ಅಲಯನ್ಸ್ ಕಾಲೇಜಿನ ಗದ್ದುಗೆಗೆ ಗುದ್ದಾಟ
ಶಾಂತಿ ಕದಡುವ ಕೆಲಸ ಪದೇ ಪದೆ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
Team Udayavani, Sep 16, 2022, 4:45 PM IST
ಆನೇಕಲ್: ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ ಗದ್ದುಗೆಗಾಗಿ ಕೆಲ ವರ್ಷಗಳಿಂದ ಗಲಾಟೆ ನಡೆಯುತ್ತಲೇ ಇದೆ. ಅದೇ ರೀತಿ ಈ ಬಾರಿಯು ಸಹ ಅಲಯನ್ಸ್ ಯೂನಿವರ್ಸಿಟಿ ಯಲ್ಲಿ ಗಲಾಟೆ ನಡೆದಿದ್ದು, ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅವರ ತಾಯಿ ಕೂಡ ಈ ಗಲಾಟೆಯಲ್ಲಿ ಭಾಗಿಯಾಗಿರುವುದು ಹಲವು ಪ್ರಶ್ನೆಗೆ ಎಡೆ ಮಾಡಿಕೊಟ್ಟಿದೆ.
ಗನ್ ಹಿಡಿದು ಐವತ್ತು ಮಂದಿಯ ಜೊತೆ ಕಾಲೇಜಿಗೆ ಬಂದು ದಾಂಧಲೆ ನಡೆಸಿದ್ದಾರೆ ಎನ್ನುವ ಪ್ರಕರಣದಡಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಹಾಗೂ ಅಲಯನ್ಸ್ ಮಾಜಿ ಕುಲಪತಿ ಮಧುಕರ್ ಅಂಗೂರ್ ಮೇಲೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನೇಕಲ್ ತಾಲೂಕಿನ ಅಲಯನ್ಸ್ ಯೂನಿವರ್ಸಿಟಿಯ ಸಹೋದರರಿಬ್ಬರ ಗದ್ದುಗೆಯ ಗುದ್ದಾಟ ಮತ್ತೂಮ್ಮೆ ಬೀದಿಗೆ ಬಂದಿದ್ದು, ಇದಕ್ಕೆ ಸ್ಯಾಂಡಲ್ ಬಹುಬೇಡಿಕೆಯ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಭಾಗಿಯಾಗಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ.
ಇದೀಗ ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಆನೇಕಲ್ ಅಲಯನ್ಸ್ ಕಾಲೇಜಿಗೆ ವಿರೋಧಿ ಬಣದ ಸಹೋದರ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ಕೋರ್ಟ್ ಆದೇಶಸಿದೆ ಎಂದು ಯೂನಿವರ್ಸಿಟಿಗೆ 50 ಮಂದಿ ಬೌನ್ಸರ್‌ಗಳೊಂದಿಗೆ ಕಳೆದ ಸೆ.10ರಂದು ಗನ್ ಹಾಗೂ ಮಾರ ಕಾಸ್ತ್ರ ಹಿಡಿದು ಕಾಲೇಜು ಒಳ ನುಗ್ಗಿ ಗಲಾಟೆ ನಡೆಸಿದ್ದಾರೆ.ಇದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿ ಪೋಲೀಸರ ಮಧ್ಯಸ್ಥಿಕೆಯಲ್ಲಿ ಮಧುಕರ್ ಅಂಗೂರ್ ಪಡೆಯನ್ನು ಹೊರಗಟ್ಟಿದ್ದಾರೆ.
ತೆಲುಗು-ಕನ್ನಡ ಚಲನ ಚಿತ್ರದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ, ಮಧುಕರ್ ಅಂಗೂರ್ ಜೊತೆ ಅಲಯನ್ಸ್ ಯೂನಿವರ್ಸಿಟಿಗೆ ನುಗ್ಗಿದ್ದಲ್ಲದೆ ಮುಂದಿನ ಚಾನ್ಸಲರ್ ತಾನೇ ಅಂತ ಸಿಬ್ಬಂದಿಗೆ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾರೆ. ಮಧುಕರ್ ಅಂಗೂರ್ ಯೂನಿವರ್ಸಿಟಿ ಬಿಟ್ಟು ಹೊರ ಹೊರಟರೂ ಸಹ ಗಂಟೆಗಳ ಕಾಲ ಒಳಗೆ ಇದ್ದು ನಾನೇ ಚಾನ್ಸಲರ್ ಎಂದು ಪಟ್ಟು ಹಿಡಿದು ಕುಳಿತರು ಬಳಿಕ ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿ ಅವರನ್ನ ಕಾಲೇಜಿನಿಂದ ಹೊರ ಕಳುಹಿಸಿದರು.
ಹಲವು ಅನುಮಾನಗಳಿಗೆ ಎಡೆ:ಅಲೆಯನ್ಸ್ ಎನ್ನುವುದು ಇತ್ತೀಚಿಗೆ ವಿವಾದಗಳ ಕೇಂದ್ರವಾಗಿ ಮಾರ್ಪಾಡಾಗಿದ್ದು, ಮಧುಕರ್ ಅವರ ಜೊತೆ ಸ್ವರ್ಣ ಲತಾ ಭೇಟಿ ನೀಡಿದ್ದು ಯಾಕೆ? ಅದರಲ್ಲೂ ನಾನೇ ಮುಂದಿನ ಚಾನ್ಸಲರ್ ಅಂತ ಹೇಳಿದ್ದು ಯಾವ ಕಾರಣಕ್ಕೆ ಎನ್ನುವ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ.
ಜೊತೆಗೆ ರಾಜ್ಯ ನಾಯಕರೊಬ್ಬರು ನಾನು ನಿಮ್ಮ ಜೊತೆಗಿದ್ದೇನೆ ಅಲೆಯನ್ಸ್ ಹೋಗಿ ಎಂದು ಕಳುಸಿಕೊಟ್ಟ ಬಳಿಕ ಪ್ರಭಾವಿ ಸಚಿವರೊಬ್ಬರು ಒತ್ತಡ ಹೇರಿ ಮಧುಕರ್ ಹಾಗೂ ಸ್ವರ್ಣಲತಾ ಬಂಧನಕ್ಕೆ ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಇದೇ ಸಂದರ್ಭದಲ್ಲಿ ಶೈಲಾ ಛಬ್ಬಿ ಸುಧೀರ್ ಜೊತೆಗೆ ಸಚಿವ ಶ್ರೀರಾಮುಲು ಇರುವ ಫೋಟೋ ಕೂಡ ಇದೇ ಸಮಯದಲ್ಲಿ ಹೊರ ಬಿದ್ದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ: ಅಲಯನ್ಸ್ ಯೂನಿವರ್ಸಿಟಿ ಒಂದಿಲ್ಲೊಂದು ಗಲಾಟೆ, ಗದ್ದಲಕ್ಕೆ ಪ್ರತಿ ಬಾರಿಯೂ ಸುದ್ದಿಯಲ್ಲಿದೆ. ಯೂನಿವರ್ಸಿಟಿಯ ಪಾರುಪತ್ಯಕ್ಕಾಗಿ ಹಲವು ಬಾರಿ ಗಲಾಟೆಗಳು ನಡೆದಿದ್ದು, ಈ ಬಾರಿ ಸ್ಯಾಂಡಲ್‌ವುಡ್ ನಟಿ ತಾಯಿಯು ಸಹ ಭಾಗಿಯಾಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೂ ಅಲಯನ್ಸ್ ಗಲಾಟೆ ಮತ್ತಷ್ಟು ಗಂಭೀರವಾದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇವೇ ಎಂದು ಹೇಳಲಾಗುತ್ತಿದ್ದು, ಪೊಲೀಸರು ಇವೆಲ್ಲಕ್ಕೂ ಕಡಿವಾಣ ಹಾಕಬೇಕಿದೆ. ಆನೇಕಲ್ ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ ಪದೇ ಪದೆ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಗೊಂದಲದ ವಾತಾವರಣ ಸೃಷ್ಟಿಸಿದ ವಿಚಾರವಾಗಿ ಅಲಯನ್ಸ್ ಕಾಲೇಜಿಗೆ ಆನೇಕಲ್ ಪೊಲೀಸರು ಭೇಟಿ ಕೊಟ್ಟು ಸ್ಥಳ ಮಹಾಜರು ನಡೆಸಿದ್ದೇವೆ. ಪ್ರಕರಣ ದಾಖಲಿಸಿ, ಈಗಾಗಲೇ ಮಧುಕರ್ ಅಂಗೂರ್ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.
●ಮಲ್ಲಿಕಾರ್ಜುನ ಬಾಲದಂಡೆ,
ಬೆಂಗಳೂರು ಗ್ರಾಮಾಂತರ ಎಸ್ಪಿ
ಗಲಾಟೆ: 15 ಮಂದಿ ವಿರುದ್ಧ ಪ್ರಕರಣ ದಾಖಲು
ದಶಕಗಳ ಇತಿಹಾಸ ಇರುವ ಅಲಯನ್ಸ್ ಯೂನಿವರ್ಸಿಟಿ ಗದ್ದುಗೆಗಾಗಿ ಅಂಗೂರ್ ಸಹೋದರರ ಗುದ್ದಾಟ ನಡೆಯುತ್ತಿದೆ. ಹಲವು ಕೊಲೆಗಳೊಂದಿಗೆ ರಕ್ತಸಿಕ್ತ ಇತಿಹಾಸವನ್ನೂ ಹೊಂದಿರುವ ಯೂನಿವರ್ಸಿಟಿ ವಿಚಾರವಾಗಿ ಹಲವು ಗಲಾಟೆಗಳು ನಡೆದಿದ್ದವು. ಇದೀಗ ಮತ್ತೂಮ್ಮೆ ಕಾಲೇಜಿನಲ್ಲಿ ಗಲಾಟೆ ನಡೆದಿದ್ದು, ಯೂನಿವರ್ಸಿಟಿಯ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ರವರು ನೀಡಿದ ದೂರಿನ ಅನ್ವಯ ಅಲಯನ್ಸ್ ಯೂನಿವರ್ಸಿಟಿ ಒಳಗೆ ಶಸ್ತ್ರಾಸ್ತ್ರಗಳನ್ನ ಹಿಡಿದು ಅಕ್ರಮ ಪ್ರವೇಶ ಮಾಡಿದ ಮಧುಕರ್, ಸ್ವರ್ಣಲತಾ, ರವಿವಿಕುಮಾರ್, ಪದ್ಮನಾಭ್, ಮೋಹನ್, ಪೊಣಚ್ಚ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಇಂಡಿಯನ್ ಆಮ್ಸ್ì ಆಕ್ಟ್ 1959(25)ರ ಅಡಿ ಪ್ರಕರಣವನ್ನ ದಾಖಲಿಸಿಕೊಂಡು 1 ಪಿಸ್ತೂಲ್, 4 ಬಂದೂಕು, 20 ಜೀವಂತ ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.