ಸ್ಕೂಟರ್‌ಗಳಿಗೂ ಬರಲಿದೆ ಏರ್‌ಬ್ಯಾಗ್! ಭಾರತದಲ್ಲಿ ಏರ್‌ಬ್ಯಾಗ್ ಪೇಟೆಂಟ್ ಪಡೆದ ಹೋಂಡಾ
Team Udayavani, Sep 14, 2022, 7:35 AM IST
ನವದೆಹಲಿ: ದೇಶದಲ್ಲಿ ಕಾರುಗಳಿಗೆ ಮಾತ್ರವಲ್ಲ, ದ್ವಿಚಕ್ರ ವಾಹನಗಳಲ್ಲೂ ಇನ್ನು ಏರ್‌ಬ್ಯಾಗ್ ಇರಲಿದೆ. ಭಾರತದಲ್ಲಿ ಸ್ಕೂಟರ್‌ಗಳಿಗೆ ಏರ್‌ಬ್ಯಾಗ್ ವ್ಯವಸ್ಥೆಯ ಪೇಟೆಂಟ್ ಅನ್ನು ಹೋಂಡಾ ಕಂಪನಿ ಪಡೆದುಕೊಂಡಿದೆ.
ಇತ್ತೀಚಿಗೆ ಸೀಟ್ ಬೆಲ್ಟ್ ಧರಿಸದ ಕಾರಣದಿಂದ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ ನಿಧನರಾದ ನಂತರ ದೇಶದಲ್ಲಿ ಏರ್‌ಬ್ಯಾಗ್, ಸೀಟ್ ಬೆಲ್ಟ್ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಅಲ್ಲದೇ ಕೇಂದ್ರ ಸರ್ಕಾರ ಕಾರಿನಲ್ಲಿ ಸಂಚರಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವ ನಿಯಮ ಜಾರಿಗೆ ಮುಂದಾಗಿದೆ.
ದೇಶದಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಸಂಖ್ಯೆ ಹೆಚ್ಚಿದೆ. ಅಲ್ಲದೇ ದ್ವಿಚಕ್ರ ವಾಹನಗಳಲ್ಲಿ ಸುರಕ್ಷತೆಯ ಅಂಶಗಳು ತೀರಾ ಕಡಿಮೆ. ಹಾಗಾಗಿ ಸ್ಕೂಟರ್‌ಗಳಿಗೆ ಏರ್‌ಬ್ಯಾಗ್ ಅಳವಡಿಸಲು ಹೋಂಡಾ ಕಂಪನಿ ಮುಂದಾಗಿದೆ.
ಕಂಪನಿಯ ಪ್ರಾಥಮಿಕ ವಿನ್ಯಾಸದ ಪ್ರಕಾರ, ಹ್ಯಾಂಡಲ್ ಬಾರ್ ಇರುವ ಕಡೆಯಲ್ಲಿ ಏರ್‌ಬ್ಯಾಗ್ ಅಳವಡಿಸಲಾಗುತ್ತದೆ. ಏರ್‌ಬ್ಯಾಗ್ ಪಕ್ಕದಲ್ಲಿ ಇನ್‌ಫ್ಲೇಟರ್ ಅಳವಡಿಸಲಾಗುತ್ತದೆ. ಜತೆಗೆ ಅಪಘಾತಗಳನ್ನು ಪತ್ತೆಹಚ್ಚಲು ಹಾಗೂ ಏರ್‌ಬ್ಯಾಗ್ ತೆರೆಯುವಂತೆ ಸಂದೇಶ ಕಳುಹಿಸಲು ಸ್ಕೂಟರ್‌ನಲ್ಲಿ ವೇಗವರ್ಧಕಗಳನ್ನು ಬಳಸಲಾಗುತ್ತದೆ. ಈ ವ್ಯವಸ್ಥೆಯ ಅಭಿವೃದ್ಧಿ ಕಾರ್ಯ ಅಂತಿಮ ಘಟ್ಟದಲ್ಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.