15 ರೂ. ಪಾವತಿಸಲು ಹೇಳಿದ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿದ ಎನ್‌ಸಿಸಿ ಕೆಡೆಟ್: ದೃಶ್ಯ ಸೆರೆ
Team Udayavani, Sep 15, 2022, 4:58 PM IST
ಮಧ್ಯಪ್ರದೇಶ: ಪ್ರಯಾಣ ದರದ ಬಗ್ಗೆ ಕಂಡಕ್ಟರ್ ಹಾಗೂ ಎನ್‌ಸಿಸಿ ಕೆಡೆಟ್ ಜತೆ ವಾದ ಪ್ರತಿವಾದ ನಡೆದು ಸಿಟಿ ಬಸ್ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಸೆಮಿಕಂಡಕ್ಟರ್ ಹಾಗೂ ಎಫ್‍ಎಂಸಿಜಿಗಳಿಗೆ ಪಿಎಲ್‍ಐ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ: ಸಿಎಂ
ಎನ್‌ಸಿಸಿ ಕೆಡೆಟ್ ಆಗಿರುವ ಪ್ರಯಾಣಿಕ 10 ರೂ. ಬಸ್ ದರ ಪಾವತಿಸಿದ್ದಾನೆ. ಈ ವೇಳೆ ಆ ವ್ಯಕ್ತಿ ತೆರಳುತ್ತಿರುವ ಸ್ಥಳದ ದರ 15 ರೂ. ಎಂದು ಕಂಡಕ್ಟರ್ ಹೇಳಿದ್ದು, ಪ್ರಯಾಣಿಕ ಕೊಡಲು ನಿರಾಕರಿಸಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಬಸ್ಸಿನಿಂದ ದೂಡಿದ್ದಾನೆ. ಪ್ರಯಾಣಿಕ ಕೋಪಗೊಂಡು ಮನಬಂದಂತೆ ಥಳಿಸಿದ ಸಂಪೂರ್ಣ ದೃಶ್ಯ ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ನಗರದ ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
NCC cadet thrashed city bus conductor in Bhopal, an argument broke out between the bus conductor and the NCC cadet over the difference of 5 rs. bus fare @ndtv @ndtvindia pic.twitter.com/hnA8B08sBw
— Anurag Dwary (@Anurag_Dwary) September 14, 2022
25 ಸೆಕೆಂಡುಗಳ ವೀಡಿಯೊದಲ್ಲಿ ಬಸ್ ಕಂಡಕ್ಟರ್ ಮತ್ತು ಎನ್‌ಸಿಸಿ ಕೆಡೆಟ್ ಅವರ ಪ್ರಯಾಣ ದರದ ಬಗ್ಗೆ ವಾಗ್ವಾದವಿದೆ. ಯುವಕ ಪ್ರಯಾಣಿಸುವ ಮಾರ್ಗದ ದರ 10 ರೂ. ಪಾವತಿಸಿದ್ದಾನೆ. ಈ ವೇಳೆ ಕಂಡಕ್ಟರ್‌ಗೆ ₹ 15 ಪಾವತಿಸುವಂತೆ ಒತ್ತಾಯಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.