ರಸ್ತೆ ಗುಂಡಿ ಮುಚ್ಚಿಸಿದ ಹೆದ್ದಾರಿ ಗಸ್ತು ಸಿಬ್ಬಂದಿ
Team Udayavani, Sep 13, 2022, 3:03 PM IST
ಶಹಾಬಾದ: ರಾಷ್ಟ್ರೀಯ ಹೆದ್ದಾರಿ 150 ದೇವನತೆಗನೂರ ಸಮೀಪದಲ್ಲಿ ರಸ್ತೆಯ ಮೇಲೆ ದೊಡ್ಡದಾದ ಗುಂಡಿಯಲ್ಲಿ ಸಾಗುತ್ತಿರುವ ವಾಹನಗಳ ಅಪಘಾತಗಳಾಗುವ ಸಾಧ್ಯತೆ ಇರುವುದನ್ನು ಕಂಡು ಶಹಾಬಾದ ಉಪವಿಭಾಗದ ಹೈವೆ ಪೆಟ್ರೋಲಿಂಗ್ ಎಎಸ್‌ಐ ಅಶೋಕ ಕಟ್ಟಿ ಹಾಗೂ ಸಿಬ್ಬಂದಿ ವಿಠ್ಠಲ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಪೆಟ್ರೋಲಿಂಗ್ ಎಎಸ್‌ಐ ಅಶೋಕ ಕಟ್ಟಿ ಹಾಗೂಸಿಬ್ಬಂದಿ ವಿಠ್ಠಲ್ ಹೋಗುವಾಗ ಲಾರಿ, ಕಾರು ಹಾಗೂ ಬೈಕ್ ಸವಾರರಿಗೆ ರಸ್ತೆಯಲ್ಲಿ ನೀರು ನಿಂತು ಕೊಂಡಿರಬಹುದೆಂದು ಹಾಗೇ ವಾಹನ ಚಲಾಯಿಸಿದ್ದರಿಂದ ಗುಂಡಿಯಲ್ಲಿ ಟೈರ್ ಸಿಗಿಬಿದ್ದು ಆಯಾ ತಪ್ಪಿ ಅಪಘಾತವಾಗುವುದು ಅದೃಷ್ಟವಶ ತಪ್ಪಿದನ್ನು ಕಂಡಿದ್ದಾರೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಗುರುರಾಜ ಜೋಶಿ ಅವರನ್ನು ಸಂಪರ್ಕಿಸಿದ್ದಾರೆ. ದೊಡ್ಡದಾದ ಗುಂಡಿ ಬಿದ್ದಿದೆ. ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಗುಂಡಿ ಕಾಣದೇ ಅಪಘಾತಕ್ಕೊಳಗಾಗುತ್ತಾರೆ. ಕೂಡಲೇ ದುರಸ್ತಿಗೊಳಿಸಿ ಎಂದು ಮನವಿ ಮಾಡಿದ್ದಾರೆ.
ತಕ್ಷಣವೇ ಸ್ಪಂದಿಸಿದ ಎಇಇ ಗುರುರಾಜ ಜೋಶಿ ಅರ್ಧ ಗಂಟೆಯಲ್ಲಿಯೇ ಸಿಬ್ಬಂದಿಗೆ ಕಳುಹಿಸಿ ದುರಸ್ತಿಗೊಳಿಸಿ ಗುಂಡಿಯನ್ನು ಮುಚ್ಚುವಂತ ಕೆಲಸ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಅಪಘಾತಗಳನ್ನು ತಡೆಗಟ್ಟುವಲ್ಲಿ ಹೈವೆ ಪೆಟ್ರೋಲಿಂಗ್‌ನ ಸಿಬ್ಬಂದಿ ಉತ್ತಮ ಕೆಲಸ ಮಾಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.