ಸ್ಮೃತಿ ಮಂಧನಾ, ಸ್ನೇಹ್‌ ರಾಣಾ ಪ್ರತಾಪ; ಭಾರತಕ್ಕೆ 8 ವಿಕೆಟ್‌ ಜಯ; ಸರಣಿ ಸಮಬಲ


Team Udayavani, Sep 14, 2022, 11:55 PM IST

ಸ್ಮೃತಿ ಮಂಧನಾ, ಸ್ನೇಹ್‌ ರಾಣಾ ಪ್ರತಾಪ; ಭಾರತಕ್ಕೆ 8 ವಿಕೆಟ್‌ ಜಯ; ಸರಣಿ ಸಮಬಲ

ಡರ್ಬಿ: ಸ್ಮೃತಿ ಮಂಧನಾ ಮತ್ತು ಸ್ನೇಹ್‌ ರಾಣಾ ಸಾಹಸದಿಂದ ದ್ವಿತೀಯ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ತಿರುಗೇಟು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ಡರ್ಬಿಯಲ್ಲಿ ನಡೆದ ಮುಖಾಮುಖಿಯಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುವ ನಿರ್ಧಾರದಲ್ಲಿ ಇಂಗ್ಲೆಂಡ್‌ ಅಷ್ಟೇನೂ ಯಶಸ್ಸು ಕಾಣಲಿಲ್ಲ. 6 ವಿಕೆಟಿಗೆ 142 ರನ್‌ ಗಳಿಸಿ ಸವಾಲೊಡ್ಡಿತು. ಭಾರತ 16.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 146 ರನ್‌ ಬಾರಿಸಿ ಗೆದ್ದು ಬಂದಿತು.

ಮೊದಲ ಪಂದ್ಯದಲ್ಲಿ ಇದೇ ರೀತಿ ಚೇಸಿಂಗ್‌ ನಡೆಸಿದ ಇಂಗ್ಲೆಂಡ್‌ 9 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತ್ತು. ಸರಣಿ ನಿರ್ಣಾಯಕ ಪಂದ್ಯ ಗುರುವಾರ ಬ್ರಿಸ್ಟಲ್‌ನಲ್ಲಿ ನಡೆಯಲಿದೆ.

ಮಂಧನಾ ಮಿಂಚಿನ ಆಟ
ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮಿಂಚಿನ ಬ್ಯಾಟಿಂಗ್‌ ಮೂಲಕ ಅಜೇಯ 79 ರನ್‌ ಬಾರಿಸಿದರು. 53 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಒಳಗೊಂಡಿತ್ತು. ಶಫಾಲಿ ವರ್ಮ ಕೂಡ ಬಿರುಸಿನ ಆಟಕ್ಕಿಳಿದರು. 17 ಎಸೆತಗಳಿಂದ 20 ರನ್‌ ಹೊಡೆದರು (4 ಬೌಂಡರಿ). ಭರ್ತಿ 6 ಓವರ್‌ ನಿಭಾಯಿಸಿದ ಇವರು 55 ರನ್‌ ಒಟ್ಟುಗೂಡಿಸಿ ಭದ್ರ ಬುನಾದಿ ನಿರ್ಮಿಸಿದರು.

ಡಿ. ಹೇಮಲತಾ (9) ಬೇಗನೇ ಔಟಾದರೂ ತಂಡಕ್ಕೆ ಯಾವುದೇ ಆತಂಕ ಎದುರಾಗಲಿಲ್ಲ. ಮಂಧನಾ ಮತ್ತು ಕೌರ್‌ ಅಜೇಯ 69 ರನ್‌ ಜತೆಯಾಟದ ಮೂಲಕ ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೌರ್‌ ಕೊಡುಗೆ ಅಜೇಯ 29 ರನ್‌ (22 ಎಸೆತ, 4 ಬೌಂಡರಿ).

ಫ್ರೆಯಾ ಕೆಂಪ್‌ ಅಬ್ಬರ
ಭಾರತದ ನಿಖರ ಬೌಲಿಂಗ್‌ ದಾಳಿಗೆ ಸಿಲುಕಿದ ಇಂಗ್ಲೆಂಡ್‌ಗೆ ಬಿರುಸಿನ ಬ್ಯಾಟಿಂಗ್‌ ಸಾಧ್ಯವಾಗಲಿಲ್ಲ. 3 ಓವರ್‌ಗಳಲ್ಲಿ 16ಕ್ಕೆ 3 ವಿಕೆಟ್‌, 10 ಓವರ್‌ ಒಳಗೆ 54 ರನ್ನಿಗೆ 5 ವಿಕೆಟ್‌ ಉದುರಿ ಹೋಗಿತ್ತು. ಆರಂಭದಲ್ಲಿ ದೀಪ್ತಿ ಶರ್ಮ, ರೇಣುಕಾ ಸಿಂಗ್‌ ಘಾತಕವಾಗಿ ಪರಿಣಮಿಸಿದರು. ಬಳಿಕ ಸ್ನೇಹ್‌ ರಾಣಾ ಬೌಲಿಂಗ್‌ ಆಕ್ರಮಣ ತೀವ್ರಗೊಂಡಿತು. ಫೀಲ್ಡಿಂಗ್‌ ಕೂಡ ಉತ್ತಮ ಮಟ್ಟದಲ್ಲಿತ್ತು.

ಇನ್ನೇನು ಇಂಗ್ಲೆಂಡ್‌ ಸಣ್ಣ ಮೊತ್ತಕ್ಕೆ ಕುಸಿಯುತ್ತದೆ ಎನ್ನುವಾಗ 17 ವರ್ಷದ ಕಿರಿಯ ಆಟಗಾರ್ತಿ ಫ್ರೆàಯಾ ಕೆಂಪ್‌ ಸಿಡಿದು ನಿಂತರು. 7ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು 37 ಎಸೆತಗಳಿಂದ 3 ಬೌಂಡರಿ, 3 ಸಿಕ್ಸರ್‌ ನೆರವಿನಿಂದ ಅಜೇಯ 51 ರನ್‌ ಬಾರಿಸಿದರು. ಈ ಪಂದ್ಯದಲ್ಲಿ ಕೆಂಪ್‌ ಹೊರತುಪಡಿಸಿ ಬೇರೆ ಯಾರಿಂದಲೂ ಸಿಕ್ಸರ್‌ ಬಾರಿಸಲು ಸಾಧ್ಯವಾಗಲಿಲ್ಲ.

ಮೇಯಾ ಬೌಷೀರ್‌-ಫ್ರೆಯಾ ಕೆಂಪ್‌ 6ನೇ ವಿಕೆಟಿಗೆ 65 ರನ್‌ ಪೇರಿಸಿ ಮೊತ್ತವನ್ನು 140ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-6 ವಿಕೆಟಿಗೆ 142 (ಫ್ರೆಯಾ ಕೆಂಪ್‌ ಔಟಾಗದೆ 51, ಮೇಯಾ ಬೌಷಿರ್‌ 34, ಆ್ಯಮಿ ಜೋನ್ಸ್‌ 17, ಸ್ನೇಹ್‌ ರಾಣಾ 24ಕ್ಕೆ 3, ದೀಪ್ತಿ ಶರ್ಮ 24ಕ್ಕೆ 1, ರೇಣುಕಾ ಸಿಂಗ್‌ 30ಕ್ಕೆ 1). ಭಾರತ-16.4 ಓವರ್‌ಗಳಲ್ಲಿ 2 ವಿಕೆಟಿಗೆ 146 (ಸ್ಮತಿ ಮಂಧನಾ ಔಟಾಗದೆ 79, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 29, ಶಫಾಲಿ ವರ್ಮ 20, ಸೋಫಿ 22ಕ್ಕೆ 1, ಫ್ರೆಯಾ ಡೇವಿಸ್‌ 30ಕ್ಕೆ 1).

ಪಂದ್ಯಶ್ರೇಷ್ಠ: ಸ್ಮತಿ ಮಂಧನಾ.

ಟಾಪ್ ನ್ಯೂಸ್

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.