಸಂಪೂರ್ಣ ಹಾಳಾಗುತ್ತದೆ. ಫ್ಯಾಷನ್ ಫಾಲೋ ಮಾಡುತ್ತೇನೆ ಎನ್ನುವವರು ಅದಕ್ಕೆ ಸಂಬಂಧಿಸಿದ ಕೆಲ ಸಂಗತಿಯನ್ನು ಅವಶ್ಯಕವಾಗಿ ತಿಳಿದಿರಬೇಕು. ಆಗ ಹೊಸ ಟ್ರೆಂಡ್ ಗೆ ಹೊಂದಿಕೊಳ್ಳುವುದು ಸುಲಭ. ಇಂದು ಫ್ಯಾಷನ್ ಅನುಸರಿಸುವಾಗ ಯಾವ ತಪ್ಪು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಆ್ಯಕ್ಸಸರಿಸ್ (Accessories): ನಾವು ಧರಿಸುವ ಬಟ್ಟೆ (Clothes) ಮಾತ್ರವಲ್ಲ ಅದಕ್ಕೆ ತಕ್ಕಂತೆ ನಾವು ಧರಿಸುವ ಕಿವಿಯೋಲೆ, ಬಳೆ, ಚಪ್ಪಲಿ, ಸರ ಎಲ್ಲವೂ ಇಲ್ಲಿ ಮಹತ್ವ ಪಡೆಯುತ್ತದೆ. ಆದರೆ ಕೆಲವರು ಬಟ್ಟೆಗೆ ಮಾತ್ರ ಗಮನ ನೀಡುತ್ತಾರೆ. ಯಾವುದೋ ಡ್ರೆಸ್ ಗೆ ಇನ್ಯಾವುದೋ ಎಕ್ಸಸರಿಸ್ ಹಾಕಿದರೆ ಅದು ಲುಕ್ ಹಾಳು ಮಾಡುತ್ತದೆ. ಸಿಲ್ವರ್ ಡ್ರೆಸ್ ಗೆ ಗೋಲ್ಡ್ ಕಲರ್ ಆ್ಯಕ್ಸಸರಿಸ್ ಹಾಕಿದ್ರೆ ನಿಮ್ಮ ಸೌಂದರ್ಯ ಹಾಳಾದಂತೆ. ಹಾಗಾಗಿ ಯಾವ ಡ್ರೆಸ್ ಗೆ ಯಾವ ಆ್ಯಕ್ಸಸರಿಸ್ ಬಳಸಬೇಕು ಎಂಬುದನ್ನು ತಿಳಿದಿರಿ. ಇದೇ ಎಂಬ ಕಾರಣಕ್ಕೆ ಯಾವ್ದ್ಯಾವ್ದೋ ಹಾಕಬೇಡಿ.

ಬಣ್ಣ: ಕೆಲವೊಮ್ಮೆ ಒಂದೊಂದು ಕಲರ್ (Color) ಟ್ರೆಂಡ್ ಆಗುತ್ತಿರುತ್ತದೆ. ಎಲ್ಲರೂ ಧರಿಸ್ತಾರೆ ಎನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲ ಅಥವಾ ನಿಮಗೆ ಹೊಂದಿಕೆಯಾಗ್ತಿಲ್ಲವೆಂದಾದರೆ ಆ ಬಣ್ಣದ ಬಟ್ಟೆ ಧರಿಸಬೇಕಾಗಿಲ್ಲ. ನೀವು ಧರಿಸುವ ಬಟ್ಟೆಯಲ್ಲಿ ನೀವೆಷ್ಟು ಆರಾಮವಾಗಿರುತ್ತೀರಿ ಎನ್ನುವುದು ಮುಖ್ಯ. ಹಾಗೆ ಇದೇ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ.

ಬ್ಲೌಸ್ (Blouse) : ಮಾಡೆಲ್ ಗಳು ಚೆಂದದ, ಸ್ಲಿವ್ ಲೆಸ್ ಬ್ಲೌಸ್ ಧರಿಸುತ್ತಾರೆ ಅಂತಾ ನೀವು ಆ ಪ್ರಯತ್ನಕ್ಕೆ ಹೋಗಬೇಡಿ. ನಿಮಗೆ ಅಭ್ಯಾಸವಿಲ್ಲವೆಂದರೆ ಈ ಬ್ಲೌಸ್  ನಿಮ್ಮ ಲುಕ್ ಹಾಳು ಮಾಡುತ್ತದೆ.

ಬಟ್ಟೆ (Clothes) : ನಾವು ಧರಿಸುವ ಉಡುಪು ವಿಚಾರದಲ್ಲೂ ಇದು ಸತ್ಯ. ಸಾರ್ವಜನಿಕ ಸ್ಥಳದಲ್ಲಿ ಮುಜುಗರ ತರಿಸುವ ಅಥವಾ ನಿಮಗೆ ಅಭ್ಯಾಸವಿಲ್ಲದ ಡ್ರೆಸ್ ಧರಿಸುವ ಪ್ರಯತ್ನ ಬೇಡ. ಕೆಲವರಿಗೆ ಶಾರ್ಟ್ ಸ್ಕರ್ಟ್ ಧರಿಸಿ ಅಭ್ಯಾಸವಿರುವುದಿಲ್ಲ. ಫ್ಯಾಷನ್ ಹೆಸರಿನಲ್ಲಿ ಈ ಡ್ರೆಸ್ ಧರಿಸಿ ಮುಜುಗರಕ್ಕೊಳಗಾಗುತ್ತಾರೆ. ಆಗ ನಮ್ಮ ಗಮನ ಪೂರ್ತಿ ಡ್ರೆಸ್ ಮೇಲಿರುತ್ತದೆ. ಆದ್ದರಿಂದ ಫ್ಯಾಷನ್‌ ಹೆಸರಿನಲ್ಲಿ ನಮಗೆ ಸರಿಹೊಂದದ ರೀತಿಯಲ್ಲಿ ತಯಾರಾಗಿ ಮುಜುಗರಕ್ಕೊಳಗಾಗುವುದ್ದಕ್ಕಿಂತ, ನಮಗೆ ಸರಿಹೊಂದುವ ಬಟ್ಟೆ, ಆಭರಣ ಧರಿಸುವುದು ಒಳಿತು.

-ಶ್ವೇತಾ ಮುಂಡ್ರುಪ್ಪಾಡಿ.  

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.