ಗಜಪಡೆ, ಅಶ್ವಪಡೆಗೆ 2ನೇ ಹಂತದ ಸಿಡಿಮದ್ದು ತಾಲೀಮು
Team Udayavani, Sep 16, 2022, 9:45 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಮತ್ತು ಅಶ್ವಪಡೆಗೆ 2ನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ನಡೆಯಿತು.
ನಗರದ ವಸ್ತುಪ್ರದರ್ಶನ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಹಾಗೂ 41 ಕುದುರೆಗಳ ಬಲವಿರುವ ಅಶ್ವಪಡೆಗೆ ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಎಂದಿನಂತೆ ಧನಂಜಯ, ಹೊಸ ಆನೆ ಪಾರ್ಥಸಾರಥಿ ಕೊಂಚ ಬೆದರಿದರೆ, ಭೀಮ 7 ಫಿರಂಗಿಗಳಿಂದ ಮೂರು ಸುತ್ತು 21 ಸಿಡಿಮದ್ದಿನಿಂದ ಹೊರಹೊಮ್ಮಿದ 105.3 ಡೆಸಿಬಲ್‌ನಷ್ಟು ಶಬ್ದಕ್ಕೆ ಒಂದಿಷ್ಟೂ ಬೆದರದೆ ನಿರ್ಭೀತಿಯಿಂದ ವರ್ತಿಸುವ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದ.
ಸೆ.12ರಂದು ಅರಮನೆ ಕೋಟೆ ಮಾರಮ್ಮ ದೇವಾಲಯ ಬಳಿಯ ಪಾರ್ಕಿಂಗ್‌ನಲ್ಲಿ ನಡೆದ ಮೊದಲ ಹಂತದ ಸಿಡಿಮದ್ದು ತಾಲೀಮಿನಲ್ಲಿ ಅರ್ಜುನ, ಅಭಿಮನ್ಯು, ಗೋಪಾಲಸ್ವಾಮಿ, ಮಹೇಂದ್ರ, ಗೋಪಿ, ಹೆಣ್ಣಾನೆಗಳಾದ ಚೈತ್ರ, ಕಾವೇರಿ ಆನೆಗಳು ಭಾರಿ ಶಬ್ದಕ್ಕೆ ಬೆಚ್ಚದೆ ಉತ್ತಮ ಪ್ರದರ್ಶನ ನೀಡಿದರೆ ಭೀಮ, ಧನಂಜಯ, ಸುಗ್ರೀವ, ಪಾರ್ಥಸಾರಥಿ, ಶ್ರೀರಾಮ ಆನೆಗಳು ಬೆದಿದ್ದವು. ಆದರೆ ಶುಕ್ರವಾರ ನಡೆದ 2ನೇ ಹಂತದ ತಾಲೀಮಿನಲ್ಲಿ ಭೀಮ, ಶ್ರೀರಾಮ ಮತ್ತು ಸುಗ್ರೀವ ಉತ್ತಮ ಪ್ರದರ್ಶನ ನೀಡಿದವು. ಈ ಮೂಲಕ ಧನಂಜಯ ಮತ್ತು ಪಾರ್ಥಸಾರಥಿ ಹೊರತಾಗಿ ಎಲ್ಲಾ ಆನೆಗಳು ಭಾರಿ ಶಬ್ದಕ್ಕೆ ಹೊಂದಿಕೊಂಡಿರುವುದು ಕಂಡುಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.