ಹೊದಲ – ಅರಳಾಪುರ ಗ್ರಾಮ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಮಲ್ಲಿಕಾ ರಾಘವೇಂದ್ರ ಅವಿರೋಧ ಆಯ್ಕೆ
Team Udayavani, Sep 16, 2022, 4:50 PM IST
ತೀರ್ಥಹಳ್ಳಿ: ಹೊದಲ ಅರಳಾಪುರ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಮೌಖಿಕ ಒಪ್ಪಂದದಂತೆ ಅನಿತಾ ಶ್ರೀದರ್ ಅವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತೀರ್ಥಹಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಮಲ್ಲಿಕಾ ರಾಘವೇಂದ್ರ ಅವರು ಇಂದು (ಸೆ.16) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕಾರ್ಯಪಾಲಕ ಅಭಿಯಂತರ ಅಣ್ಣಪ್ಪ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿ, ಮಲ್ಲಿಕಾ ರಾಘವೇಂದ್ರ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿ ಮಲ್ಲಿಕಾ ರಾಘವೇಂದ್ರ ಅವರನ್ನು ಉಪಾಧ್ಯಕ್ಷರಾಗಿ ಘೋಷಣೆ ಮಾಡಿದರು.
ನಂತರ ನಡೆದ ಸಮಾರಂಭದಲ್ಲಿ ಮತನಾಡಿದ ಮಲ್ಲಿಕಾ ರಾಘವೇಂದ್ರ, ಸಭೆಯಲ್ಲಿ ಭಾಗವಹಿಸಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ಸರ್ವರ ಸಲಹೆ ಸಹಕಾರವನ್ನು ಬಯಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷೆ ಅಂಬಿಕಾ ಸಂತೋಷ್, ಸದಸ್ಯರಾದ ಕವಿತಾ ಶ್ರೀದರ್, ಅನಿತಾ ಶ್ರೀದರ್, ಹೊದಲ ದಿನೇಶ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಶೇಖರ ಹೆಗ್ಡೆ, ವಿಶ್ವನಾಥ ಪ್ರಭು, ನಗರ ಬಿಜೆಪಿ ಯುವಮೋರ್ಚಾ ಅದ್ಯಕ್ಷ ಸಂತೋಷ್, ರಾಘವೇಂದ್ರ ಬದನೇಹಿತ್ಲು, ಆರ್ಯ ಈಡಿಗ ಸಮಾಜದ ನಿರ್ದೇಶಕರಾದ ತಲವಡಗ ಗಂಗಾಧರ್, ನಾಗಭೂಷಣ್ ಹೊದಲ, ಉದಯ ಆಚಾರ್ಯ, ಶ್ರೀದರ್ ಹುಣಿಸೇಬೈಲು, ಬದನೇಹಿತ್ಲು ನಾಗರಾಜ್, ಗಂಗಾಧರ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B. S. Yediyurappa: ವಿಜಯೇಂದ್ರ ಬೆಳವಣಿಗೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ
BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ
MUST WATCH
ಹೊಸ ಸೇರ್ಪಡೆ
Lokayukta police: ಮುಡಾ ಮಾಜಿ ಆಯುಕ್ತ ನಟೇಶ್ ವಿಚಾರಣೆ
ಯುದ್ಧ ಸನ್ನದ್ಧರಾಗಿ: ನಾಗರಿಕರಿಗೆ ಸ್ವೀಡನ್, ಫಿನ್ ಲ್ಯಾಂಡ್ ಎಚ್ಚರಿಕೆ!
BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.